‘ಇಡೀ ಭಾರತ ನಿನ್ನ ಹಿಂದೆ ಇದೆ’: ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಹೇಳಿಕೆಯ ವಿಡಿಯೋ ವೈರಲ್‌!

‘ಇಡೀ ಭಾರತ ನಿನ್ನ ಹಿಂದೆ ಇದೆ, ಕಮ್ಆನ್ ಗ್ರೀವೋ’ ಎಂದು ಸ್ಕಾಟ್ಲೆಂಡ್ ವಿಕೆಟ್‌ಕೀಪರ್‌ ಮ್ಯಾಥೂ ಕ್ರಾಸ್ ತನ್ನ ತಂಡದ ಬೌಲರ್‌ ಕ್ರಿಸ್ ಗ್ರೀವ್ಸ್‌ ರನ್ನು ಹುರಿದುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ -2ರ ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯ ಬುಧವಾರ ನಡೆಯಿತು. ಭಾರತ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಸೋತಿರುವುದರಿಂದ ಸೆಮಿಫೈನಲ್ ತಲುಪುವುದು ಕಷ್ಟವಾಗಿದೆ. ಹಾಗಾಗಿ ಸ್ಕಾಟ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಗೆದ್ದಲ್ಲಿ ಅದು ಭಾರತಕ್ಕೆ ಅನುಕೂಲವಾಗುತ್ತಿತ್ತು. ಹಾಗಾಗಿ ಸ್ಕಾಟ್ಲೆಂಡ್ ಆಟಗಾರ ಭಾರತದ ಪರ ತನ್ನ ಅಭಿಮಾನ ತೋರಿಸಿ ನೀಡಿರುವ ಹೇಳಿಕೆ ಇದಾಗಿದೆ.

ಪಂದ್ಯದ 7 ನೇ ಓವರ್‌ನಲ್ಲಿ ಸ್ಕಾಟ್ಲೆಂಡ್ ವಿಕೆಟ್-ಕೀಪರ್ ಬೌಲರ್ ಮ್ಯಾಥೂ ಕ್ರಾಸ್ ಕ್ರಿಸ್ ಗ್ರೀವ್ಸ್‌ಗೆ “ಕಮ್ ಆನ್ ಗ್ರೀವೋ, ಇಡೀ ಭಾರತವು ನಿಮ್ಮ ಹಿಂದೆ ಇದೆ” ಎಂದು ಹೇಳಿದ್ದಾರೆ. ಅವರ ಹೇಳಿಕೆ ಸ್ಟಂಪ್-ಮೈಕ್‌ನಲ್ಲಿ ಸೆರೆಯಾಗಿದ್ದು, ಆ ವಿಡಿಯೋ ವೈರಲ್ ಆಗಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ದಿಟ್ಟ ಹೋರಾಟ ನೀಡಿದರೂ ಸಹ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದರೆ ಅದಕ್ಕೆ ಉತ್ತರವಾಗಿ ಸ್ಕಾಟ್ಲೆಂಡ್ 5 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಆಫ್ಘಾನಿಸ್ತಾನ ಎದುರು ಜಯಿಸಿ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿದರೆ ಆಫ್ಘಾನಿಸ್ತಾನವು 7 ವಿಕೆಟ್‌ ಕಳೆದುಕೊಂಡು ಕೇವಲ 144 ರನ್ ಗಳಿಸಿತು. ಭಾರತ 66 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ಇದನ್ನೂ ಓದಿ: ಟಿ-20 ವಿಶ್ವಕಪ್‌: ಭಾರತಕ್ಕೆ ಮೊದಲ ಗೆಲುವು; 210 ರನ್‌ಗಳೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.