ದುರ್ಗಾ ಪೂಜೆಗೆ ರಾಪ್ ಸಾಂಗ್ ಹಾಡಿದ ಟಿಎಂಸಿ ಶಾಸಕ ಮದನ್ ಮಿತ್ರಾ..!
ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ಸಾಮಾಜಿಕ ಕಾರ್ಯಕರ್ತ ಮದನ್ ಮಿತ್ರಾ ‘ಇಂಡಿಯಾ ವನ್ನಾ ಹ್ಯಾವ್ ಹರ್ ಬೇಟಿಯಾ’ ಎಂಬ ಹಾಡು ಹಾಡುವ ಮೂಲಕ ಅಂತರ್ಜಾಲದಲ್ಲಿ ವೈರಲ್ ಆಗಿದ್ದಾರೆ.
2021ರ ದುರ್ಗಾ ಪೂಜೆಯ ನಿಮಿತ್ತ ಈ ಹಾಡನ್ನು ನಿರ್ಮಿಸಲಾಗಿದ್ದು, ಭಬನಿಪುರ ಉಪಚುನಾವಣೆಗೆ ಮುನ್ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 21 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ವೀಡಿಯೊವನ್ನು ಈಗಾಗಲೇ ಸುಮಾರು 30,000 ಬಾರಿ ವೀಕ್ಷಿಸಲಾಗಿದೆ.
ಹಳದಿ ಕುರ್ತಾ ಮತ್ತು ಕೆಂಪು ಧೋತಿಯನ್ನು ಧರಿಸಿರುವ ಮದನ್ ಮಿತ್ರ ಸುಮಾರು 5 ನಿಮಿಷಗಳ ಕ್ಲಿಪ್‌ನಲ್ಲಿ ನಟಿಸುತ್ತಿದ್ದು, ಇದು ‘ಜಾಗೋ ಮಾ ದುರ್ಗಾ ವಂದನ’ದಿಂದ ಆರಂಭವಾಗುತ್ತದೆ. ಕೆಲವು ನಿಮಿಷಗಳ ನಂತರ, ಮಿತ್ರಾ ಹಾಡಲು ಪ್ರಾರಂಭಿಸುತ್ತಾರೆ. ಇದೇ ಹಾಡಿನಲ್ಲಿ ‘ಇಂಡಿಯಾ ವನ್ನಾ ಹ್ಯಾವ್ ಬೇಟಿಯಾ’ ಎಂಬ ರಾಪ್ ಸಾಂಗ್ ಕೂಡ ಹಾಡಿದ್ದಾರೆ.
ಈ ಹಾಡಿನಲ್ಲಿ ಶರ್ಟ್ ಮತ್ತು ಕ್ಯಾಪ್, ಸ್ಪೆಕ್ಟ್ ಹಾಗೂ ಪೂಜಾರಿ ಉಡುಪಿನಲ್ಲಿ ಮದನ್ ಮಿತ್ರ ಕಾಣಿಸಿಕೊಳ್ಳುತ್ತಾರೆ. ಮತ್ತೊಂದು ದೃಶ್ಯದಲ್ಲಿ ಕುತ್ತಿಗೆಗೆ ಲೈಟ್ ಗಳನ್ನು ಹಾಕಿಕೊಂಡಿರುವುದು ಕಾಣಬಹುದು.
ಈ ವಿಡಿಯೋವನ್ನು ಕೋಲ್ಕತ್ತಾದ ಎತ್ತರದ ಕಟ್ಟಡಗಳ ಹಿನ್ನೆಲೆಯಾಗಿಸಿಕೊಂಡು ಶೂಟ್ ಮಾಡಲಾಗಿದೆ. “ನನ್ನ ಹೆಸರು ಗೊತ್ತಿಲ್ಲವೇ? MM MM,” ಮದನ್ ಮಿತ್ರ ಎಂದು ಹಾಡಿನಲ್ಲಿ ಹಾಡಿದ್ದಾರೆ.
ಸೆಪ್ಟೆಂಬರ್ 30 ರಂದು ಭಬನಿಪುರ ಉಪಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ಅವರು ಭಬಾನಿಪುರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಕೆಂದರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆರು ತಿಂಗಳೊಳಗೆ ನಿಗದಿತ ಸಮಯದೊಳಗೆ ಶಾಸಕರಾಗಬೇಕು. ಭಬನಿಪುರ ಉಪಚುನಾವಣೆಗೂ ಮುನ್ನ ಶಾಸಕ ಮದನ್ ಮಿತ್ರಾ ಈ ಹಾಡಿದ್ದು ಭಾರೀ ಕುತೂಹಲಕ್ಕೆ ಎಡೆ ಮಾಡಿದೆ.