130 ಕೋಟಿ ಭಾರತೀಯರು ಯೋಧರ ಜೊತೆಗಿದ್ದಾರೆ; ನಿಮ್ಮ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ: ಪ್ರಧಾನಿ ಮೋದಿ

ಹಿಮಾಲಯದ ಶಿಖರಗಳು, ಮರುಭೂಮಿ, ದಟ್ಟ ಕಾಡುಗಳು ಅಥವಾ ಸಮುದ್ರಗಳ ಆಳವಾಗಿರಲಿ ಪ್ರತೀ ಸವಾಲಿನಲ್ಲೂ ನಿಮ್ಮ (ಸೈನಿಕರ) ಶೌರ್ಯವು ವಿಜಯ ಸಾಧಿಸಿದೆ. ಭಾರತೀಯರು ಯೋಧರ ಶೌರ್ಯದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೀಪಾವಳಿ ಹಬ್ಬವನ್ನು ಸೈನಿಕರೊಂದಿಗೆ ಆಚರಿಸುವ ಉದ್ದೇಶದಿಂದ ರಾಜಸ್ಥಾನದ ಜೈಸಾಲ್ಮೇರ್’ನ ಲೋಂಗೆವಾಲಗೆ ತೆರಳಿರುವ ಮೋದಿ,  1971 ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಸಮನ್ವಯತೆಗೆ ಉದಾಹರಣೆಯಾಗಿದೆ. ಸೈನಿಕರ ಕುರಿತ ಇತಿಹಾಸವನ್ನು ಓದಿದಾಗಲೆಲ್ಲಾ ಲಾಂಗ್‌ವಾಲಾ ಕದನ ನೆನಪಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇಂದು 130 ಕೋಟಿ ಭಾರತೀಯರು ನಿಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಯೋಧರ ಶೌರ್ಯ, ತ್ಯಾಗದ ಕುರಿತು ಪ್ರತೀಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಿದ್ದಾನೆ. ನಿಮ್ಮ ಅಜೇಯತೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ವಿಶ್ವದ ಯಾವುದೇ ಶಕ್ತಿಯು ನಮ್ಮ ವೀರ ಯೋಧರನ್ನು ನಮ್ಮ ದೇಶದ ಗಡಿಗಳನ್ನು ಕಾಪಾಡುವುದನ್ನು ತಡೆಯಲು ಸಾಧ್ಯವಿಲ್ಲ.

ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ರಕ್ಷಣಾ ವಲಯವನ್ನು ಆತ್ಮನಿರ್ಭರ ಮಾಡಲು ಭಾರತ ವೇಗವಾಗಿ ಕೆಲಸ ಮಾಡುತ್ತಿದೆ. ಸ್ಥಳೀಯ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಮೇಲೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ರಕ್ಷಣಾ ಕ್ಷೇತ್ರದ ಕುರಿತು ತೆಗೆದುಕೊಂಡಿರುವ ಈ ಒಂದು ನಿರ್ಧಾರ 130 ಕೋಟಿ ಭಾರತೀಯರು ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುವುದಕ್ಕೆ ಧ್ವನಿಯೆತ್ತಲು ಪ್ರೇರಣೆ ನೀಡುತ್ತದೆ.

ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂದು ಇಡೀ ವಿಶ್ವವೇ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಂತಾಗಿದ್ದು, 18ನೇ ಶತಮಾನದ ಚಿಂತನೆಗಳನ್ನು ನೆನಪಿಸುತ್ತಿದೆ. ಈ ಚಿಂತನೆಗಳ ವಿರುದ್ಧ ಭಾರತ ಬಲವಾದ ಧ್ವನಿಯೆತ್ತುತ್ತಿದೆ. ಇದೀಗ ಇಡೀ ವಿಶ್ವವೇ ಭಾರತ ಎಂದಿಗೂ, ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನ ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದೆ. ನಿಮ್ಮ ಶಕ್ತಿ, ಶೌರ್ಯದಿಂದಾಗಿ ಭಾರತ ಇಂದು ಈ ಖ್ಯಾತಿ ಹಾಗೂ ನಿಲುವಿನೊಂದಿಗಿರಲು ಸಾಧ್ಯವಾಗಿದೆ. ಇಂದು ಅಂತರಾಷ್ಟ್ರೀಯ ವೇದಿಕಗಳಲ್ಲಿ ಭಾರತ ತನ್ನ ಸ್ಪಷ್ಟ ಹೇಳಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ಇದಕ್ಕೆ ನೀವು ಕಾರಣ. ನೀವು ಈ ರಾಷ್ಟ್ರದ ಬಲವನ್ನು ಹೆಚ್ಚಿಸಿದ್ದೀರಿ ಎಂದು ಹೇಳಿದ್ದಾರೆ.

ಇಂದು ಭಾರತದ ಕಾರ್ಯತಂತ್ರಗಳು ಸ್ಪಷ್ಟವಾಗಿವೆ. ಇತರರನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ನೀತಿಯನ್ನು ಭಾರತ ನಂಬಿದೆ. ಆದರೆ ನಮ್ಮನ್ನು ಪರೀಕ್ಷಿಸಲು ಪ್ರಯತ್ನಿಸಿದರೆ, ಅವರು ಪಡೆಯುವ ಉತ್ತರ ತೀವ್ರವಾಗಿರುತ್ತದೆ.

ತಾಯ್ನಾಡಿಗೆ ನುಸುಳಿ ಬರುತ್ತಿರುವ ಉಗ್ರರನ್ನು ಹಾಗೂ ಅವರ ನಾಯಕರನ್ನು ಇಂದು ಸೇನಾಪಡೆಗಳು ಸದೆಬಡಿಯುತ್ತಿವೆ. ಇಂದು ಇಡೀ ವಿಶ್ವವೇ ಭಾರತದ ಎಂದಿಗೂ ತನ್ನ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದೆ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ನಮ್ಮ ಸಂವಿಧಾನದಲ್ಲೇ ಸೆಕ್ಯುಲರ್ ವಿರೋಧಿ ಮತ್ತು ಫೆಡರಲ್ ವಿರೋಧಿ ಅಂಶಗಳಿವೆಯೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights