ತಜಕಿಸ್ತಾನದಲ್ಲಿ ಭೂಕಂಪ : ಉತ್ತರ ಭಾರತದ ಭಾಗಗಳು ಸೇರಿ ದೆಹಲಿಯಲ್ಲೂ ಕಂಪನ!

ತಜಕಿಸ್ತಾನದಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಉತ್ತರ ಭಾರತ ಮತ್ತು ದೆಹಲಿಯಾದ್ಯಂತ ನಡುಕ ಉಂಟಾಗಿದೆ.

ಭೂಕಂಪನ ಸಂಭವಿಸಿದ ತಜಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಸುಮಾರು 450 ಕಿ.ಮೀ ದೂರದಲ್ಲಿದೆ. ಐಎಸ್ಟಿಯಿಂದ ರಾತ್ರಿ 10:31 ಕ್ಕೆ ಭೂಕಂಪನ ಮೇಲ್ಮೈಯಿಂದ 74 ಕಿ.ಮೀ ಆಳದಲ್ಲಿ ಸಂಭವಿಸಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಸೆಕೆಂಡುಗಳ ಕಾಲ ತೀವ್ರ ನಡುಕ ಉಂಟಾಗಿದೆ. ಭೂಕಂಪನದ ತೀವ್ರತೆಗೆ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿಬಂದಿದ್ದಾರೆ.

ಮಾತ್ರವಲ್ಲದೇ ಅಮೃತಸರದಲ್ಲಿಯೂ ಇದರ ಅನುಭವವಾಗಿದೆ. ಈವರೆಗೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.

“ದೆಹಲಿಯಲ್ಲಿ ಭೂಕಂಪನ ಸಂಭವಿಸಿದೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights