ದೇಶದಲ್ಲಿ 3 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಾವುಗಳ ಸಂಖ್ಯೆ : 2.22 ಲಕ್ಷ ಹೊಸ ಕೇಸ್!

ದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆ 3 ಲಕ್ಷ ದಾಟಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಸಾವುಗಳ ಸಂಖ್ಯೆ ಮಾತ್ರ ಇಳಿಕೆ ಕಾಣಿಸುತ್ತಿಲ್ಲ. ಇದು ಜನರಲ್ಲಿ ದಿನದಿಂದ ದಿನಕ್ಕೆ ಆತಂಕವನ್ನು ಹೆಚ್ಚಿಸುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ ಒಟ್ಟು ಸಾವುಗಳ ಸಂಖ್ಯೆ  3,03,720 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶವು 4,454 ಸಾವುನೋವುಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ 1,320 ಗರಿಷ್ಠ ಸಾವುನೋವುಗಳು ವರದಿಯಾಗಿದ್ದು, ನಂತರ ಕರ್ನಾಟಕದಲ್ಲಿ 624 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,22,315 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 35,483 ಪ್ರಕರಣಗಳು ತಮಿಳುನಾಡು, 26,672 ಪ್ರಕರಣಗಳು ಮಹಾರಾಷ್ಟ್ರ, 25,979 ಪ್ರಕರಣಗಳು ಕರ್ನಾಟಕ, 25,820 ಪ್ರಕರಣಗಳು ಕೇರಳ, ಆಂಧ್ರಪ್ರದೇಶದಲ್ಲಿ 18,767 ಪ್ರಕರಣಗಳು ದಾಖಲಾಗಿವೆ.

24 ಗಂಟೆಗಳಲ್ಲಿ 19 ಲಕ್ಷ ಕೋವಿಡ್ -19 ಮಾದರಿಗಳನ್ನು ಪರೀಕ್ಷಿಸಲಾಗಿದೆ, ಒಟ್ಟು ಪರೀಕ್ಷೆಗಳು 33 ಕೋಟಿ ದಾಟಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಮೇ 23 ರಂದು 19,28,127 ಕೋವಿಡ್ -19 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ದೇಶದಲ್ಲಿ 33,05,36,064 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights