ವಿಶ್ವದೆಲ್ಲೆಡೆ 23 ಲಕ್ಷ ಜನರಿಗೆ ಕೊರೊನಾ : 1.60 ಲಕ್ಷ ಮಂದಿ ಸಾವು!

ಕೋವಿಡ್-19 ಅಟ್ಟಹಾಸ ಮುಮದುವರೆದಿದ್ದು ವಿಶ್ವದೆಲ್ಲೆಡೆ ಜನ ಮರಣ ಮೃದಂಗಗಕ್ಕೆ ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಜಗತ್ತಿನೆಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ವಿಶ್ವದಲ್ಲಿ 23 ಲಕ್ಷ ಜನ ಸೋಂಕಿತರಿದ್ದು, 1.60 ಲಕ್ಷ ಮಂದಿಸಾವಿಗೀಡಾಗಿದ್ದಾರೆ.

ಅಮೆರಿಕಾದ ನಿರ್ಲಕ್ಷ್ಯ ಧೋರಣೆಯಿಂದಾಗಿ ಸೋಂಕು ವ್ಯಾಪಕವಾಗಿದ್ದು  ಕೊರೊನಾ ಹುಟ್ಟೂರು ಡ್ರ್ಯಾಗನ್ ದೇಶವನ್ನೇ ಮೀರಿಸುವಷ್ಟು ಮಂದಿಗೆ ಸೋಂಕು ಹರಡುತ್ತಿದೆ. ದೊಡ್ಡಣ್ಣ ಮನೆಯಲ್ಲಿ ಸೋಂಕಿತರ ಸಂಖ್ಯೆ 7.38 ಲಕ್ಷ ದಾಟಿದ್ದು 39 ಸಾವಿರ ಮಂದಿಯನ್ನು ಬಲಿಪಡೆದ ಕೊರೊನಾ ಮಿತಿಮೀರಿ ಹರಡುತ್ತಿದೆ. ಜನ ನಿಬಿಡ ನಗರಗಳಾದ ನ್ಯೂಯಾರ್ಕ್​ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಹೀಗಾಗಿ ಈ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಇನ್ನೂ ಸ್ಪೇನ್ ನಲ್ಲಿ 1.94 ಲಕ್ಷ ಸೋಂಕಿತರಿದ್ದು, 20 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1.75 ಲಕ್ಷ  ಸೋಂಕಿತರಿದ್ದು 23 ಸಾವಿರದ ಗಡಿ ತಲುಪಿದೆ. ಇಟಲಿಯಲ್ಲಿ ಕೊಂಚ ನಿಯತ್ರಣಕ್ಕೆ ಬಂದಿದ್ದು, ಫ್ರಾನ್ಸ್​, ಜರ್ಮನಿ, ಇಂಗ್ಲೆಂಡ್​ನಲ್ಲೂ ಪರಿಸ್ಥಿತಿ ಕೈ ಮೀರಿದೆ. ಫ್ರಾನ್ಸ್​ನಲ್ಲಿ 1.15 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 19 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.43 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 4538 ಜನರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 15 ಸಾವಿರದ ಗಡಿ ತಲುಪಿದೆ. 488 ಜನರು ಮೃತಪಟ್ಟಿದ್ದಾರೆ. 14,792 ಮಂದಿಗೆ ಸೋಂಕು ತಗುಲಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ದೇಶಗಳಲ್ಲಿ ಆತಂಕ ಶುರುವಾಗಿದ್ದು, ಅಮೆರಿಕಾ ಚೀನಾದ ವಿರುದ್ಧ ಕಿಡಿ ಕಾರುತ್ತಿದೆ. ಅತ್ಯುತ್ತಮ ವೈದ್ಯಕೀಯ ಇರುವ ದೇಶಗಳಲ್ಲಿ ಸೋಂಕಿನ ಪ್ರಮಾಣ ಕೈಗೆಟುಕುತ್ತಿಲ್ಲದ ಸಂದರ್ಭದಲ್ಲಿ ಚೀನಾದಲ್ಲಿ ಮಾತ್ರ ಏಕಾಏಕಿಯಾಗಿ ಸೋಂಕಿತರ ಸಂಖ್ಯೆ ಹೇಗೆ ಕಡಿಮೆಯಾಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.

ಕೊರೊನಾ ಹುಟ್ಟೂರು ಚೀನಾದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯ ಬಗ್ಗೆ ಮಾಹಿತಿ ಕೇಳಿದಾಗ, ಸಾವು -ನೋವುಗಳ ಅಂಕಿ-ಅಂಶಗಳನ್ನು ಕಡಿಮೆ ನೀಡಿದೆ ಎಂದು ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಅಮೆರಿಕದ ಅಧ್ಯಕ್ಷ ಟ್ರಂಪ್ ಕಿಡಿ ಕಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights