ನಾನು 5 ಲಕ್ಷ ರೂ ವೇತನ ಪಡೆಯುತ್ತೇನೆ; ಅದರಲ್ಲಿ 50% ಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತೇನೆ: ರಾಷ್ಟ್ರಪತಿ ಕೋವಿಂದ್
ದೇಶದ ಅಭಿವೃದ್ಧಿಗಾಗಿ ನಿಯಮಿತವಾಗಿ ತೆರಿಗೆ ಪಾವತಸಬೇಕು ಎಂದು ಹೇಳಿರುವ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು, ತಾವು ತಿಂಗಳಿಗೆ 5 ಲಕ್ಷ ರೂ ವೇತನವನ್ನು ಪಡೆಯುತ್ತೇನೆ. ಅದರಲ್ಲಿ 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾನು ಕೂಡ ತೆರಿಗೆಯನ್ನು ಪಾವತಿಸುತ್ತೇನೆ. ನಾನು ಪಾವತಿಸುವ ತೆರಿಗೆ ನನ್ನ ಉಳಿತಾಯಕ್ಕಿಂತಲೂ ಹೆಚ್ಚಿದೆ” ಎಂದು ಹೇಳಿದ್ದಾರೆ.
ಕೆಲವೊಮ್ಮೆ ಒಂದು ನಿರ್ದಿಷ್ಟ ರೈಲ್ವೇ ನಿಲ್ದಾಣದಲ್ಲಿ ರೈಲು ನಿಲ್ಲದಿದ್ದರೆ, ನಾವು ಕೋಪಗೊಳ್ಳುತ್ತೇವೆ. ಹಾಗೂ ಬಲವಂತವಾಗಿ ನಾವು ಅದನ್ನು ನಿಲ್ಲಿಸುತ್ತೇವೆ. ಎಲ್ಲರಿಗೂ ತಿಳಿದಿರುವ ಕಾರಣ ನಾನು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ಧೇನೆ. ರಾಷ್ಟ್ರಪತಿಗಳು ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ. ಅದರೆ, ಅವರೂ ಕೂಡ ತೆರಿಗೆ ಪಾವತಿಸುತ್ತಾರೆ. ನಾನು ಪ್ರತಿ ತಿಂಗಳು 5 ಲಕ್ಷ ವೇತನ ಪಡೆಯುತ್ತೇನೆ. ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ನಾನು 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ ಎಂದು ರಾಮ್‌ನಾಥ್ ಕೋವಿಂದ್ ಹೇಳಿದ್ದಾರೆ.
ಆದರೆ, ನನಗೆ ಎಷ್ಟು ಉಳಿದಿದೆ? ನಾನು ಎಷ್ಟು ಉಳಿಸಿದರೂ, ನಮ್ಮ ಅಧಿಕಾರಿಗಳು ಅದಕ್ಕಿಂತ ಹೆಚ್ಚು ಸಂಪಾದಿಸುತ್ತಾರೆ. ಇಲ್ಲಿನ ಶಿಕ್ಷಕರೂ ಕೂಡ ಹೆಚ್ಚು ಸಂಪಾದಿಸುತ್ತಾರೆ ಎಂದು ರಾಷ್ಟ್ರಪತಿಯವರು ಹೇಳಿದ್ದಾರೆ.
ಇದನ್ನೂ ಓದಿ: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ; 13 ವರ್ಷಗಳಲ್ಲಿಯೇ ಅಧಿಕ ಮೊತ್ತ!
“ಈ ತೆರಿಗೆಗಳು ಅಭಿವೃದ್ಧಿಗೆ ಕಾರಣವಾಗುತ್ತವೆ ಎಂಬುದನ್ನು ವಿವರಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ನಾವು ತೆರಿಗೆ ಪಾವತಿಸದಿದ್ದರೆ, ಅದು ಯಾರ ನಷ್ಟ? ನಿಮ್ಮ ಮತ್ತು ನನ್ನದು” ಎಂದು ಅವರು ಹೇಳಿದ್ದಾರೆ.
ತಮ್ಮಂತಹ “ಸಾಮಾನ್ಯ ಹಳ್ಳಿ ಹುಡುಗನಿಗೆ ದೇಶದ ಅತ್ಯುನ್ನತ ಹುದ್ದೆ”ಯನ್ನು ಅಲಂಕರಿಸುವ ಅವಕಾಶ ಸಿಗುತ್ತದೆ ಎಂದು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಇದನ್ನು ಸಾಧ್ಯವಾಗಿಸಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೆಲ್ಟಾ ಪಸ್ಲ್ ಮಾತ್ರವಲ್ಲ ಇನ್ನೂ 4 ಅಪಾಯಕಾರಿ ರೂಪಾಂತರಿಗಳಿವೆ: ತಜ್ಞರ ಎಚ್ಚರಿಕೆ

