ನನ್ನ ಮಾತು ಕೇಳದೆ ಇದ್ದರೆ ನಿಮ್ಮ ಗೌರವ ಬೇಡ: ಮೋದಿ ಸರ್ಕಾರದ ವಿರುದ್ಧ 8 ವರ್ಷದ ಬಾಲಕಿ ಟ್ವೀಟ್

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಮಾರ್ಚ್ 8 ರಂದು ಮಹಿಳಾ ದಿನಾಚರಣೆಯ ಅಂಗವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೊರೆದು, ಅಂದು ತಮ್ಮ ಖಾತೆಗಳನ್ನು ನಿರ್ವಹಿಸಲು ಸ್ಪೂರ್ತಿದಾಯಕ ಮಹಿಳೆಯರಿಗೆ ಬಿಟ್ಟುಕೊಡುವುದಾಗಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಭಾರತಕ್ಕೆ ಸ್ಪೂರ್ತಿಯಾಗಿರುವ ಹಲವು ಮಹಿಳೆಯರ ಬಗ್ಗೆ ಸರ್ಕಾರದ ‘ಮೈಗವ್ ಇಂಡಿಯಾ’ ಟ್ವೀಟ್ ಮಾಡುತ್ತಿತ್ತು.

ಇದರ ಭಾಗವಾಗಿ ಮಣಿಪುರದ ನಿವಾಸಿ, ಪರಿಸರ ಹೋರಾಟಗಾರ್ತಿ, 8 ವರ್ಷದ ಬಾಲಕಿ ಲೈಸಿಪ್ರಿಯ ಕಂಗುಜಾಮ್, ಅವರ ಬದುಕು ಮತ್ತು ಹೋರಾಟ ಭಾರತಕ್ಕೆ ಸ್ಪೂರ್ತಿ ಎಂದು ತಿಳಿಸಿ ಮೈಗವ್ ಇಂಡಿಯಾ ಟ್ವೀಟ್ ಮಾಡಿತ್ತು. ಇವರಿಗೆ 2019 ರಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಮ್ ಮಕ್ಕಳ ಪ್ರಶಸ್ತಿ, ವಿಶ್ವ ಮಕ್ಕಳ ಶಾಂತಿ ಪ್ರಶಸ್ತಿ ಮತ್ತು ಭಾರತೀಯ ಶಾಂತಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗಿದೆ.

ಆದರೆ ಆ ಗೌರವವನ್ನು ಒಪ್ಪಿಕೊಳ್ಳಲು ಈ ಎಂಟು ವರ್ಷದ ಬಾಲಕಿ ನಿರಾಕರಿಸಿದ್ದಾರೆ. ಅವರು ಟ್ವೀಟ್ ಮಾಡಿ “ಪ್ರಿಯ ನರೇಂದ್ರ ಮೋದಿ ಅವರೆ, ನನ್ನ ಧ್ವನಿ ನಿಮಗೆ ಕೇಳದೆ ಹೋದರೆ ದಯವಿಟ್ಟು ನನ್ನನ್ನು ಸಂಭ್ರಮಿಸಬೇಡಿ” ಎಂದಿರುವುದಲ್ಲದೆ “ನಿಮ್ಮ #ಶಿ ಇನ್ಸ್ಪೈರ್ಸ್ ಅಸ್ ಅಂಗವಾಗಿ ಭಾರತಕ್ಕೆ ಸ್ಪೂರ್ತಿಯಾಗಿರುವ ಮಹಿಳೆಯರಲ್ಲಿ ನನ್ನನ್ನು ಒಬ್ಬಳಾಗಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳು. ಆದರೆ ನಾನು ಈ ಗೌರವವನ್ನು ತಿರಸ್ಕರಿಸುತ್ತೇನೆ” ಎಂದು ಬರೆದಿದ್ದಾರೆ.

https://twitter.com/LicypriyaK/status/1235921597552189442?ref_src=twsrc%5Etfw%7Ctwcamp%5Etweetembed%7Ctwterm%5E1235921597552189442&ref_url=https%3A%2F%2Fpublish.twitter.com%2F%3Fquery%3Dhttps%253A%252F%252Ftwitter.com%252FLicypriyaK%252Fstatus%252F1235921597552189442%26widget%3DTweet

ಮತ್ತೊಂದು ಟ್ವೀಟ್ ನಲ್ಲಿ “ಸರ್ಕಾರ ನನ್ನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ, ಆದರೆ ದೇಶಕ್ಕೆ ಸ್ಪೂರ್ತಿಯಾಗಿರುವ ಮಹಿಳೆಯರಲ್ಲಿ ನನ್ನನ್ನು ಒಬ್ಬಳನ್ನಾಗಿ ಆಯ್ಕೆ ಮಾಡಿದೆ. ಇದು ಸರಿಯೇ?” ಎಂದು ಪ್ರಶ್ನೆ ಎತ್ತಿದ್ದಾರೆ.

2019 ರಲ್ಲಿ ನಡೆದ ಅಂತರಾಷ್ಟ್ರೀಯ ಹವಾಮಾನ ಬದಲಾವಣೆಯ ಯುನೆಸ್ಕೋ ಸಮಾವೇಶದಲ್ಲಿ ಲೈಸಿಪ್ರಿಯ ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights