Cricket: ಧೋನಿ ಮುಂದಿನ ನಿರ್ಧಾರ ಕೇಳಿದ್ರೆ ಅಚ್ಚರಿಪಡ್ತೀರಾ..! ಮುಗೀತಾ ಧೋನಿ ದುನಿಯಾ..?

ಟೀಮ್ ಇಂಡಿಯಾದ ಅತ್ಯಂತ ಯಶಸ್ಪಿಆಟಗಾರ, IPL ನಲ್ಲಿ ಕೂಡಾ ಸಕ್ಸಸ್ಸ್ ನ ರುಚಿ ಕಂಡ ಜೊತೆಗೆ 2 ವಿಶ್ಪಕಪ್ ಗೆದ್ದ ಏಕೈಕ ಭಾರತೀಯ ನಾಯಕ ರಾಂಚಿ ರ್ಯಂಬೋ, ಮಾಹಿಯ ಮುಂದಿನ ಭವಿಷ್ಯವೇನು ಅನ್ನುವ ಪ್ರಶ್ನೆ ಅವನ ಅಭಿಮಾನಿಗಳಲ್ಲಿ ಮಾತ್ರವಲ್ಲ, ವಿರೋದಿಗಳಿಗು ಕುತುಹಲದ ವಿಷಯ…

ಐಪಿಎಲ್‌ ದಿನಾಂಕ ಪ್ರಕಟವಾಗಿಲ್ಲ. ಟಿ20 ವಿಶ್ವಕಪ್‌ ಈ ವರ್ಷ ಇಲ್ಲವೇ ಇಲ್ಲ. ಹಾಗಾದ್ರೆ ಮಹೇಂದ್ರ ಸಿಂಗ್ ಧೋನಿ ಭವಿಷ್ಯವೇನು..? ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸೋಕೆ ಸಜ್ಜಾಗಿದ್ದ ಧೋನಿಗೆ ಈಗ ಯಾವುದೇ ಪ್ಲಾಟ್‌ಫಾಮ್ ಇಲ್ಲದಂತಾಗಿದೆ. ಹಾಗಾದ್ರೆ ಧೋನಿ ಮುಂದಿನ ನಡೆಯೇನು, ಅವರ ಆಲೋಚನೆಗಳೇನು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾದ ಮಾಹಿ ತಮ್ಮದೆ ದಾರಿಯಲ್ಲಿ ಮುನ್ನಡೆದಿದ್ದಾರೆ..

Dhoni wanted Rs 30 lakh at retirement and live peacefully in ...

ಮಹೇಂದ್ರ ಸಿಂಗ್​ ಧೋನಿ, ಇಷ್ಟು ದಿನ ಬರೀ ಆಟಗಾರ ಮಾತ್ರ ಆಗಿದ್ದರು. ಆದ್ರೆ, ಇನ್ಮುಂದೆ ಮಾಹಿ, ​ಕೋಚ್​ ಕ್ಯಾಪ್​ ಧರಿಸಲಿದ್ದಾರಂತೆ. ಈ ಮೂಲಕ ಯುವಕರಿಗೆ ತರಬೇತಿ ನೀಡಲಿದ್ದಾರಂತೆ. ನಿಜ, ಧೋನಿ, ಆನ್​ಲೈನ್​ ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಜುಲೈ 2 ರಂದು ಧೋನಿಯ ಆನ್​ಲೈನ್ ಕ್ರಿಕೆಟ್ ಅಕಾಡೆಮಿ, ಉದ್ಘಾಟನೆಗೊಳ್ಳಲಿದೆ. ಧೋನಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡ್ಯಾರ್ಯಲ್​ ಕಲ್ಲಿನನ್​ ಸಾಥ್​ ನೀಡಲಿದ್ದಾರೆ. ಧೋನಿ ಅಕಾಡೆಮಿಯಲ್ಲಿ ಕಲ್ಲಿನನ್ ಕೋಚಿಂಗ್ ಡೈರೆಕ್ಟರ್​​ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ವಿಷ್ಯವನ್ನ ಸ್ವತಹ ಅವರೇ ಬಹಿರಂಗಪಡಿಸಿದ್ದಾರೆ. ​

2017 ರಲ್ಲೇ ಧೋನಿ ದುಬೈನಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ್ದರು. ಆದ್ರೆ, ತಮ್ಮ ಬಿಡುವಿಲ್ಲದ ಕ್ರಿಕೆಟ್‌ನಿಂದಾಗಿ ಅಕಾಡೆಮಿಗೆ ಸಮಯ ನೀಡಲು ಧೋನಿಗೆ ಸಾಧ್ಯವಾಗಲಿಲ್ಲ. 2019ರ ವಿಶ್ವಕಪ್​ ಟೂರ್ನಿ ನಂತರ, ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಸೋ ಮಾಹಿಯ ಮುಂದಿನ ಪ್ಲಾನ್‌ಗೆ ಆಲ್‌ ದಿ ಬೆಸ್ಟ್ ಹೇಳೋಣ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights