ಹಸಿರು ಜಾಗೃತಿ ಮೂಡಿಸುವ ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ…

ಸದಾ ಒತ್ತಡ, ದರ್ಪದಿಂದ ಇರುವ ಪೊಲೀಸ್ ಅಧಿಕಾರಿಗಳ ಮಧ್ಯೆ ರಾಯಚೂರಿನಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ಡಿಫರೆಂಟ್ ಆಗಿ ನಿಲ್ಲುತ್ತಾರೆ, ಕರ್ತವ್ಯದೊಂದಿಗೆ ಜಿಲ್ಲೆಯಾದ್ಯಂತ ಪರಿಸರ ಪ್ರೇಮ ಹರಡುವ ಕೆಲಸ ಮಾಡುತ್ತಿದ್ದಾರೆ.

ಜೂನ ತಿಂಗಳಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಕೆಲಸ ಆರಂಭಿಸಿದ ಡಾ ಸಿ ಬಿ ವೇದಮೂರ್ತಿ ಆರಂಭದಿಂದಲೂ ತಮ್ಮ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗೆ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಅವರು ಮಾಡಿದ ಮುಖ್ಯ ಕೆಲಸವೆಂದರೆ ಪೊಲೀಸ್ ಠಾಣೆಯ ಮುಂದೆ ಸಸಿಗಳನ್ನು ನೆಡುವುದರ ಮುಖಾಂತರ ತಮ್ಮ ಭೇಟಿ ಆರಂಭಿಸಿದರು.

ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಹ ಕಡಿಮೆ ಮಾಡುವ ಎಲ್ಲಾ ಕೆಲಸ ಮಾಡುತ್ತಿದ್ದಾರೆ, ತಮ್ಮ ಕಚೇರಿಯಲ್ಲಿ ವಾಟರ್ ಬಾಟಲ್ ಸೇರಿದಂತೆ ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಈ ಮಧ್ಯೆ ಐತಿಹಾಸಿಕ ಬಾವಿಗಳ ಸ್ವಚ್ಛತೆಗೂ ಆದ್ಯತೆ ನೀಡಿದ್ದಾರೆ, ಮುಖ್ಯವಾಗಿ ರಾಯಚೂರು ನಗರದಲ್ಲಿರುವ ತೋಟದ ಭಾವಿಯು ಅಸ್ವಚ್ಛತೆಯಿಂದ ಕೂಡಿತ್ತು,, ಇಲ್ಲಿಯ ಕೆಲವು ಯುವಕರು ಆಗಾಗ ಸ್ವಚ್ಛತೆ ಮಾಡಿದ್ದರೂ ಈ ಬಾವಿ ಸಂಪೂರ್ಣವಾಗಿ ಸ್ವಚ್ಛವಾಗಿರಲಿಲ್ಲ, ಇದನ್ನು ಅರಿತ ಎಸ್ಪಿ ವೇದಮೂರ್ತಿ ಸ್ಥಳೀಯ ಗ್ರೀನ್ ರಾಯಚೂರು, ಪರಿಸರ ಕಾಳಜಿ ವಹಿಸುವ ಸಂಘಟನೆ ಹಾಗು ಯುವಕರೊಂದಿಗೆ ಕೂಡಿ ಸ್ವಚ್ಛತೆಗೆ ಇಳಿದಿದ್ದು ಈ ಬಾವಿ ಸಂಪೂರ್ಣವಾಗಿ ಸ್ವಚ್ಛವಾಗಿದೆ.
ಇದೇ ರೀತಿಯ ಬಾವಿ ಸ್ವಚ್ಚತೆ ಕಾರ್ಯಕ್ರಮ ಗಳು ಮುಂದುವರಿದಿದ್ದು ಮಾನವಿ ತಾಲೂಕಿನ‌ ಕುರ್ಡಿ ಹಾಗು ಸಿರವಾರ ಪಟ್ಟಣದಲ್ಲಿದ್ದ ಬಾವಿಗಳನ್ನು ಸ್ವಚ್ಛ ಮಾಡುವಲ್ಲಿ ಹಾಗು ಮಾಡಿಸುವಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ, ಇದರಿಂದ ಉತ್ತೇಜನಗೊಂಡ ಇನ್ನಷ್ಟು ಗ್ರಾಮಗಳ‌ ಬಾವಿಗಳು ಸ್ವಚ್ಛತೆ ಕಾರ್ಯ ಮುಂದುವರಿದಿದೆ.

ಸಾಮಾನ್ಯವಾಗಿ ಪ್ರತಿ ಭಾನುವಾರ ಮುಂಜಾನೆಯೇ ಸ್ಥಳೀಯರೊಂದಿಗೆ ಸೇರಿ ರಸ್ತೆಯ ಬಳಿಯಲ್ಲಿ ಜಾಲಿ ಗಿಡಗಳನ್ನು ಕಡಿದು ಅದೇ ಸ್ಥಳದಲ್ಲಿ ಸಸಿಗಳನ್ನು ಹಾಕುತ್ತಿರುತ್ತಾರೆ, ಇದೇ ರೀತಿ ಇಂದು ರಾಯಚೂರು ನಗರದ ಸರಾಫ‌ ಬಜಾರದಲ್ಲಿ ಸ್ವಚ್ಛತೆ ಹಾಗು ಸಸಿಗಳನ್ನು ನೆಟ್ಟರು. ಇದೇ ವೇಳೆ ಅಂಗಡಿ ಮಾಲೀಕರು ನೆಟ್ಟಿರುವ ಸಸಿಗಳು ಮರಗಳಾಗುವಂತೆ ಕಾಳಜಿ‌ ವಹಿಸಬೇಕೆಂದು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಿ‌ಕೊಟ್ಟರು.

ಡಾ ಸಿ ಬಿ ವೇದಮೂರ್ತಿಯೂ ಇವುಗಳೊಂದಿಗೆ ನಗರದಲ್ಲಿಯ ಬೀದಿಯಲ್ಲಿ ತಿರುಗಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಅವುಗಳ ಮಾಲೀಕರಿದ್ದರೆ ಅವರು ದಂಡ ಕಟ್ಟಿ ಬಿಡಿಸಿಕೊಂಡು ಹೋಗಲು ಅವಕಾಶ ನೀಡಿದ್ದು ಯಾರು ವಾರಸುದಾರರು ಬಾರದಿದ್ದರೆ ಅವುಗಳನ್ನು ಗೋಶಾಲೆಗೆ ಹಾಗು ಮಾರಾಟವನ್ನು ಸಹ ಮಾಡಿಸಿದ್ದಾರೆ.

ಇವರ ಪರಿಸರ ಕಾಳಜಿ ವಹಿಸುವ ವೇದಮೂರ್ತಿಯವರಿಗೆ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿರುವದಲ್ಲ ಅವರಿಗೆ ಸನ್ಮಾನ ಮಾಡಿ ಗೌರವಿಸುತ್ತಿವೆ. ಸದಾ ಚಟುವಟಿಕೆಯಲ್ಲಿರುವ ಡಾ ಸಿ ಬಿ ವೇದಮೂರ್ತಿ ಪೊಲೀಸ್ ಇಲಾಖೆಯ ಇತರ ಅಧಿಕಾರಿಗಳ ಮಧ್ಯೆ ವಿಭಿನ್ನವಾಗಿ ಕಾಣುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights