ಭಾರತದಲ್ಲಿ 40,845 ಜನರಿಗೆ ಬ್ಲಾಕ್‌ ಫಂಗಸ್‌; ತುತ್ತಾದವರಲ್ಲಿ ಶೇ.85 ರಷ್ಟು ಕೊರೊನಾ ರೋಗಿಗಳು!

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಇದೂವರೆಗೂ 40,845 ಬ್ಲಾಕ್‌ ಫಂಗಸ್‌ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಸುಮಾರು 85% ರಷ್ಟು ಕೊರೊನಾ ಸೋಂಕಿಗೆ ತುತ್ತಾಗಿದ್ದ ರೋಗಿಗಳಲ್ಲಿ ಕಂಡುಬಂದಿದೆ. ಬ್ಲಾಕ್‌ ಫಂಗಸ್‌ನಿಂದಾಗಿ ಈಗಾಗಲೇ 3,129 ಜನರು ಸಾವನ್ನಪ್ಪಿದ್ದಾರೆ.

ಈ ಅಂಕಿಅಂಶಗಳನ್ನು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಸೋಮವಾರ ಸಚಿವರ ಸಂಪುಟ ಸಭೆಯಲ್ಲಿ ಹಂಚಿಕೊಂಡಿದ್ದಾರೆ.

ಈ ದತ್ತಾಂಶದ ಪ್ರಕಾರ, ಬ್ಲಾಕ್‌ ಫಂಗಸ್‌ಗೆ ತುತ್ತಾದ 34,940 ಕೊರೊನಾ ರೋಗಿಗಳಲ್ಲಿ 26,187 ಅಥವಾ ಸುಮಾರು 64.11% ರೋಗಿಗಳು ಮಧುಮೇಹಕ್ಕೆ ಒಳಗಾಗಿರುವವರು ಎಂದು ತೋರಿಸಿದೆ. ಅಲ್ಲದೆ, 31,444 ಪ್ರಕರಣಗಳು ರೈನೋರ್ಬಿಟಲ್‌ಗೆ ಒಳಗಾಗಿವೆ, ಅಂದರೆ ರೋಗಿಗಳಿಗೆ ಮೂಗಿನ ಕುಳಿ ಒಳಗೆ ಮತ್ತು ಸುತ್ತಮುತ್ತ ಸೋಂಕು ಇರುತ್ತದೆ.

ಈ ರೋಗವು 45-60 ವರ್ಷ ವಯಸ್ಸಿನವರಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸಿದೆ. ಆದರೆ, ಕಿರಿಯರೂ ಕೂಡ ಇದರಿಂದ ದೂರ ಉಳಿದಿಲ್ಲ.

ಇದನ್ನೂ ಓದಿ: ಕಾಸರಗೋಡು ಜಿಲ್ಲೆಯ ಗ್ರಾಮಗಳ ಹೆಸರು ಬದಲಿಸದಂತೆ ಕೇರಳ ಸರ್ಕಾರಕ್ಕೆ ಹೆಚ್‌ಡಿಕೆ ಮನವಿ!

Spread the love

Leave a Reply

Your email address will not be published. Required fields are marked *