ಮುಂಬೈ- ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ : ದೇಹ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ  32 ವರ್ಷದ ಮಹಿಳೆ ಮ್ಯಾನ್ ಹೋಲ್ ಗೆ ಬಿದ್ದು ಬರೋಬ್ಬರಿ 22 ಕಿ.ಮೀ ದೂರದಲ್ಲಿ ಶವವಾಗಿ ಪತ್ತೆಯಾದ ಘಟನೆ ಮುಂಬೈನ ಘಾಟ್ಕೋಪರ್ನಲ್ಲಿ ನಡೆದಿದೆ.

ಮುಂಬೈ ಮ್ಯಾನ್‌ಹೋಲ್‌ನಲ್ಲಿ ಬಿದ್ದ ಮಹಿಳೆ ಒಳಚರಂಡಿ ಮಾರ್ಗ ತಪ್ಪಿ ದೂರದಲ್ಲಿರುವ ಹಾಜಿ ಅಲಿಯ ಸಮುದ್ರದಲ್ಲಿ ಆಕೆಯ ದೇಹ ಪತ್ತೆಯಾಗಿದೆ. ಆಕೆಯ ದೇಹ ಒಳಚರಂಡಿ ಮಾರ್ಗಗಳ ಮೂಲಕ 22 ಕಿ.ಮೀ. ಕ್ರಮಿಸಿ ಹಾಜಿ ಅಲಿಯ ಸೇರಿದೆ. ಈ ಪ್ರದೇಶದಲ್ಲಿನ ಒಳಚರಂಡಿ ಮಾರ್ಗ 3 ಚೋಕ್‌ಪಾಯಿಂಟ್‌ಗಳನ್ನು ಹೊಂದಿದ್ದು ಅಲ್ಲಿ ದೇಹ ಸಿಲುಕಿಕೊಂಡಿದೆ. ಬಳಿಕ ಘಾಟ್‌ಕೋಪರ್‌ನಿಂದ ಹಾಜಿ ಅಲಿಯ ಕಡೆಗೆ ಹರಿದು ಹೋಗಿದೆ.

ಮುಂಬೈ ಮಿರರ್‌ನ ವರದಿಯ ಪ್ರಕಾರ, ಭಾರಿ ಮಳೆಯಾಗುವ ಭೀತಿಯಿಂದ ಶೀತಲ್ ದಮಾ ಅಕ್ಟೋಬರ್ 3 ರಂದು ತನ್ನ ಮಗನನ್ನು ಮನೆಯಲ್ಲಿ ಬಿಟ್ಟು ಆಚೆ ತೆರಳಿದ್ದರು. ಹಲವಾರು ಗಂಟೆಗಳ ನಂತರ ಅವಳು ಮನೆಗೆ ಹಿಂತಿರುಗಲಿಲ್ಲ. ಗಾಬರಿಗೊಂಡ ಆಕೆಯ ಕುಟುಂಬ ಶೋಧ ಕಾರ್ಯ ಪ್ರಾರಂಭಿಸಿದೆ. ಈ ವೇಳೆ ಅವಳ ಕೈಯಲ್ಲಿದ್ದ ಚೀಲ ಘಾಟ್ಕೋಪರ್ನ ತೆರೆದ ಮ್ಯಾನ್ಹೋಲ್ ಬಳಿ ಕಂಡುಬಂದಿದೆ.

ಅವಳು ಚರಂಡಿಗೆ ಬಿದ್ದಿರಬಹುದೆಂದು ಪೊಲೀಸರು ಶಂಕಿಸಿ ಹತ್ತಿರದ ಪ್ರದೇಶಗಳಾದ ಮಹೀಮ್, ಟ್ಯಾಂಡಿಯೊ, ಬಾಂದ್ರಾ-ಕುರ್ಲಾದಲ್ಲಿ ಶೋಧ ಪ್ರಾರಂಭಿಸಿದರು. 33 ಗಂಟೆಗಳ ನಂತರವೇ ಅಧಿಕಾರಿಗಳು ಆಕೆಯ ಶವವನ್ನು ಸಮುದ್ರದ ಹಾಜಿ ಅಲಿಯಲ್ಲಿ ಕಂಡುಕೊಂಡಿದ್ದಾರೆ. ಈ ಪ್ರದೇಶದಲ್ಲಿನ ಒಳಚರಂಡಿ ಮಾರ್ಗಗಳನ್ನು ವಿನ್ಯಾಸಗೊಳಿಸಲಾಗಿಲ್ಲವಾದ್ದರಿಂದ ಆಕೆಯ ದೇಹ ಘಾಟ್‌ಕೋಪರ್‌ನಿಂದ 22 ಕಿ.ಮೀ ಹರಿದು ಹೋಗಿದೆ. ಬಳಿಕ ಹಾಜಿ ಅಲಿಯಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಅದಾಗ್ಯೂ ಒಳಚರಂಡಿ ಮಾರ್ಗದ ಹರಿವು ಮಹೀಮ್ ಕಡೆಗೆ ಇದೆ. ವರ್ಲಿ ನುಲ್ಲಾ ಅಲ್ಲ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಆಕೆಯ ದೇಹ ಹಾಜಿ ಅಲಿಯ ಪತ್ತೆಯಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡಿದೆ. ಆದರೆ, ಶೀತಲ್ ದಮಾ ಅವರ ಶವಪರೀಕ್ಷೆಯ ನಂತರ ಆಕೆ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ದೃಢಪಡಿಸಲಾಗುತ್ತಿಲ್ಲ. ಹೀಗಾಗಿ ಆಕೆಯ ಸಾವಿಗೆ ಕಾರಣವೇನು ಎಂದು ನೋಡಲು ಪೊಲೀಸ್ ಅಧಿಕಾರಿಗಳು ಇನ್ನೂ ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights