ತೆಲುಗು ಉದ್ಯಮದ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ ರಿಯಲ್ ಹೀರೋ..

ಸೋನು ಸೂದ್ ತೆಲುಗು ಉದ್ಯಮದ ಬಗ್ಗೆ ಕೆಲವು ಕುತೂಹಲಕಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಿಯಲ್ ಹೀರೋ ತೆಲುಗು ಉದ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಬಾಲಿವುಡ್ ಆಗಿರಲಿ, ಕಾಲಿವುಡ್ ಆಗಿರಲಿ, ಯಾವುದೇ ಉದ್ಯಮವಾಗಲಿ, ತೆಲುಗು ಉದ್ಯಮ ನನ್ನ ನೆಚ್ಚಿನ ಉದ್ಯಮವಾಗಿದೆ. ಚಲನಚಿತ್ರಗಳಲ್ಲಿ ನಾನು ಏನನ್ನಾದರು ಕಲಿತದ್ದೇನೆಂದರೆ ಅದು ತೆಲುಗು ಉದ್ಯಮದಿಂದಲೇ. ಆದ್ದರಿಂದ ತೆಲುಗು ಚಿತ್ರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ” ತಿಳಿಸಿದ್ದಾರೆ.

ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿ ಪ್ರಖ್ಯಾತಿ ಪಡೆದ ನಟ ಸೋನು ಸೋದ್ ಅವರು ನಿಜ ಜೀವನದಲ್ಲಿ ಹೀರೋ ಆಗಿ ಈಗಾಗಲೇ ಅನೇಕರ ಮನಸ್ಸು ಗೆದ್ದಿದ್ದಾರೆ. ಲಾಕ್‌ಡೌನ್ ಘೋಷಣೆಯಾದಾಗಿನಿಂದ ಅವರು ಮಾಡಿದ ಸಾಮಾಜಿಕ ಕೆಲಸಗಳನ್ನು ಲೆಕ್ಕ ಹಾಕಿ ಹೇಳೋದು ಕಷ್ಟದ ಕೆಲಸವೇ. ಇನ್ನು ಕೆಲವರು ಸೋನು ಅವರು ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರೂ ಕೂಡ ಅವರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜನರಿಗೆ ಸಹಾಯ ಮಾಡೋದನ್ನು ಮುಂದುವರಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights