FACT CHECK | ಕರ್ನಾಟಕದಲ್ಲಿ ಮುಸ್ಲಿಮರು ನಡುರಸ್ತೆಯಲ್ಲೆ ಗೋಹತ್ಯೆ ಮಾಡಿದ್ದಾರೆ ಎಂಬುದು ನಿಜವೇ?

ಕರ್ನಾಟಕದಲ್ಲಿ ಮುಸ್ಲಿಮರು ನಡುರಸ್ತೆಯಲ್ಲೆ ಗೋಹತ್ಯೆಯನ್ನು ನಡೆಸಿ ಮೆರವಣಿಗೆ ಮಾಡುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ ಗೋಹತ್ಯೆ ಕುರಿತ ಹೇಳಿಕೆಯೊಂದಿಗೆ ಜೀಪ್‌ ಒಂದರ ಮೇಲೆ ಹಸುವನ್ನು ಕಟ್ಟಿರುವ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.

ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ್ದು ಎಂದು ಹೇಳಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ,ಹಸುವನ್ನು ಕಟ್ಟಿದ ಜೀಪಿನ ಮುಂಭಾಗದಲ್ಲಿ ಫಾರೆಸ್ಟ್ ಎಂದು ಬರೆಯಲಾದೆ. ಹಿಂಭಾಗದಲ್ಲಿರುವ ಕಟ್ಟಡಗಳಲ್ಲಿ ಮಲಯಾಳಂ ಭಾಷೆಯ ಬೋರ್ಡ್ ಗಳು ಕಂಡುಬಂದಿವೆ. ಇದರೊಂದಿಗೆ  ಶ್ರದ್ಧಾಂಜಲಿ ಸಮರ್ಪಣೆಯ ರೀತಿ ಹಾಕಿರುವ ವೃತ್ತಾಕಾರದ ಮಾಲೆಯನ್ನೂ ಹಸುವಿಗೆ ಹಾಕಲಾಗಿದೆ.

ಈ ಅಂಶಗಳ ಆಧಾರದಲ್ಲಿ ಕೀವರ್ಡ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 17 ಫೆಬ್ರವರಿ , 2024ರ ಫ್ರೀ ಪ್ರೆಸ್‌ ಜರ್ನಲ್‌ ವರದಿ ಲಭ್ಯವಾಗಿದೆ.

ಫೆಬ್ರವರಿ 17, 2024ರ ಫ್ರೀ ಪ್ರೆಸ್‌ ಜರ್ನಲ್‌ ವರದಿಯ ಪ್ರಕಾರ, ವಯನಾಡಿನಲ್ಲಿ ನಡೆಯುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಆಡಳಿತಾರೂಢ ಎಲ್‌ಡಿಎಫ್, ಪ್ರತಿಪಕ್ಷ ಯುಡಿಎಫ್ ಮತ್ತು ಬಿಜೆಪಿ ಜಿಲ್ಲಾದ್ಯಂತ ಕರೆ ನೀಡಿರುವ ಹರತಾಳ ಶನಿವಾರ ಪುಲ್ಪಲ್ಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಾಹನಕ್ಕೆ ಹಾನಿ ಮಾಡಿ ಹಸುವನ್ನು ಅದರ ಮೇಲೆ ಕಟ್ಟಿಹಾಕಿದ್ದಾರೆ. ಹುಲಿ ದಾಳಿಯಲ್ಲಿ ಹಸು ಮೃತಪಟ್ಟಿದೆ ಎಂದು ಹೇಳಲಾಗಿದೆ ಎಂದಿದೆ.

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಫೆಬ್ರವರಿ 17, 2024ರ ಆನ್‌ ಮನೋರಮಾ ವರದಿಯಲ್ಲಿ, ಮಾನವ- ವನ್ಯ ಪ್ರಾಣಿ ಸಂಘರ್ಷ: ತೀವ್ರ ಪ್ರತಿಭಟನೆ ಮಧ್ಯೆ 2 ದಿನ ನಿಷೇಧಾಜ್ಞೆ ಘೋಷಣೆ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಲಾಗಿದೆ. ಪ್ರತಿಭಟನಕಾರರು ಅರಣ್ಯ ಇಲಾಖೆ ವಾಹನದ ಮೇಲೆ ದಾಳಿ ನಡೆಸಿದ್ದು, ಅದರ ಚಕ್ರದ ಗಾಳಿಯನ್ನು ತೆಗೆದು ಟಾಪ್ ಗಳನ್ನು ಹರಿದಿದ್ದಾರೆ. ಹುಲಿ ದಾಳಿಗೆ ತುತ್ತಾಗಿ ಸಾವನಪ್ಪಿದ ಹಸುವನ್ನು ಜೀಪಿನ ಬಾನೆಟ್‌ ಮೇಲೆ ಮಲಗಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾದ ಕಾರಣ ಪೋಲಿಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದು, ಉದ್ರಿಕ್ತರ ಗುಂಪು ಅಂಗಡಿಗಳನ್ನು ಪುಡಿಗಟ್ಟಿ ಪುಲಪಲ್ಲಿ ನಗರದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದೆ ಎಂದಿದೆ.

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

18 ಫೆಬ್ರವರಿ , 2024ರ ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ವರದಿಯಲ್ಲಿ ಶುಕ್ರವಾರ ಕಾಡಾನೆ ದಾಳಿಯಲ್ಲಿ ಅರಣ್ಯ ಇಲಾಖೆ ವೀಕ್ಷಕ ವಿ ಪಿ ಪೌಲ್ ಸಾವನ್ನಪ್ಪಿದ್ದನ್ನು ಖಂಡಿಸಿ ರಾಜಕೀಯ ಬೇಧವಿಲ್ಲದೆ ನೂರಾರು ಜನರು ಶನಿವಾರ ಪುಲ್ಪಲ್ಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಆಕ್ರೋಶಗೊಂಡ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ದೃಶ್ಯಗಳಿಗೆ ಪುಲ್ಪಲ್ಲಿ ಪಟ್ಟಣ ಸಾಕ್ಷಿಯಾಯಿತು. ಜನಸಂದಣಿಯು ಅರಣ್ಯ ಇಲಾಖೆಯ ಜೀಪ್ ಅನ್ನು ಅಡ್ಡಗಟ್ಟಿ ಹಾನಿಗೊಳಿಸಿದಾಗ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಮೂಡನಕೊಲ್ಲಿಯಲ್ಲಿ ಹುಲಿ ದಾಳಿಯಿಂದ ಹತ್ಯೆಯಾದ ಹಸುವಿನ ಮೃತದೇಹವನ್ನು ತಂದು ಜೀಪಿನ ಬಾನೆಟ್ ಮೇಲೆ ಹಾಕಿದರು ಎಂದಿದೆ.

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಹೆಚ್ಚಿನ ಮಾಹಿತಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ, ಇನ್‌ಸ್ಟಾಗ್ರಾಂನಲ್ಲಿ @wayanadview ಹೆಸರಿನ ಖಾತೆಯೊಂದನ್ನು ಪರಿಶೀಲಿಸಿದಾಗ, ಜೀಪಿನ ಬಾನೆಟ್ ಮೇಲೆ ಹಸುವನ್ನು ಕಟ್ಟಿದ ವಿಡಿಯೋ ಲಭ್ಯವಾಗಿದೆ,  ವೈರಲ್ ವಿಡಿಯೋ ಮತ್ತು ಇನ್‌ಸ್ಟಾಗ್ರಾಂನ ವಿಡಿಯೋವನ್ನು ಹೋಲಿಕೆ ಮಾಡಿದಾಗ, ಒಂದೇ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ವಯನಾಡಿನಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ವಿರುದ್ಧ ನಡೆಸಿದ ಪ್ರತಿಭಟೆಯ ದೃಶ್ಯಗಳನ್ನು ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ನಡು ರಸ್ತೆಯಲ್ಲೇ ಗೋಹತ್ಯೆ ಮಾಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಿಕ್‌ಅಪ್‌ ವ್ಯಾನಿನಲ್ಲಿ ಪತ್ತೆಯಾದ EVM ಯಂತ್ರಗಳ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights