ಆಹಾರ ಕಿಟ್ ವಿತರಣೆ ವೇಳೆ ಮುಗಿಬಿದ್ದ ಜನ : ನೂಕು ನುಗ್ಗಲು ತಡೆಗೆ ಪೊಲೀಸರು ಸುಸ್ತು

ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಜಾತ್ರೆಗಳು, ರಾಜಕಾರಣಿಗಳ ಮನೆ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಈ ನಡುವೆ ಲಾಕ್ ಡೌನ್ ನಿಂದಾಗಿ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ವೇಳೆ ಜನ ಸಾಗರವೇ ಅಂತರವಿಲ್ಲದೆ ನೆರೆದ ಘಟನೆ ಬಳ್ಳಾರಿಯ ಹೊಸಕೋಟೆಯಲ್ಲಿ ನಡೆದಿದೆ.

ಲಾಕ್ ಡೌನ್ ನಿಂದಾಗಿ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಿ ದಿನಗೂಲಿಗಳಿಗೆ, ಕಾರ್ಮಿಕರಿಗೆ, ಬಡವರಿಗೆ ಕೆಲಸ ಇಲ್ಲದೇ ದಿನದ ಊಟ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ಅಂಥವರಿಗೆ ನೆರವಾಗುವ ದೃಷ್ಟಿಯಿಂದ ಕೆಲವೆಡೆ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಆದರೆ ಆಹಾರ ಕಿಟ್ ಗಳನ್ನು ಪಡೆಯಲು ಜನರು ಮುಗಿಬೀಳುತ್ತಿರುವ ಘಟನೆಗಳೂ ವರದಿಯಾಗುತ್ತಿವೆ.

ಮಾಸ್ಕ್ ಹಾಕಿಳ್ಳದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಹಾರ ಕಿಟ್ ಗಳಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಇಂದು ಕೂಡ ಬಳ್ಳಾರಿಯ ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ ಸಿಂಗ್ ಅವರ ಪರವಾಗಿ ಆಹಾರ ಕಿಟ್ ಗಳನ್ನು ವಿತರಿಸುವ ಕೆಲಸ ಬೆಳಿಗ್ಗೆ ಆರಂಭಗೊಂಡಿತ್ತು. ಆದರೆ ಆಹಾರದ ಕಿಟ್ ಪಡೆಯಲು ಕೆಲವೇ ನಿಮಿಷಗಳಲ್ಲಿ ಜನರು ದೌಡಾಯಿಸಿದರು. ನೂಕು ನುಗ್ಗಲಿನಿಂದ ಬಂದ ಜನರನ್ನು ಕಂಡು ಆಹಾರ ಕಿಟ್ ವಿತರಣೆ ನಿಲ್ಲಿಸಲಾಯಿತು.

ಬಳ್ಳಾರಿಯ ಹೊಸಪೇಟೆಯ ಬಹುತೇಕ ಪಡಿತರ ಅಂಗಡಿಗಳ ಮೂಲಕ ಕಿಟ್ ಅನ್ನು ನೀಡಲಾಗುತ್ತಿದೆ. ಆದರೆ ಜನರು ಸಾಮಾಜಿಕ ಅಂತ ಕಾಯ್ದುಕೊಳ್ಳದೇ ಮುಗಿಬೀಳುವುದು ಇನ್ನೂ ನಿಂತಿಲ್ಲ. ಜಿಲ್ಲೆಯಲ್ಲಿ ಈವರೆಗೂ 13 ಪಾಸಿಟಿವ್ ಪ್ರಕರಣ ಪತ್ತೆ ಆಗಿದೆ. ಹೊಸಪೇಟೆ ನಗರ ಒಂದರಲ್ಲಿಯೇ ಹತ್ತು ಪ್ರಕರಣಗಳಿವೆ. ಆದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಮರೆತು ನೂಕು ನುಗ್ಗಲಿನಲ್ಲಿ ಬರುತ್ತಿ ರುವುದು ಆತಂಕ ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights