ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ ಉಪಚುನಾವಣಾ ಫಲಿತಾಂಶದ ಉತ್ಪನ್ನ: ಪಿ ಚಿದಂಬರಂ

ಇಂಧನದ ಮೇಲಿನ ಅಬಕಾರಿ ಸುಂಕದ ಕಡಿತವು ಇತ್ತೀಚಿಗೆ ಪ್ರಕಟಗೊಂಡ ಉಪಚುನಾವಣೆಗಳ ಫಲಿತಾಂಶದ ಉತ್ಪನ್ನವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಬುಧವಾರ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ಕ್ರಮವಾಗಿ 5 ರೂ. ಮತ್ತು 10 ರೂ.ಗಳಷ್ಟು ಕಡಿತಗೊಳಿಸಿದೆ. ಗರಿಷ್ಠ ಮಟ್ಟದಲ್ಲಿ ಇಳಿಕೆಯಾಗಿರುವ ಸುಂಕ ಕಡಿತ ಇದಾಗಿದೆ.

ಮುಖ್ಯವಾಗಿ ಹೆಚ್ಚಿನ ತೆರಿಗೆಯಿಂದಾಗಿ ಇಂಧನ ಬೆಲೆಗಳು ಹೆಚ್ಚಿವೆ ಎಂಬ ಕಾಂಗ್ರೆಸ್ ಆರೋಪವನ್ನು ಸರ್ಕಾರದ ಈ ಕ್ರಮವು ದೃಢಪಡಿಸುತ್ತದೆ. ಕೇಂದ್ರ ಸರ್ಕಾರದ ದುರಾಸೆಯಿಂದಾಗಿ ಇಂಧನದ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ ಎಂದು ಚಿದಂಬರಂ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “30 ವಿಧಾನಸಭೆ ಮತ್ತು 3 ಲೋಕಸಭಾ ಉಪಚುನಾವಣೆಗಳ ಫಲಿತಾಂಶಗಳು ಸುಂಕ ಕಡಿತದ ಉತ್ಪನ್ನವನ್ನು ತಯಾರಿಸಿವೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ! ಮುಖ್ಯವಾಗಿ ಹೆಚ್ಚಿನ ತೆರಿಗೆಗಳ ಕಾರಣದಿಂದಾಗಿ ಇಂಧನ ಬೆಲೆಗಳು ಹೆಚ್ಚಿತ್ತಿವೆ ಎಂಬ ನಮ್ಮ ಅಭಿಪ್ರಾಯವನ್ನು ದೃಢೀಕರಿಸಿದೆ” ಎಂದು ಹೇಳಿದ್ದಾರೆ.

ಅಕ್ಟೋಬರ್ 30 ರಂದು ಚುನಾವಣೆ ನಡೆದ 20 ವಿಧಾನಸಭಾ ಮತ್ತು ಮೂರು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿಯೇ ಆಡಳಿತದಲ್ಲಿರುವ ಹಿಮಾಚಲ ಪ್ರದೇಶದ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳು ಮತ್ತು ಪ್ರತಿಷ್ಠಿತ ಮಂಡಿ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಇದನ್ನೂ ಓದಿ: ಬೈ-ಎಲೆಕ್ಷನ್‌ ಸೋಲು: ಭಯದಿಂದ ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸಿದ ಕೇಂದ್ರ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights