ಸೋಲೊಪ್ಪಿಕೊಂಡ ಟ್ರಂಪ್‌; ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರ್ಧಾರ!

ಅಮೆರಿಕಾ ಚುನಾವಣೆಯಲ್ಲಿ ಸೋತರೂ ತಮ್ಮ ಸೋಲನು ಒಪ್ಪಿಕೊಳ್ಳದ ಡೊನಾಲ್ಡ್‌ ಟ್ರಂಪ್‌, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜೋ ಬಿಡೆನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೂ, ತಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಮತ್ತೆ ಮೇಲುಗೈ ಸಾಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಚುನಾವಣೆಯು ಅಕ್ರಮವಾಗಿ ನಡೆದಿದೆ ಎಂದು ಮತದಾರರ ವಂಚನೆ ಮತ್ತು ಚುನಾವಣಾ ದುಷ್ಕೃತ್ಯಗಳಿಗೆ ಸಂಬಂಧಿಸಿದ ಹಲವು ಮೊಕದ್ದಮೆಗಳನ್ನು ಅವರು ದಾಖಲಿಸಿದ್ದರು. ಅವುಗಳಲ್ಲಿ ಹಲವನ್ನು ನ್ಯಾಯಾಲಯ ವಜಾಗೊಳಿಸಿದೆ.

ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲು ಟ್ರಂಪ್‌ ಆಡಳಿತ ಸಿದ್ದವಾಗಿದೆ ಎಂದು ಬಿಡೆನ್‌ಗೆ ಜನರಲ್‌ ಸರ್ವೀಸಸ್‌ ಅಡ್ಮಿನಿಸ್ಟ್ರೇಟರ್ (ಜಿಎಸ್‌ಎ)ಯ ಎಮಿಲಿ ಮರ್ಫಿ ಪತ್ರ ಬರೆದಿದ್ದಾರೆ.

“ಕಾನೂನು ಮತ್ತು ಲಭ್ಯವಿರುವ ಸಂಗತಿಗಳ ಆಧಾರದ ಮೇಲೆ ನಾನು ಸ್ವತಂತ್ರವಾಗಿ ನನ್ನ ನಿರ್ಧಾರಕ್ಕೆ ಬಂದಿದ್ದೇನೆ. ಶ್ವೇತಭವನ ಅಥವಾ ಜಿಎಸ್ಎಯಲ್ಲಿ ಕೆಲಸ ಮಾಡುವವರು ಸೇರಿದಂತೆ ಯಾವುದೇ ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಯಿಂದ ನಾನು ನೇರವಾಗಿ ಅಥವಾ ಪರೋಕ್ಷವಾಗಿ ಒತ್ತಡಕ್ಕೆ ಒಳಗಾಗಲಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ವಿಳಂಬ ಮಾಡಲು ನನಗೆ ಯಾವುದೇ ನಿರ್ದೇಶನ ಸಿಗಲಿಲ್ಲ. ನನ್ನ ದೃಢನಿಶ್ಚಯದಿಂದ ಇದ್ದೆನೇ, ನಾನು ಅಧಿಕಾರ ಹಸ್ತಾರಕ್ಕೆ ನಿರ್ಧರಿಸಿದ್ದೇನೆ” ಎಂದು ಮರ್ಫಿ ಹೇಳಿದ್ದಾರೆ.

ಮರ್ಫಿ ಪತ್ರ ಬರೆದ ನಂತರ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

“ಮರ್ಫಿಗೆ ಕಿರುಕುಳ, ಬೆದರಿಕೆ ಮತ್ತು ನಿಂದನೆ ಮಾಡಲಾಗಿದೆ. ಇದು ಆಕೆ, ಅಕೆಯ ಕುಟುಂಬ ಅಥವಾ ಜಿಎಸ್ಎ ಉದ್ಯೋಗಿಗಳ ಮೇಲೆ ಇಂತಹ ಕಿರುಕುಳ ಆಗುವುದನ್ನು ನೋಡಲು ನಾನು ಬಯಸುವುದಿಲ್ಲ. ನಮ್ಮ ಹೋರಾಟವು ಬಲವಾಗಿ ಮುಂದುವರಿಯುತ್ತದೆ, ನಾವು ಉತ್ತಮ ಹೋರಾಟವನ್ನು ಮುಂದುವರಿಸುತ್ತೇವೆ ಮತ್ತು ನಾವು ಮೇಲುಗೈ ಸಾಧಿಸುತ್ತೇವೆ ಎಂದು ನಾನು ನಂಬುತ್ತೇನೆ!” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

“ಅದೇನೇ ಇದ್ದರೂ, ನಮ್ಮ ದೇಶದ ಹಿತದೃಷ್ಟಿಯಿಂದ, ಆರಂಭಿಕ ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕೆಂಬುದನ್ನು ಎಮಿಲಿ ಮತ್ತು ಅವರ ತಂಡವು ಮಾಡಬೇಕೆಂದು ನಾನು ಶಿಫಾರಸು ಮಾಡುತ್ತಿದ್ದೇನೆ. ಅದೇ ರೀತಿ ಮಾಡಲು ನನ್ನ ತಂಡಕ್ಕೆ ಹೇಳಿದ್ದೇನೆ” ಎಂದು ಟ್ರಂಪ್‌ ಹೇಳಿದ್ದಾರೆ.

ಒಂದು ಹೇಳಿಕೆಯಲ್ಲಿ, ಕಾರ್ಯನಿರ್ವಾಹಕ ನಿರ್ದೇಶಕ ಯೋಹನ್ನೆಸ್ ಅಬ್ರಹಾಂ ಅವರು ಅಧ್ಯಕ್ಷ-ಚುನಾಯಿತ ಬಿಡೆನ್ ಮತ್ತು ಉಪಾಧ್ಯಕ್ಷ-ಚುನಾಯಿತೆ ಹ್ಯಾರಿಸ್ ಅವರನ್ನು ಚುನಾವಣೆಯ ಸ್ಪಷ್ಟ ವಿಜೇತರು ಎಂದು ಖಚಿತಪಡಿಸಿದ್ದಾರೆ. ನಾವು ಅವರಿಗೆ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸುತ್ತೇವೆ. ಅಧಿಕಾರವನ್ನು ಸುಗಮ ಮತ್ತು ಶಾಂತಿಯುತವಾಗಿ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಟ್ರಂಪ್ ಎಂದರೆ ಟ್ರಂಪ್ ಮಾತ್ರವಲ್ಲ! ಅಮೆರಿಕಾ ಗೆಲುವು ಮತ್ತು ಸೋಲಿನ ಕಂದಕಗಳೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights