‘ದಿ ಫ್ಯಾಮಿಲಿ ಮ್ಯಾನ್ 2’ ಟ್ರೈಲರ್ ಔಟ್ : ಭಾರೀ ಕುತುಹಲ ಮೂಡಿಸಿದ ಸಮಂತಾ ಪಾತ್ರ!
ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮನೋಜ್ ಬಾಜಪೇಯಿ ಮತ್ತು ಸಮಂತಾ ಅಕ್ಕಿನೇನಿ ಅಭಿನಯದ ದಿ ಫ್ಯಾಮಿಲಿ ಮ್ಯಾನ್ 2 ಟ್ರೈಲರ್ ಇಂದು ಬಿಡುಗಡೆಯಾಗಿದೆ.
ಸಿನಿಮಾ ತಯಾರಕರು ಬಹು ನಿರೀಕ್ಷಿತ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು ಇದು ಜೂನ್ 4 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ದಿ ಫ್ಯಾಮಿಲಿ ಮ್ಯಾನ್ 2 ಚಿತ್ರದ ಟ್ರೈಲರ್ ಅನ್ನು ಇಂದು ಮೇ 19 ರಂದು ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ.
ಪ್ರವೀಣ್ ಕಂದ್ರೆಗುಲಾ ನಿರ್ದೇಶನದಲ್ಲಿ ಮೂಡಿ ಬಂದ ದಿ ಫ್ಯಾಮಿಲಿ ಮ್ಯಾನ್ 2 ಚಿತ್ರದಲ್ಲಿ ಮನೋಜ್ ವಾಜಪೇಯಿ , ಸುಚಿತ್ರಾ (ಪ್ರಿಯಮಣಿ), ಸಮಂತಾ ಅಕ್ಕಿನೇನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ನಾವು ಹಿಂದೆಂದೂ ಕಾಣದ ರೀತಿಯಲ್ಲಿ ಸಮಂತಾ ಅಕ್ಕಿನೇನಿಯ ಒಂದು ನೋಟವನ್ನು ಈ ಸಿನಿಮಾದಲ್ಲಿ ಕಾಣಬಹುದು.
ದಿ ಫ್ಯಾಮಿಲಿ ಮ್ಯಾನ್‌ನ ಮೊದಲ ಋತು 2019 ರಲ್ಲಿ ಬಿಡುಗಡೆಯಾಯಿತು. ಈ ಸರಣಿಯಲ್ಲಿ ಮನೋಜ್ ಬಾಜಪೇಯಿ, ಪ್ರಿಯಮಣಿ, ಶರದ್ ಕೇಲ್ಕರ್, ಶರೀಬ್ ಹಶ್ಮಿ, ನೀರಜ್ ಮಾಧವ್, ಕಿಶೋರ್ ಕುಮಾರ್, ಗುಲ್ ಪನಾಗ್ ಮತ್ತು ಶ್ರೇಯಾ ಧನ್ವಂತರಿ ನಟಿಸಿದ್ದಾರೆ. ಎರಡನೇ ಭಾಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.