Lock sown : BSY ಸರಕಾರದ ಗಂಟೆಗೊಂದು ನಿರ್ಧಾರ, ಗೊಂದಲ ನಿಲುವು, ಜನರು ಪೇಚಿಗೆ..
ಕೊರೋನಾ ಸಮರದ ಅಂಗವಾಗಿ ದೇಶಾದ್ಯಂತ ಬೀಗ ಜಡಿಯಲಾಗಿದ್ದು, ಯಾವಾಗ ಯಾವ ಚಟುವಟಿಕೆ ಆರಂಭವಾಗುತ್ತದೆ ಎಂಬ ನಿಖರತೆ ಇಲ್ಲ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಂಟೆಗೊಂದು, ದಿನಕ್ಕೊಂಡು ನಿಯಮಗಳನ್ನು ಜಾರಿ ಮಾಡುತ್ತಿರುವುದು ಜನರ ಗೊಂದಲವನ್ನು ಹೆಚ್ಚಿಸಿದೆ.

ಶನಿವಾರ ರಾಜ್ಯ ಸರಕಾರ ಕೆಲವೇ ಗಂಟೆಗಳ ಅವಧಿಯಲ್ಲಿ ತನ್ನದೇ ನಿಲುವುಗಳನ್ನು ಬದಲಿಸಿತ್ತು. ಲಾಕ್ಡೌನ್ ನಡುವೆಯೂ ದ್ವಿಚಕ್ರ ವಾಹನ ಓಡಾಟಕ್ಕೆ ರಿಯಾಯ್ತಿ ನೀಡಿದ ರಾಜ್ಯ ಸರಕಾರ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್ ಪಡೆಯಿತು.
ಸಾರ್ವಜನಿಕರಿಂದ ತೀವ್ರವಾದ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಸಡಿಲಿಕೆಯನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದರು.ಈಗ ಕೇಂದ್ರ ಸರಕಾರ ಸಹ ಇದೇ ನಿಲುವು ತಾಳಿದೆ. ಏಪ್ರಿಲ್ 20ರಿಂಧ ಆನ್ಲೈನ್ ಮೂಲಕ ಎಲ್ಲ ಸರಂಜಾಮುಗಳನ್ನು ಮಾರಲು ಹಾಗೂ ಮನೆ ಮನೆಗೆ ತಲುಪಿಸಲು ಅವಕಾಶ ಕಲ್ಪಿಸುವುದಾಗಿ ಹೇಳಲಾಗಿತ್ತು.

ಆದರೆ ಭಾನುವಾರ ಮತ್ತೊಂದು ಆದೇಶ ಹೊರಡಿಸಿರುವ ಕೇಂದ್ರ ಸರಕಾರವು ಪೂರ್ವಾನುಮತಿಯ ಷರತ್ತನ್ನು ವಿಧಿಸುವ ಮೂಲಕ ಅವಶ್ಯಕವಲ್ಲದ ವಸ್ತುಗಳ ಸಾಗಾಟಕ್ಕೆ ಬ್ರೇಕ್ ಹಾಕಿದೆ. ಇದರಿಂದಾಗಿ ಜನರೂ ಸಹ ಗೊಂದಲಕ್ಕೀಡಾಗಿದ್ದಾರೆ. ಒಂದೆಡೆ ನಿಖರ ಮಾಹಿತಿಯ ಕೊರತೆ ಮತ್ತೊಂದೆಡೆ ಸರಕಾರಗಳು ತಿರುವು ಮುರುವಿನ ನೀತಿಯಿಂದಾಗಿ ಸಾರ್ವಜನಿಕರಿಗೂ ಸಾಕಷ್ಟು ಗಲಿಬಿಲಿ ಉಂಟಾಗಿದೆ.
ಕೊರೋನಾ ಪರೀಕ್ಷೆ ಸಮಯದಲ್ಲಿ ಬಳಸುವ ರಕ್ಷಾಕವಚ (ಪಿಪಿಇ) ಕಿಟ್ಗಳಲ್ಲಿ ದೋಷ ಕಂಡ ಕಾರಣ ಭಾರತವು (ಚೀನಾದಿಂದ ಬಂದದ್ದು) ಅವುಗಳನ್ನು ತಿರಸ್ಕರಿಸಿದೆ. ಕೊರೋನಾ ಸೋಂಕಿನ ವಿರುದ್ಧದ ಯುದ್ಧದಲ್ಲಿ ನೆರವಾಗುವ ಸಲುವಾಗಿ ಚೀನಾವು ಭಾರತಕ್ಕೆ 1.73 ಲಕ್ಷ ರಕ್ಷಾ ಕವಚಗಳನ್ನು ಕಳುಹಿಸಿತ್ತು.

ಈ ಪೈಕಿ 63 ಸಾವಿರ ಕವಚಗಳು ದೋಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಭಾರತವು ಅದನ್ನು ಚೀನಾಕ್ಕೇ ವಾಪಸು ಕಳುಹಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಚೀನಾ ಮಾತ್ರವಲ್ಲದೇ ಭಾರತವು ಕೊರಿಯಾ ಸೇರಿದಂತೆ ಇತರ ದೇಶಗಳಿಂದಲೂ ರಕ್ಷಾ ಕವಚಗಳನ್ನು ಖರೀದಿ ಮಾಡಿಕೊಳ್ಳುತ್ತಿದೆ.
ದೇಶದಲ್ಲಿ ಕರೋನಾ ಸಂಗ್ರಾಮ ತಾರಕದಲ್ಲಿರುವ ಸಂದರ್ಭದಲ್ಲಿ ಈ ರಕ್ಷಾ ಕವಚಗಳು ಭಾರೀ ಮಹತ್ವ ಪಡೆದುಕೊಂಡಿದ್ದು ಆರೋಗ್ಯ ಸೇನಾನಿಗಳ ಅತ್ಯಗತ್ಯ ಸುರಕ್ಷಾ ಸಾಧನವಾಗಿದೆ.

