ರೈತರ ಪ್ರತಿಭಟನೆಗೆ ಮಣಿದ ಸರ್ಕಾರ; ದೆಹಲಿ ಚಲೋದ 10 ಮುಖ್ಯಾಂಶಗಳು!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಗಳ ವಿರುದ್ಧ ಸಿಡಿದೆದ್ದಿರುವ ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ದೆಹಲಿ ಪ್ರತಿಭಟನಾ ರ್ಯಾಲಿ ಹೊರಟಿರುವ ರೈತರು ನಿನ್ನೆ ದೆಹಲಿಯನ್ನು ಸಮೀಸಿದ್ದರು. ರೈತರನ್ನು ಹರಿಯಾಣದಲ್ಲಿ ತಡೆದ ಪೊಲೀಸರು ಟೀಯರ್ ಗ್ಯಾಸ್‌ ಮತ್ತು ನೀರಿನ ಪಿರಂಗಿಗಳನ್ನು ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದರು. ಪೊಲೀಸರ ಪ್ರಯತ್ನ ವಿಫಲವಾದ ಬಳಿಕ ದೆಹಲಿ ಪ್ರವೇಶಿಸಬಹುದು ಎಂದು ಹರಿಯಾಣ ಗಡಿಯಲ್ಲಿ ಪೊಲೀಸರು ಘೋಷಿಸಿದರು. ಆದರೂ, ರೈತರ ಮೇಲೆ ಅಶ್ರುವಾಯು ಮತ್ತು ನೀರಿನ ಪಿರಂಗಗಳ ದಾಳಿ ಮುಂದುವರೆದಿತ್ತು.

ರೈತರ ಗುಂಪುಗಳು, ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ಸಾಗಿಸುವ ಟ್ರಾಕ್ಟರುಗಳೊಂದಿಗೆ ನಡೆದುಕೊಂಡು ದೆಹಲಿಗೆ ಹೊರಟಿರುವ ರೈತರು ಪೊಲೀಸರ ಬ್ಯಾರಿಕೇಡ್‌ಗಳನ್ನು ಧಿಕ್ಕರಿಸಿ,  ಮುಳ್ಳುತಂತಿಗಳನ್ನು ದಾಟಿ ಹೊರಟಿದ್ದಾರೆ. ನಾನಾ ರೀತಿಯ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ರೈತರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಮಾತುಕತೆಗೆ ಬರಬೇಕೆಂದು ಆಗ್ರಹಿಸಿದ್ದಾರೆ.

ರೈತರ ಪ್ರತಿಭಟನೆಯ ಟಾಪ್ 10 ಮಾಹಿತಿಗಳು ಇಲ್ಲಿವೆ:

  • ರೈತರ “ದೆಹಲಿ ಚಲೋ” ಪ್ರತಿಭಟನೆಯಲ್ಲಿ ರೈತರು ರಾಜಧಾನಿಗೆ ಪ್ರವೇಶಿಸದಂತೆ ತಡೆಯಲು ಮರಳು ತುಂಬಿದ ಟ್ರಕ್‌ಗಳು ಮತ್ತು ಮುಳ್ಳುತಂತಿ ಬ್ಯಾರಿಕೇಡ್‌ಗಳನ್ನು ಹರಿಯಾಣ-ದೆಹಲಿಯ ಗಡಿಯಲ್ಲಿ ಇರಿಸಲಾಗಿದೆ.
  • ದೆಹಲಿಯ ಹೊರವಲಯದಲ್ಲಿರುವ ಕೆಲವು ಸ್ಥಳಗಳಲ್ಲಿ ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಗುಂಡು ಹಾರಿಸಿದರು ಮತ್ತು ನಗರಕ್ಕೆ ಬರುವ ರೈತರನ್ನು ತಡೆಯಲು ಪ್ರವೇಶ ಕೇಂದ್ರಗಳಲ್ಲಿ ನೀರಿನ ಫಿರಂಗಿಗಳನ್ನು ಬಳಸಿದರು. ದೊಡ್ಡ ಗುಂಪುಗಳು ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಹೋಗಲು ಯತ್ನಿಸಿದರು.
  • ಪ್ರತಿಭಟನಾಕಾರರನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಕೊರೊನಾ ವೈರಸ್‌ ನಿಯಮಗಳನ್ನು ಉಲ್ಲೇಖಿಸಿದರು. “ನಾವು ದೆಹಲಿಯ ನಿವಾಸಿಗಳಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ರೈತರು ದೆಹಲಿಗೆ ಪ್ರವೇಶಿಸಲು ನಾವು ಅನುಮತಿಸುವುದಿಲ್ಲ” ಎಂದ ದೆಹಲಿ ಪೊಲೀಸ್ ಅಧಿಕಾರಿ ಗೌರವ್ ಶರ್ಮಾ, ಗಡಿ ಭಾಗದಲ್ಲಿ ಟಿಯರ್‌ ಗ್ಯಾಸ್‌ ಪ್ರಯೋಗಿಸಲು ಆದೇಶಿಸಿದರು.
  • “ಬಿಹಾರ ಚುನಾವಣೆಯ ಸಂದರ್ಭದಲ್ಲಿ? ಸರ್ಕಾರ ಕೃಷಿ ಕಾನೂನುಗಳನ್ನು ಅಂಗೀಕರಿಸಲು ಸಂಸತ್ತನ್ನು ನಡೆಸಿದ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಗಳು ನೆನಪಿರಲಿಲ್ಲವೇ?” ಕೊರೊನಾ ಮಾರ್ಗಸೂಚಿಗಳು ರೈತರಿಗೆ ಮಾತ್ರ ಏಕೆ ಅನ್ವಯವಾಗುತ್ತವೆ ಎಂದು ರೈತ ಮುಖಂಡರು ಗಡಿಯಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಕಾನೂನು ಕೆಟ್ಟದಾಗಿವೆ, ರೈತ ವಿರೋಧಿಯಾಗಿವೆ. ನಾವು ಹೆದರುವುದಿಲ್ಲ, ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ರೈತರು ಹೇಳಿದರು.
  • ಪ್ರತಿಭಟನಾ ನಿರತ ರೈತರನ್ನು ಬಂಧಿಸಲು ನಗರದ ಒಂಬತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ “ಜೈಲುಗಳಾಗಿ” ಪರಿವರ್ತಿಸಬೇಕೆಂದು ದೆಹಲಿ ಪೊಲೀಸರ ಮನವಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ತಿರಸ್ಕರಿಸಿದೆ.
  • ಗಡಿ ಪೋಸ್ಟ್‌ಗಳಲ್ಲಿ ವಾಹನಗಳನ್ನು ಪರಿಶೀಲಿಸಲಾಗಿದ್ದರಿಂದ ಸಂಚಾರ ನಿಧಾನವಾಯಿತು. ದೆಹಲಿಗೆ ವಾಹನ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ನಿನ್ನೆ, ಗುರಗಾಂವ್ ಮತ್ತು ದೆಹಲಿ ನಡುವಿನ ಹೆದ್ದಾರಿಯಲ್ಲಿ ಭಾರಿ ಜಾಮ್ ಸಂಭವಿಸಿತ್ತು.
  • ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ರಾಜಸ್ಥಾನ, ಕೇರಳ ಮತ್ತು ಪಂಜಾಬ್‌ ಆರು ರಾಜ್ಯಗಳ ರೈತರು ದೆಹಲಿಗೆ ತೆರಳುತ್ತಿದ್ದಾರೆ. ಎಲ್ಲರೂ ದೆಹಲಿಯ ಹೃದಯಭಾಗದಲ್ಲಿರುವ ರಾಮ್ ಲೀಲಾ ಮೈದಾನದಲ್ಲಿ ಸೇರಲು ಉದ್ದೇಶಿಸಲಾಗಿದೆ. 500 ಸಂಘಟನೆಗಳು ಇದರ ಭಾಗವೆಂದು ರೈತರು ಹೇಳಿದ್ದಾರೆ. ಏಳು ರೈತ ಸಂಘಟನೆಗಳನ್ನು ಒಳಗೊಂಡ ಸನ್ಯುಕ್ಟ್ ಕಿಸಾನ್ ಮೋರ್ಚಾ ಒಕ್ಕೂಟವು ಪ್ರತಿಭಟನಾ ಸ್ಥಳದಲ್ಲಿ ಸಭೆ ನಡೆಸಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.
  • ನಿನ್ನೆ, ಹರಿಯಾಣದ ಹೊರಭಾಗಲ್ಲಿರುವ ಸೇತುವೆಯೊಂದರಲ್ಲಿ ರೈತರನ್ನು ಹಿಂದೆಕ್ಕೆ ಕಳಿಸಲು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಿಸಿದರು,. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುತು. ರೈತರು ಬ್ಯಾರಿಕೇಡ್‌ಗಳನ್ನು ಹಾರಿ, ಸೇತುವೆಯ ಮೇಲೆ ನಿಲ್ಲಿಸಿದ್ದ ವಾಹನಗಳನ್ನು ತಳ್ಳಿ ಹರಿಯಾಣ ದಾಟಿದರು. ಮಧ್ಯರಾತ್ರಿಯಲ್ಲಿಯೂ ಸೋನಿಪತ್‌ನಲ್ಲಿ ರೈತರ ಮೇಲೆ ನೀರಿನ ಫಿರಂಗಿಗಳನ್ನು ಮತ್ತೆ ಬಳಸಲಾಯಿತು.
  • ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸರ್ಕಾರವು ರೈತರನ್ನು ತಡೆಯಲು ಭಾರಿ ಬಲವನ್ನು ಬಳಸಿತು. ಅಲ್ಲದೆ, ಪಂಜಾಬ್‌ನ ಅಮರೀಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಯಾಣದ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು. ಪಂಜಾಬ್‌ ಸರ್ಕಾರ ಕೊರೊನಾ ಸಂದರ್ಭದಲ್ಲಿಯೂ ಪ್ರತಿಭಟನೆಗಳನ್ನು ಪ್ರಚೋದಿಸುತ್ತಿದೆ ಮತ್ತು “ಅಗ್ಗದ ರಾಜಕೀಯ” ಮಾಡುತ್ತಿದೆ ಎಂದು ಆರೋಪಸಿದರು.
  • ಬೆಳಗ್ಗೆಯಿಂದ ಹರಿಯಾಣ ಗಡಿಯಲ್ಲಿ ಪೊಲೀಸರೊಂದಿಗೆ ತಿಕ್ಕಾಟ ನಡೆಸುತ್ತಿರುವ ರೈತರ ಪ್ರತಿಭಟನೆಯಿಂದ ಕಂಗಾಲಾಗಿರುವ ಪೊಲೀಸರು, ರೈತರು ದೆಹಲಿಗೆ ಪ್ರವೇಶಿಸಲು ಅನುಮತಿಸಿದ್ದಾರೆ. ಆದರೂ ಟಿಯರ್ ಗ್ಯಾಸ್‌, ನೀರಿನ ಫಿರಂಗಿಗಳ ದಾಳಿ ನಡೆದೇ ಇದೆ.

ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . .

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights