ದೇಶದಲ್ಲಿ ಹೆಚ್ಚಿದ ಕೊರೊನಾ ಹಾವಳಿ : 1,12,359 ಮಂದಿಗೆ ಸೋಂಕು – 3435 ಜನ ಬಲಿ!

ದೇಶದೆಲ್ಲೆಡೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಈವರೆಗೆ ದೇಶದಲ್ಲಿ ಒಟ್ಟು 1,12,359 ಮಂದಿಗೆ ಸೋಂಕು ತಗುಲಿದ್ದು, 3435 ಜನ ಬಲಿಯಾಗಿದ್ದಾರೆ.

ಹೌದು… ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಒಟ್ಟು 5609 ಕೊರೊನಾ ಕೇಸ್ ಗಳು ದಾಖಲಾಗಿದ್ದು, 132 ಜನ ಪ್ರಾಣ ಕಳೆದುಕೊಂಡಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.  ಈ ಮೂಲಕ ದೇಶದಲ್ಲಿ ಬಲಿಯಾದವರ ಸಂಖ್ಯೆ 3435ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 1,12,359ಕ್ಕೆ ತಲುಪಿದ್ದು, 48,735 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ ದೇಶದಲ್ಲಿ 63624 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ದೇಶದಲ್ಲಿ ಕೊರೊನಾ ರೇಸ್ ನಲ್ಲಿ ಮಹಾರಾಷ್ಟ್ರವನ್ನು ಮುನ್ನಡೆಸುತ್ತಿರುವ ವೈರಸ್ 39297 ಜನರ ದೇಹ ಹೊಕ್ಕಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 2250 ಹೊಸ ಪ್ರಕರಣಗಳು ದಾಖಲಾಗಿವೆ. 65 ಜನ ಒಂದೇ ದಿನ ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಟ್ಟಾರೆ ಸಾವಿನಸಂಖ್ಯೆ 1390ಕ್ಕೆ ಮುಂಟ್ಟಿದೆ. ಉಳಿದಂತೆ  ದೆಹಲಿಯಲ್ಲಿ 534 ಕೇಸು, 10 ಸಾವು, ಮಧ್ಯಪ್ರದೇಶದಲ್ಲಿ 270 ಸೋಂಕು, 9 ಮಂದಿ ಸಾವು, ತಮಿಳುನಾಡಿನಲ್ಲಿ 743 ಕೇಸು, 3 ಸಾವು, ಗುಜರಾತ್ ರಾಜ್ಯದಲ್ಲಿ 398 ಕೇಸು, 30 ಸಾವು ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights