ಇದು ನಿಜವಾಗಿಯೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗುವಿನ ಮೊದಲ ಚಿತ್ರವೇ?

ಸ್ಟಾರ್ ದಂಪತಿಗಳಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೋಮವಾರ(ಜ.11) ಮಧ್ಯಾಹ್ನ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ವಿರಾಟ್ ಕೊಹ್ಲಿ ತಮ್ಮ ಮಗುವಿನ ಆಗಮನದ ದೊಡ್ಡ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ: “ಈ ಮಧ್ಯಾಹ್ನ ನಾವು ಹೆಣ್ಣು ಮಗುವಿನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ರೋಮಾಂಚನವಾಗುತ್ತಿದೆ. ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಧನ್ಯವಾದಗಳು. ತಾಯಿ ಮತ್ತು ಮಗು ಇಬ್ಬರೂ ಉತ್ತಮವಾಗಿದ್ದಾರೆ ” ಎಂದು ಕೊಹ್ಲಿ ಪೋಸ್ಟ್ ಮಾಡಿದ್ದರು.

ಈ ಸುದ್ದಿ ಹೊರಬೀಳುತ್ತಿದ್ದಂತೆ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂತು. ಇದರ ಮಧ್ಯೆ ವಿರಾಟ್ ಅವರ ಸಹೋದರ ವಿಕಾಸ್ ಕೊಹ್ಲಿ ಕೂಡ ಹೃದಯಸ್ಪರ್ಶಿ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಕ್ಷಣಾರ್ಧದಲ್ಲಿ ಹಂಚಿಕೊಂಡಿದ್ದರು. ವಿಕಾಸ್ ಕೊಹ್ಲಿಗೆ ಶುಭಕೋರಿ ಚಿಕ್ಕ ಮಗುವಿನ ಪಾದಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದು ಅನುಷ್ಕಾ ಮಗುವಿನ ಮೊದಲ ಚಿತ್ರವೆಂದು ಹಲವಾರು ಜನರು ಭಾವಿಸಿದ್ದರು.

ಇದನ್ನು ಕಂಡು ಶುಭಕೋರಿದ ಅಭಿಮಾನಿಗಳು ಇದೇ ಕೋಹ್ಲಿ ಮತ್ತು ಅನುಷ್ಕಾ ಮಗು ಎಂದು ಭಾವಿಸಿದ್ದಾರೆ. ಮಾತ್ರವಲ್ಲ ಬೇಬಿಗೆ ‘ಬೇಬಿ ವಿರುಷ್ಕಾ’ ಎಂದು ನಿಕ್ ನೇಮ್ ಕೂಡ ಇಟ್ಟಿದ್ದರು.

ವಿಕಾಸ್ ಕೊಹ್ಲಿ ಹಂಚಿಕೊಂಡ ಫೋಟೋವನ್ನೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಹೆಣ್ಣು ಮಗು ಎಂದು ಹೆಚ್ಚು ಜನ ನಂಬಿದ್ದರಿಂದ ವಿಕಾಸ್ ಕೊಹ್ಲಿ ಸ್ವತಃ ಸ್ಪಷ್ಟೀಕರಣವನ್ನು ಕೊಟ್ಟು ಪೋಸ್ಟ್ ಮಾಡಿದ್ದಾರೆ. “ವಿರಾಟ್ ಮತ್ತು ಅನುಷ್ಕಾ ಅವರನ್ನು ಅಭಿನಂದಿಸಲು ನಾನು ನಿನ್ನೆ ಪೋಸ್ಟ್ ಮಾಡಿದ ಚಿತ್ರವು ನಕಲಿ ಚಿತ್ರವಾಗಿದೆ. ಇದು ಮಗುವಿನ ನಿಜವಾದ ಚಿತ್ರವಲ್ಲ” ಎಂದು ಅವರು ಬರೆದಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಅವರ ಕುಟುಂಬ ಮಗುವಿನ ಫೋಟೋ ಹಂಚಿಕೊಳ್ಳಲು ಅಭಿಮಾನಿಗಳು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಇದು ನಿಜವಾಗಿಯೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗುವಿನ ಮೊದಲ ಚಿತ್ರವೇ?

  • February 1, 2021 at 1:20 pm
    Permalink

    I’d like to thank you for the efforts you’ve put in penning
    this blog. I’m hoping to view the same high-grade
    blog posts by you in the future as well. In truth,
    your creative writing abilities has inspired me to get my
    own website now 😉

    Reply

Leave a Reply

Your email address will not be published.

Verified by MonsterInsights