ಬಿಹಾರ ಫಲಿತಾಂಶ: ಎನ್ಡಿಎ ಮುನ್ನಡೆ; ಗೆದ್ದೇಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಮಹಾಘಟಬಂಧನ್
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಿಹಾರ ರಾಜಕೀಯದಲ್ಲಿ ಪೀಳಿಗೆಯ ಬದಲಾವಣೆಯಾಗಬಹುದು. ಬಿಹಾರ ಮತದಾರರು ಯುವ ನಾಯಕ (ಆರ್ಜೆಡಿ) ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ಗೆ ಅಧಿಕಾರ ನೀಡಬಹುದು ಎಂಬ ಸೂಚನೆ ಕಾಣುತ್ತಿದ್ದರೂ, ಸದ್ಯ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.
ಮಹಾಘಟಬಂಧನ್ಗೆ ಹಿನ್ನೆಡೆ ಶುರುವಾಗಿದೆ. ಎನ್ಡಿಎ ಪ್ರಬಲ ಪೈಪೋಟಿ ನೀಡುತ್ತಿದ್ದು ಸದ್ಯದ ವರದಿಗಳ ಪ್ರಕಾರ ಎನ್ಡಿಎ 125 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಮಹಾಘಟಬಂಧನ್ 100 ಸ್ಥಾನಗಳಿಗೆ ಕುಸಿದಿದೆ.
ಚಿರಾಗ್ ಪಾಸ್ವನ್ ನೇತೃತ್ವದ ಎಲ್ಜೆಪಿ ಪಕ್ಷವು ಸಹ ಗಮರ್ನಾಹ ಸಾಧನೆ ಮಾಡಿದ್ದು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ಡಿಎ ಅಥವಾ ಮಹಾಘಟಬಂಧನ್ ಎರಡೂ ಸ್ಪಷ್ಟ ಸರಳ ಬಹುಮತ ಪಡೆಯಲು ವಿಫಲರಾದಲ್ಲಿ ಎಲ್ಜೆಪಿ ಬೆಂಬಲ ಯಾರಿಗೆ ಎಂಬುದು ಮಹತ್ವದ ವಿಷಯವಾಗಲಿದೆ.
ಮತ ಎಣಿಕೆ ಮತ್ತು ಫಲಿತಾಂಶಗಳನ್ನು ಚುನಾವಣಾ ಆಯೋಗದ Acerusults.nic.in, AC.gov.in, ಮತ್ತು results.ac.gov.in. ವೆಬ್ಸೈಟ್ಗಳಲ್ಲಿ ನೇರಪ್ರಸಾರವಾಗುತ್ತಿದೆ. ಬಿಹಾರದ 38 ಜಿಲ್ಲೆಗಳ 55 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ: ಮೊದಲ ಸುತ್ತಿನಲ್ಲಿ ಬಿಜೆಪಿಗೆ 3,000 ಮತಗಳ ಮುನ್ನಡೆ!

