ವಾಸುಕಿ ವೈಭವ್ ಹಾಡಿಗೆ ಸಾಥ್ ಕೊಟ್ಟ ಸ್ಟಾರ್ಸ್ : ಭಾರೀ ಸದ್ದು ಮಾಡಿದ ‘ನೀನೇ ತಾಯಿ’ ಸಾಂಗ್

ಕೋವಿಡ್-19 ಎಲ್ಲೆಡೆ ತನ್ನ ಅಟ್ಟಹಾಸ ಮುಂದುವರೆಸುತ್ತಿದೆ. ಈ ಮಹಾಮಾರಿಯ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ಅವರು ಸುಂದರವಾದ ಹಾಡೊಂದನ್ನು ಹಾಡಿದ್ದಾರೆ. ಇದಕ್ಕೆ ಚಂದನವನದ ಸ್ಟಾರ್ಸ್ ಸಾಥ್ ಕೊಟ್ಟಿದ್ದಾರೆ.

ಹೌದು… ಕೊರೊನಾ ವಿರುದ್ಧ ನಗುತಲಿರುವ ಎಂಬ ಹೊಸ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರು ಸೇರಿದಂತೆ  ದಿಗ್ಗಜ ನಟ-ನಟಿಯರು ದನಿಗೂಡಿಸಿದ್ದಾರೆ. ಈ ಮೂಲಕ ಮನೆಯಲ್ಲೇ ನಗುತಲಿರೋಣ ಎಂಬ ಸಂದೇಶವನ್ನು ಜನರಿಗೆ ರವಾನಿಸಿದ್ದಾರೆ.

ದೇಶದ ಜನರೆಲ್ಲಾ ಲಾಕ್ ಡೌನ್ ನಲ್ಲಿ ಬಂಧಿಯಾಗಿದ್ದಾರೆ. ಈ ನಡುವೆ ಜನರ ಆತಂಕವನ್ನು ದೂರ ಮಾಡಿ ಹಾಡಿನ ಮೂಲಕ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ಚಿಂತೆ ದೂರ ಮಾಡಿ, ಭರವಸೆ  ಮೂಡಿಸುವ ಈ ಹಾಡನ್ನು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡಿಗೆ ರಮೇಶ್ ಅರವಿಂದ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಸಾಥ್ ಕೊಟ್ಟಿದ್ದಾರೆ.

ಇದರಲ್ಲಿ ನಟಿ ರಕ್ಷಿತಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಡಾಲಿ ಧನಂಜಯ್, ಶ್ರದ್ಧಾ, ಪ್ರಣೀತಾ, ಐಂದ್ರಿತಾ, ದಿಗಂತ್, ಪ್ರಜ್ವಲ್, ಚಿರಂಜೀವಿ ಸರ್ಜಾ, ಮೇಘನಾ, ಅನುಪಮಾ, ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಅನೇಕರು ಈ ಹಾಡಿಗೆ ಜೀವ ತುಂಬಿದ್ದಾರೆ. ಲಾಕ್‍ಡೌನ್‍ನಲ್ಲಿದ್ದರೂ ನಾವೆಲ್ಲರೂ ಎಂದೆಂದಿಗೂ ಒಂದೇ ಎನ್ನುತ್ತಾ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ಹಾಗೂ ಸೈನಿಕರಿಗೆ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ. ನಗುತಾ ಮನೆಯಲ್ಲೇ ಸುರಕ್ಷಿತರಾಗೋಣ ಎಂಬ ಸಂದೇಶ ಸಾರಿದ್ದಾರೆ.

https://www.instagram.com/puneethrajkumar.official/channel/?utm_source=ig_embed

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights