ಭಾರತದಲ್ಲಿ 72,049 ಹೊಸ ಕೊರೊನಾ ಕೇಸ್ : 67 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 72,049 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 986 ಸೋಂಕಿತರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 67 ಲಕ್ಷ ದಾಟಿದೆ.
ಒಟ್ಟು 67,57,132 ಪ್ರಕರಣಗಳಲ್ಲಿ 9,07,883 ಸಕ್ರಿಯ ಪ್ರಕರಣಗಳಿದ್ದರೆ, 57,44,694 ಜನ ಗುಣಮುಖರಾಗಿದ್ದಾರೆ. 1,04,555 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಂಗಳವಾರದ ವೇಳೆಗೆ ದೇಶದಲ್ಲಿ 56,62,490 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 47,43,467 ಮೀರಿದೆ. ಹೆಚ್ಚಿನ ಸಂಖ್ಯೆಯ ಚೇತರಿಕೆಗಳು ರಾಷ್ಟ್ರೀಯ ಚೇತರಿಕೆ ದರವನ್ನು ಶೇಕಡಾ 84.70 ಕ್ಕೆ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ -19 ನಿಂದ ಒಟ್ಟು 75,787 ಜನರು ಚೇತರಿಸಿಕೊಂಡು 24 ಗಂಟೆಗಳ ಅವಧಿಯಲ್ಲಿ ಬಿಡುಗಡೆಯಾಗಿದ್ದರೆ, ಮಂಗಳವಾರ 61,267 ಹೊಸ ಸೋಂಕುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಒಡಿಶಾ, ದೆಹಲಿ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ 10 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ.
24 ಗಂಟೆಗಳ ಅವಧಿಯಲ್ಲಿ ದಾಖಲಾದ 61,267 ಹೊಸ ಪ್ರಕರಣಗಳಲ್ಲಿ 75 ಪ್ರತಿಶತ 10 ರಾಜ್ಯಗಳಿಂದ ಬಂದಿದೆ ಎಂದು ಸಚಿವಾಲಯ ತಿಳಿಸಿದೆ.