ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?

“ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು. ”
“ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ.”

ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿನ ಬಿಕ್ಕಟ್ಟು/ ಭಿನ್ನಾಭಿಪ್ರಾಯದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿವೆ. ಆದಾಗ್ಯೂ, ಉಳಿದಿರುವುದು ಶಿವಸೇನೆ, ಅಥವಾ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅಥವಾ ಕಾಂಗ್ರೆಸ್ ಮಾಡಿದ ವಿವಾದಾತ್ಮಕ ಹೇಳಿಕೆಗಳು ಮಹಾರಾಷ್ಟ್ರ ಜನರಿಗೆ ಏನನ್ನು ಅರ್ಥೈಸುತ್ತದೆ.

ಮಹಾರಾಷ್ಟ್ರ ರಾಜಕೀಯದ ಇತ್ತೀಚೆಗಿನ ಟೈಮ್‌ಲೈನ್‌ ಹೀಗಿದೆ:

  • ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಜೂನ್ 14 ರ ಸೋಮವಾರ ಕಾಂಗ್ರೆಸ್ 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
  • ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, “ಅವರು ಜನರ ದುಖಃಗಳನ್ನು ಪರಿಹರಿಸದೇ ಚುನಾವಣೆಯಲ್ಲಿ ಸ್ಪರ್ಧಿಸುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಜನರು “ಚಪ್ಪಲಿಗಳಿಂದ ಹೊಡೆಯುತ್ತಾರೆ” ಎಂದು ಹೇಳಿದ್ದಾರೆ.
  • ಮತ್ತೊಂದೆಡೆ, 175 ಕೋಟಿ ರೂ.ಗಳ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರು, ತಮ್ಮಂಥಹ ಶಾಸಕರನ್ನು ಕೇಂದ್ರದ ಏಜೆನ್ಸಿಗಳಿಂದ ರಕ್ಷಿಸಲು ಶಿವಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಕೋರಿ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.
  • ಠಾಕ್ರೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿದ್ದಾರೆ.
  • ಠಾಕ್ರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು.
  • ಶರದ್ ಪವಾರ್ ದೆಹಲಿಗೆ ತೆರಳಿದ್ದಾರೆ.

ಈ ಘಟನೆಗಳು ಮಹಾರಾಷ್ಟ್ರ ಸರ್ಕಾರದೊಳಗಿನ ಅಸ್ಥಿರತೆಯನ್ನು ಖಾತ್ರಿಪಡುತ್ತವೆ ಮತ್ತು ಶಿವಸೇನೆಯನ್ನು ಅದರ ಪ್ರಸ್ತುತ ಮೈತ್ರಿಗಳಿಂದ ಬೇರ್ಪಡಿಸಲು ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ನಂತರ, ಪವಾರ್ ದೆಹಲಿಗೆ ಬಂದಿದ್ದು ಬಿಜೆಪಿಗರನ್ನು ಭೇಟಿಯಾಗಲು ಅಲ್ಲ, ವಿರೋಧ ಪಕ್ಷದ ನಾಯಕರು ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಲು.

  • ಎಂವಿಎ ಸರ್ಕಾರ ತನ್ನ ಐದು ವರ್ಷಗಳನ್ನು ಪೂರ್ಣಗೊಳಿಸಲಿದೆ ಎಂದು ಸಂಜಯ್ ರಾವತ್‌ ಹೇಳಿದ್ದಾರೆ.
  • ಅವರು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಾವು ಹೇಳಿದ್ದರೂ, ಎಂವಿಎ ಸರ್ಕಾರಕ್ಕೆ ಕಾಂಗ್ರೆಸ್ ನಿಂದ ಯಾವುದೇ ಅಡೆತಡೆಗಳನ್ನು ನೀಡುವುದಿಲ್ಲ ಎಂದು ನಾನಾ ಪಟೋಲ್ ಭರವಸೆ ನೀಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಬಹಳ ಸಮಯವಿದ್ದರೂ, ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಏಕೆ ಆಲೋಚನೆಗಳನ್ನು ನಡೆಸುತ್ತಿವೆ? ಇಂತಹ ಸಂದರ್ಭದಲ್ಲಿಯೇ ಪಕ್ಷಗಳ ಒಕ್ಕೂಟ ಮತ್ತು ರಾಜಕೀಯದ ನಡುವೆ ವೈರುಧ್ಯಗಳು ಉದ್ಭವಿಸುವುದು.

ಮುಂಬರುವ ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಹಲವಾರು ರಾಜಕಾರಣಿಗಳು ಟೀಕೆಗಳನ್ನು ಎದುರಿಸುತ್ತವೆ. ಅದಕ್ಕಾಗಿ ಇದು ಹೆಚ್ಚಿನ ಭದ್ರತೆಯನ್ನು ಪಡೆಯುವ ಪ್ರಯತ್ನವಾಗಿದೆ ಎಂದು ಹಿರಿಯ ಪತ್ರಕರ್ತ ಅಭಯ್ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹಿರಿಯ ಅಧಿಕಾರಿಗಳ ಕಿರುಕುಳ: ಮಹಾರಾಷ್ಟ್ರ ‘ಲೇಡಿ ಸಿಗಂ’ ದೀಪಾಲಿ ಚವಾಣ್ ಆತ್ಮಹತ್ಯೆ!

ಮೋದಿ ಮತ್ತು ರಾಜ್ಯಪಾಲ ಕೊಶಿಯಾರಿಯವರನ್ನು ಭೇಟಿಯಾದ ನಂತರ, ಠಾಕ್ರೆ ತಮ್ಮ ಪಕ್ಷಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಆದ್ದರಿಂದ, ಚುನಾವಣೆಯ ಸಮಯದಲ್ಲಿ ಶಿವಸೇನೆ ಸೀಟು ಹಂಚಿಕೆ ವಿಷಯದಲ್ಲಿ ಯಾವುದೇ ಒತ್ತಡವನ್ನು ಎದುರಿಸುವುದಿಲ್ಲ.

ಏತನ್ಮಧ್ಯೆ, ಕಾಂಗ್ರೆಸ್ ಕೂಡ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ತನ್ನ ನೆಲೆಯನ್ನು ಪ್ರದರ್ಶಿಸಲು ಮುಂದಾಗಿದೆ. ಇದೆಲ್ಲದರ ನಡುವೆ, ಎನ್‌ಸಿಪಿ ಪಕ್ಷವು ಗ್ರಾಮೀಣ ಮಹಾರಾಷ್ಟ್ರದಲ್ಲಿ ತನ್ನ ಹೆಜ್ಜೆಗುರುತನ್ನು ಸ್ಥಾಪಿಸಲು ಪ್ರಾರಂಭಿಸಿದೆ.

ಏಕಾಂಗಿಯಾಗಿ ಸ್ಪರ್ಧಿಸುವ ಆಯ್ಕೆಯನ್ನು ಪಟೋಲ್ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಈ ಬಗ್ಗೆ ಏನನ್ನೂ ಹೇಳಿಲ್ಲ. ಇದು ಮುಂದಿನ ದಿನಗಳಲ್ಲಿ ವಿಷಯಗಳು ಕೈತಪ್ಪುವಂತಿದ್ದರೆ ನಿಯಂತ್ರಣ ಮತ್ತು ತೀರ್ಮಾನ ತೆಗೆದುಕೊಳ್ಳಲು ನೆರವಾಗುತ್ತದೆ.

“ಶಿವಸೇನೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತನಾಡಬಹುದು. ಆದರೆ ಠಾಕ್ರೆ ಅವರು ಅಂತಹ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳುವುದಿಲ್ಲ. ಬಿಜೆಪಿ-ಸೇನಾ ಸರ್ಕಾರದಲ್ಲಿಯೂ ಬಿರುಕುಗಳು, ಭಿನ್ನಾಭಿಪ್ರಾಯಗಳು ಇದ್ದವು. ಆದರೂ ಅವರು ತಮ್ಮ ಐದು ವರ್ಷಗಳನ್ನು ಪೂರೈಸಿದ್ದಾರೆ. ಒಬ್ಬರ ಚೌಕಾಶಿ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅಂತಹ ಒತ್ತಡ ತಂತ್ರಗಳು ಸುಲಭವಲ್ಲ. ಅದು ಕಾಂಗ್ರೆಸ್-ಎನ್‌ಸಿಪಿ ಸೇನಾ ಅಥವಾ ಬಿಜೆಪಿ ಆಗಿರಬಹುದು” ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್ ಬಾಲ್ ಅವರ ಹೇಳಿದ್ದಾರೆ.

ವಿಷಯವೆಂದರೆ ಸಮ್ಮಿಶ್ರ ಸರ್ಕಾರವು ತನ್ನ ಕಾರ್ಯವನ್ನು ಮುಂದುವರೆಸುತ್ತಿರುವಾಗಲೂ, ಪಕ್ಷಗಳು ತಮ್ಮ ಅಸ್ತಿತ್ವದ ಮೇಲೆ ಹೆಚ್ಚುತ್ತಿರುವ ಪ್ರಭಾವವನ್ನು ಉಳಿಸಿಕೊಳ್ಳಬೇಕು.

ಮೂಲ: ದಿ ಕ್ವಿಂಟ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ?: ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧೆಸುವ ಬಗ್ಗೆ ಹೇಳಿದ ನಂತರ ರಾಜಕೀಯ ಸಂಚಲನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights