ಆಫ್ಘಾನಿಸ್ತಾನರನ್ನು ಸ್ಥಳಾಂತರಿಸುವ ವಿಮಾನದಲ್ಲಿ ಮಹಿಳೆಗೆ ಹೆರಿಗೆ..!

ಆಫ್ಘಾನಿಸ್ತಾನದ ಜನರನ್ನು ಸ್ಥಳಾಂತರಿಸುವ ಯುಎಸ್ ಮಿಲಿಟರಿ ವಿಮಾನದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್‌ನಲ್ಲಿ ಶನಿವಾರ ಅಫ್ಘಾನಿಸ್ತಾನದ ಮಹಿಳೆ ಸ್ಥಳಾಂತರಿಸುವ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

“ಅಫ್ಘಾನಿಸ್ತಾನದ ತಾಲಿಬಾನ್ ಸ್ವಾಧೀನದಿಂದ ಪಲಾಯನ ಮಾಡುವ ಪ್ರಯಾಣದ ಸಮಯದಲ್ಲಿ ಮಹಿಳೆ ಸಿ -17 ಸಾರಿಗೆ ವಿಮಾನದಲ್ಲಿ ಹೆರಿಗೆಗೆ ಒಳಗಾದಳು” ಎಂದು ಯುಎಸ್ ಏರ್ ಮೊಬಿಲಿಟಿ ಕಮಾಂಡ್ ಭಾನುವಾರ ಟ್ವೀಟ್ ಮಾಡಿದೆ.

ವಿಮಾನ ಮಧ್ಯಪ್ರಾಚ್ಯದ ಸ್ಥಳದಿಂದ ಜರ್ಮನಿಯ ಬೃಹತ್ ಯುಎಸ್ ವಾಯುನೆಲೆಗೆ ಹಾರುವಾಗ ಘಟನೆ ನಡೆದಿದೆ. 28,000 ಅಡಿಗಳಿಗಿಂತ [8,534 ಮೀಟರ್] ಮೇಲೆ ವಿಮಾನ ಹಾರಾಟದ ಎತ್ತರದಲ್ಲಿದ್ದಾಗ ವಿಮಾನದಲ್ಲಿನ ಕಡಿಮೆ ವಾಯು ಒತ್ತಡದಿಂದಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಯುಎಸ್ ವಾಯುಪಡೆ ತಿಳಿಸಿದೆ.

“ವಿಮಾನದ ಕಮಾಂಡರ್ ವಿಮಾನದಲ್ಲಿ ಗಾಳಿಯ ಒತ್ತಡವನ್ನು ಹೆಚ್ಚಿಸಲು ಎತ್ತರದಲ್ಲಿದ್ದ ವಿಮಾನವನ್ನು ಕೆಳಗೆ ಇಳಿಯಲು ನಿರ್ಧರಿಸಿದರು. ಇದು ತಾಯಿಯ ಜೀವವನ್ನು ಸ್ಥಿರಗೊಳಿಸಲು ಮತ್ತು ಉಳಿಸಲು ಸಹಾಯ ಮಾಡಿತು” ಎಂದು ಯುಎಸ್ ಫೋರ್ಸ್ ಬರೆದಿದೆ.

“ಹೆಣ್ಣು ಮಗು ಮತ್ತು ತಾಯಿಯನ್ನು ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಸಾಗಿಸಲಾಗಿದ್ದು ಅವರು ಉತ್ತಮವಾಗಿದ್ದಾರೆ” ಎಂದು ಸೇನೆ ಹೇಳಿದೆ.

ವಿಮಾನ ನಿಲ್ದಾಣವನ್ನು ಭದ್ರಪಡಿಸಲು ಸಾವಿರಾರು ಸೈನಿಕರನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್, ಆಗಸ್ಟ್ 31 ರೊಳಗೆ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಲು ಗಡುವು ನೀಡಿದೆ. ಆದರೆ ಬಿಡೆನ್ ಆಡಳಿತದ ಪ್ರಕಾರ 15,000 ಅಮೆರಿಕನ್ನರು ಮತ್ತು 50,000 ರಿಂದ 60,000 ಅಫಘಾನ್ ಮಿತ್ರರನ್ನು ಸ್ಥಳಾಂತರಿಸಬೇಕಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights