ವಿಶ್ವನಾಥ್‌ ಮತ್ತೊಂದು ದಾಳ; ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ದಾರಿ ಹುಡುಕಿಕೊಂಡ ಹಳ್ಳಿಹಕ್ಕಿ!

ರಾಜ್ಯ ವಿಧಾನ ಪರಿಷತ್‌ನಲ್ಲಿ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಈ ಸ್ಥಾನಕ್ಕೆ ವಿಧಾನಸಭೆಯ ಶಾಸಕರು ಮತದಾನ ಮಾಡುವ ಮೂಲಕ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಈ ಚುನಾವಣೆಯಲ್ಲಿ ಮತ್ತೆ ತಮ್ಮನ್ನೇ ಆಯ್ಕೆ ಮಾಡಬೇಕು ಎಂದು ಹಾಲಿ ಎಂಎಲ್‌ಸಿ ವಿಶ್ವನಾಥ್‌ ಬಿಜೆಪಿಯಲ್ಲಿ ಪಟ್ಟು ಹಿಡಿದಿದ್ದಾರೆ.

ಚುನಾವಣೆಯ ಮೂಲಕ ಆಯ್ಕೆಯಾಗದೇ, ನಾಮನಿರ್ದೇಶನದ ಮೂಲಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ವಿಶ್ವನಾಥ್‌ಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹೀಗಾಗಿ ವಿಶ್ವನಾಥ್‌ಗೆ ಮಂತ್ರಿಗಿರಿ ಸಿಕ್ಕಿಲ್ಲ.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ವಿಶ್ವನಾಥ್‌ ಇದೀಗ ವಿಧಾನಸಭೆಯಿಂದ ಪರಿಷತ್‌ಗೆ ನಡೆಸಲು ಚುನಾವಣೆಯಲ್ಲಿ ತಮ್ಮನ್ನೇ ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ.

ಪರಿಷತ್‌ನಲ್ಲಿ ಉಪ ಸಭಾಪತಿಗಳಾಗಿದ್ದ ಜೆಡಿಎಸ್‌ ಸದಸ್ಯ ಧರ್ಮೇಗೌಡ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ವಿಧಾನಸಭೆಯಿಂದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತಮ್ಮನ್ನೇ ಆಯ್ಕೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಕಳೆದ ಬಾರಿ ಸಾಹಿತಿಗಳ ಕೋಟಾದಲ್ಲಿ ವಿಶ್ವನಾಥ್ ವಿಧಾನಪರಿಷತ್‍ಗೆ ನಾಮಕರಣಗೊಂಡಿದ್ದರು. ಜನರಿಂದ ಆಯ್ಕೆಯಾದರೆ ಮಾತ್ರ ಸಚಿವ ಸ್ಥಾನ ಪಡೆಯಬಹುದು, ಇಲ್ಲವಾದಕ್ಕೆ ಸಚಿವ ಸ್ಥಾನ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರಿಂದಾಗಿ ಅವರಿಗೆ ಸಂಪುಟದಲ್ಲಿ ಸ್ಥಾನ ಇಲ್ಲ.

ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲಿ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ್ದ ಹಳ್ಳಿಹಕ್ಕಿ, ಇದೀಗ ವಿಧಾನಸಭೆಯಿಂದ ಮತ್ತೆ ಪರಿಷತ್‌ಗೆ ಆಯ್ಕೆಯಾದರೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದು, ಇದಕ್ಕಾಗಿ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಟೀಕೆ: 15 ದಿನಗಳಲ್ಲಿ ಉತ್ತರಿಸುವಂತೆ ಯತ್ನಾಳ್‌ಗೆ BJP ಹೈಕಮಾಂಡ್‌ ನೋಟಿಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights