FACT CHECK | ಹೈದರಾಬಾದ್‌ನ ಬಹದ್ದೂರ್‌ಪುರ ಕ್ಷೇತ್ರದ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು 2022ರ ಹಳೆಯ ವಿಡಿಯೋ ಹಂಚಿಕೆ

ಸಾಮಾಜಿಕ ಮಾಧ್ಯಮ ಅದರಲ್ಲೂ ವಾಟ್ಸಾಪ್‌ನಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಶೇರ್ ಆಗುತ್ತಿದ್ದು,  “ಈ ವೀಡಿಯೊ MIM ಬಹದ್ದೂರ್‌ಪುರದಿಂದ ಬಂದಿದೆ ಎಂದು ಹೇಳಲಾಗಿದೆ! ದಯವಿಟ್ಟು ಇದನ್ನು ವೈರಲ್ ಮಾಡಿ ಇದರಿಂದ ಚುನಾವಣಾ ಆಯೋಗ ಮರುಚುನಾವಣೆ ನಡೆಸಲಿದೆ. ದಯವಿಟ್ಟು ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಮೇ 13 ರಂದು ನಡೆದ ಲೋಕಸಭಾ ಚುನಾವಣೆಯ ವೇಳೆ ಹೈದರಾಬಾದ್‌ನ ಬಹದ್ದೂರ್‌ಪುರ ಕ್ಷೇತ್ರದ ಮತಗಟ್ಟೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸದಸ್ಯರು ನಕಲಿ ಮತದಾನ ಮಾಡುತ್ತಿದ್ದಾರೆ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

 

 

 

 

 

 

 

 

 

 

 

 

 

 

 

ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಇದು ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದೆ ಎಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ EVM ಬಳಿ ನಿಂತಿದ್ದು, ಮತ ಚಲಾಯಿಸಲು ಬರುವ ಮತದಾರರನ್ನು ತಡೆದು ಆತನೇ ಮತದಾರರ ಬದಲಾಗಿ ನಕಲಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡು ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ನಡೆದ ನಕಲಿ ಮತದಾನ ಎಂದು ಈ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ. ಹಾಗಾದರೆ ಈ ವಿಡಿಯೋಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸಲು ವಿಡಿಯೋದ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, ಈ  ವಿಡಿಯೋಗೆ ಸಂಬಂಧಪಟ್ಟಂತೆ 27 ಫೆಬ್ರವರಿ 2022ರಂದು ಟಿವಿ9 ಬೆಂಗಾಲ್‌   ಯೂಟ್ಯೂಬ್ ನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ “2022ರ ಪಶ್ಚಿಮ ಬಂಗಾಳದ ಮುನ್ಸಿಪಲ್ ಚುನಾವಣೆ, ಏಜೆಂಟ್‌ನಿಂದ ನಕಲಿ ಮತದಾನ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅದೇ ದಿನ ಟ್ವೀಟ್‌ ಮಾಡಿದ್ದು, ತೃಣ ಮೂಲ ಕಾಂಗ್ರೆಸ್‌ನ ವಿರುದ್ಧ ವ್ಯಾಪಕವಾದ ಆಕ್ರೋಶವನ್ನು ಹೊರಹಾಕಿ, ಈ ರೀತಿಯ ಚುನಾವಣೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಆಡಳಿತರೂಢ ಟಿಎಂಸಿ ಪಕ್ಷದ ವಿರುದ್ದ ಹರಿಹಾಯ್ದಿದ್ದವು.

ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಥಳಿಯ ಮುನ್ಸಿಪಲ್ ಚುನಾವಣೆಯ ಸಂದರ್ಭದ್ದಾಗಿದೆ. ಇದೇ ವಿಡಿಯೋವನ್ನು 2023ರ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿತ್ತು. ಅದೇ ರೀತಿ 2022ರ ಗುಜರಾತ್ ಚುನಾವಣೆಯ ವೇಳೆಯೂ ಸಹ ಗುಜರಾತ್‌ನದ್ದು ಎಂದು ಪ್ರತಿಪಾದಿಸಲಾಗಿತ್ತು. ಆದರೆ ಅವೆಲ್ಲವೂ ಸುಳ್ಳಾಗಿದ್ದು ಇದು ಪಶ್ಚಿಮ ಬಂಗಾಳದ 2022ರ ಮುನ್ಸಿಪಲ್ ಚುನಾವಣೆಯ ಸಂದರ್ಭದ್ದಾಗಿದೆ. ಹಾಗಾಗಿ ಹೈದರಾಬಾದ್‌ನ ಬಹದ್ದೂರ್‌ಪುರ ಕ್ಷೇತ್ರದಲ್ಲಿ ನಡೆದ ಮತದಾನಕ್ಕೂ ಈ ವಿಡಿಯೋಗೂ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಮುಸ್ಲಿಂ’ ಪದವನ್ನು ಬಳಸಿಯೇ ಇಲ್ಲ ಎಂದು ನ್ಯೂಸ್ 18 ಸಂದರ್ಶನದಲ್ಲಿ ಸುಳ್ಳು ಹೇಳಿದ ಮೋದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights