ಟಿ-20 ವಿಶ್ವಕಪ್‌: ಭಾರತಕ್ಕೆ ಮೊದಲ ಗೆಲುವು; 210 ರನ್‌ಗಳೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ!

2021ರ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಸತತ ಎರಡು ಸೋಲುಗಳ ನಂತರ, ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಬುಧವಾರ ಆಫ್ಘಾನ್‌ ತಂಡದ ಜೊತೆ ನಡೆದ ಪಂದ್ಯದಲ್ಲಿ ಭಾರತ ತಂಡ 210 ರನ್‌ಗಳನ್ನು ಪೇರಿಸಿ, 66 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಹಾಲಿ ಟೂರ್ನಿಯಲ್ಲಿ ಗರಿಷ್ಠ ರನ್‌ಗಳನ್ನು ಕಲೆಹಾಕಿರುವ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ.

ಅಬುದಾಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಗನ್ ಬೌಲರ್‌ಗಳನ್ನು ಬಸವಳಿಯುವಂತೆ ಮಾಡಿದ ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌ ಅವರ ಜೊತೆಯಾಟದಿಂದ ಭಾರತ ತಂಡವು ಭರ್ಜರಿ ರನ್‌ಗಳನ್ನು ಕಲೆಹಾಕಿತು. ರಾಹುಲ್‌ ಅವರು 48 ಬಾಲ್‌ಗಳಿಗೆ 69 ರನ್‌ ಪೇರಿಸಿದರೆ, ರೋಹಿತ್ ಶರ್ಮಾ 47 ಬಾಲ್‌ಗಳಿಗೆ 74 ರನ್‌ ಬಾರಿಸಿದರು. ಜೊತೆಯಾಟದಲ್ಲಿ 140 ರನ್‌ ಬಾರಿದ ನಂತರ ರೋಹಿತ್‌ ಶರ್ಮಾ ಔಟ್‌ ಆದರು. ನಂತರ, 147 ರನ್‌ಗಳ ನಂತರ, ರಾಹುಲ್‌ ಕೂಡ ಔಟ್‌ ಆದರು. ಬಳಿಕ ಪಿಚ್‌ನಲ್ಲಿದ್ದ ರಿಷಬ್‌ ಪಂತ್‌ ಮತ್ತು ಹಾರ್ದಿಕ್‌ ಪಾಂಡ್ಯ ಜೊತೆಗೂಡಿ 21 ಬಾಲ್‌ಗಳಲ್ಲಿ 63 ರನ್‌ಗಳನ್ನು ಬಾರಿಸಿದರು.

ಟೀಂ ಇಂಡಿಯಾ ದಾಖಲಿಸಿದ 210 ರನ್‌ಗಳ ಬೆನ್ನಟ್ಟಿದ್ದ ಅಫ್ಘಾನ್‌ ತಂಡ 07 ವಿಕೆಟ್‌ ಕಳೆದುಕೊಂಡು 144 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಯಿತು. ಹೀಗಾಗಿ ಭರ್ಜರಿ 66 ರನ್‌ಗಳ ಅಂತರದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.

ಭಾರತ ತಂಡ ಕಲೆಯಾಗಿದ 120 ರನ್‌ಗಳು ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ತಂಡವೊಂದರ ಗರಿಷ್ಠ ರನ್ ಗಳಿಕೆಯಾಗಿದೆ. ಈ ಹಿಂದೆ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಇದೇ ಆಫ್ಗಾನಿಸ್ತಾನ ತಂಡ 190 ರನ್‌ಗಳನ್ನು ಸಿಡಿಸಿತ್ತು.

ಇದನ್ನೂ ಓದಿ: ಒಂದೇ ಓವರ್‌ಗೆ ನಾಲ್ಕು ಸಿಕ್ಸ್‌ ಸಿಡಿಸಿದ ಆಸಿಫ್‌ ಅಲಿ; ಆಫ್ಘಾನ್‌ ವಿರುದ್ದ ಪಾಕ್‌ ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights