8 ಬಾರಿ ಶಾಸಕನಾಗಿದ್ದೇನೆ; ನಾನೂ ಮುಖ್ಯಮಂತ್ರಿ ಆಕಾಂಕ್ಷಿ: ಉಮೇಶ್‌ ಕತ್ತಿ

ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಅವಕಾಶ ಸಿಕ್ಕರೆ ನಾನೇಕೆ ಮುಖ್ಯಮಂತ್ರಿಯಾಗಬಾರದು. ಆದರೆ, ಈಗ ಸಿಎಂ ಹುದ್ದೆ ಖಾಲಿ ಇಲ್ಲ. ದೈವಬಲ- ಜನವಿದ್ದರೆ ಎರಡು ವರ್ಷಗಳ ನಂತರ ನಾನೂ ಸಿಎಂ ಆಗಬಹುದು ಎಂದು ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು 50 ವರ್ಷದಿಂದ ರಾಜಕೀಯದಲ್ಲಿದ್ದ ಸದೃಢವಾದ ಆಡಳಿತ ನೀಡುತ್ತಿದ್ದಾರೆ. ಅವರು ಸಬಲರಾಗಿದ್ದು, ಮುಖ್ಯಮಂತ್ರಿ ಖುರ್ಚಿ ಖಾಲಿಯಿಲ್ಲ. ನಾನು 8 ಬಾರಿ ಶಾಸಕನಾಗಿದ್ದು ಸಿಎಂ ಆಗಲು ಎಲ್ಲ ಅರ್ಹತೆಯಿದೆ. ಅವಕಾಶ ಸಿಕ್ಕರೆ ನಾನೂ ಕೂಡ ಮುಖ್ಯಮಂತ್ರಿಯಾಗಬಹುದು ಎಂದು ಅವರು ಹೇಳಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ನೀರಿನ ತೊಂದರೆಯಿಲ್ಲ. ಮಳೆಗಾಲ ಇನ್ನೂ ಮೂರು ತಿಂಗಳು ಇದೆ. ಅಷ್ಟರಲ್ಲಿ ಮಳೆಯಾಗದಿದ್ದರೆ ಅಥವಾ ಜಲಾಶಯದಲ್ಲಿ 123 ಟಿಎಂಸಿ ನೀರು ತುಂಬಿದ ನಂತರ ರೈತರಿಗೆ ನೀರು ಕೊಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಡೆಲ್ಟಾ ಪಸ್ಲ್‌ ಮಾತ್ರವಲ್ಲ ಇನ್ನೂ 4 ಅಪಾಯಕಾರಿ ರೂಪಾಂತರಿಗಳಿವೆ: ತಜ್ಞರ ಎಚ್ಚರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights