ಬಿಹಾರ ವಿಧಾನಸಭೆಯಲ್ಲಿ 25% ಶಾಸಕರು ಮೇಲ್ವರ್ಗದವರು; ಬಿಜೆಪಿ ಶಾಸಕರೇ ಹೆಚ್ಚು!

ಬಿಹಾರ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ 243 ಶಾಸಕ ಪೈಕಿ 25% ಶಾಸಕರು ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ. ಪ್ರತಿ ನಾಲ್ವರು ಶಾಸಕರ ಪೈಕಿ ಒಬ್ಬರು ಮೇಲ್ಜಾತಿಯವರು ಎಂದು ಟೈಮ್ಸ್‌ಆಫ್ ಇಂಡಿಯಾ ವರದಿ ಮಾಡಿದೆ.

ಬಿಹಾರ ವಿಧಾನ ಸಭೆಯ ಸದಸ್ಯ ಬಲ 243 ಆಗಿದ್ದು, ಇವರಲ್ಲಿ 64 ಮಂದಿ ಶಾಸಕರು ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 45 ಮಂದಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದವರಾಗಿದ್ದಾರೆ. (ಬಿಜೆಪಿ 33, ಜೆಡಿಯು-9, ವಿಐಪಿ-2, ಎಚ್‌ಎಎಂ-ಎಸ್ 1). ಮಹಾ ಮೈತ್ರಿಕೂಟದಿಂದ ಒಟ್ಟು 17 ಮಂದಿ ಮೇಲ್ವರ್ಗದ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಆರ್‌ಜೆಡಿ ಹಾಗೂ ಕಾಂಗ್ರೆಸ್ ಪಕ್ಷದಿಂದ ತಲಾ ಆರು ಮಂದಿ ಹಾಗೂ ಸಿಪಿಐನಿಂದ ಒಬ್ಬರು ಆಯ್ಕೆಯಾಗಿದ್ದಾರೆ.

ಎರಡು ಪ್ರಮುಖ ಮೈತ್ರಿಕೂಟ ಹೊರತುಪಡಿಸಿ ಎಲ್‌ಜೆಪಿನಿಂದ ಒಬ್ಬರು ಮೇಲ್ವರ್ಗದ ಪ್ರತಿನಿಧಿ ಆಯ್ಕೆಯಾಗಿದ್ದಾರೆ. ಚಕಾಯಿ ಶಾಸಕ ಸುಮಿತ್ ಕುಮಾರ್ ಸಿಂಗ್ ಎಂಬ ಪಕ್ಷೇತರ ಕೂಡಾ ಮೇಲ್ವರ್ಗಕ್ಕೆ ಸೇರಿದವರು. ರಜಪೂತ್, ಭೂಮಿಹಾರ್, ಬ್ರಾಹ್ಮಣರು ಮತ್ತು ಕಾಯಸ್ಥ ಜನಾಂಗದವರು ಮೇಲ್ವರ್ಗದಲ್ಲಿ ಸೇರುತ್ತಾರೆ. 64 ಮೇಲ್ವರ್ಗದ ಶಾಸಕರ ಪೈಕಿ 28 ಮಂದಿ ರಜಪೂತರು. 21 ಮಂದಿ ಭೂಮಿಹಾರರು. 12 ಮಂದಿ ಬ್ರಾಹ್ಮಣರು ಹಾಗೂ ಮೂವರು ಕಾಯಸ್ಥ ಸಮುದಾಯಕ್ಕೆ ಸೇರಿದವರು.

2015ರ ಚುನಾವಣೆಯಲ್ಲಿ ಮೇಲ್ವರ್ಗದ 52 ಸದಸ್ಯರು ವಿಧಾನಸಭೆಯಲ್ಲಿದ್ದರು. ಈ ಬಾರಿ ಮೇಲ್ವರ್ಗದ ಬಲ 64ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ: ರಾಹುಲ್‌ಗಾಂಧಿ ‘ಶಿಕ್ಷಕರನ್ನು ಮೆಚ್ಚಿಸಲು ಚಡಪಡಿಸುವ ವಿದ್ಯಾರ್ಥಿಯಂತೆ, ಆದರೆ ಸಾಮರ್ಥ್ಯವಿಲ್ಲ’: ಬರಾಕ್ ಒಬಾಮ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

3 thoughts on “ಬಿಹಾರ ವಿಧಾನಸಭೆಯಲ್ಲಿ 25% ಶಾಸಕರು ಮೇಲ್ವರ್ಗದವರು; ಬಿಜೆಪಿ ಶಾಸಕರೇ ಹೆಚ್ಚು!

 • June 7, 2021 at 11:34 pm
  Permalink

  This page really has all of the information and facts I wanted about this subject and didn’t know who to ask.

  Reply
 • June 7, 2021 at 11:52 pm
  Permalink

  Thanks , I have recently been searching for information approximately this subject for a while and yours is the best I
  have came upon so far. But, what about the conclusion? Are you sure concerning the source?

  Reply
 • June 8, 2021 at 12:01 am
  Permalink

  hi!,I love your writing very much! percentage we keep in touch extra approximately your post on AOL?
  I need an expert in this area to unravel my problem. May be that is you!

  Taking a look ahead to look you.

  Reply

Leave a Reply

Your email address will not be published.

Verified by MonsterInsights