ರಾಹುಲ್‌ಗಾಂಧಿ ‘ಶಿಕ್ಷಕರನ್ನು ಮೆಚ್ಚಿಸಲು ಚಡಪಡಿಸುವ ವಿದ್ಯಾರ್ಥಿಯಂತೆ, ಆದರೆ ಸಾಮರ್ಥ್ಯವಿಲ್ಲ’: ಬರಾಕ್ ಒಬಾಮ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅಸ್ಥಿರ ಮತ್ತು ಅಪಕ್ವ ಗುಣ ಹೊಂದಿದ್ದಾರೆ. ಅವರು ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕವಾಗಿರುವ ವಿದ್ಯಾರ್ಥಿಯಂತೆ, ಆದರೆ, ಯಾವುದೇ ವಿಷಯವನ್ನೂ ಕರಗತ ಮಾಡಿಕೊಂಡಿಲ್ಲ.  ಆ ಸಾಮರ್ಥ್ಯವಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆಂದು ವರದಿಯಾಗಿದೆ.

ಬರಾಕ್ ಒಬಾಮ ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಕುರಿತು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಮಾಡಿದ ವಿಮರ್ಶೆಯಲ್ಲಿ ಈ ಕುರಿತು ಹೇಳಲಾಗಿದೆ. ಪುಸ್ತಕದಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವಾರು ಅಮೆರಿಕ ಮತ್ತು ವಿಶ್ವ ನಾಯಕರ ಕುರಿತು ಅನಿಸಿಕೆಗಳಿವೆ ಎನ್ನಲಾಗಿದೆ.

“ಚಾರ್ಲ್ ಕ್ರಿಸ್ಟ್ ಮತ್ತು ರಹಾಮ್ ಎಮ್ಯುನಲ್‌ನಂಥ ವ್ಯಕ್ತಿಗಳ ಸೌಂದರ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಸೋನಿಯಾಗಾಂಧಿಯವರ ಉಲ್ಲೇಖದಂಥ ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಮಹಿಳೆಯ ಚೆಲುವಿನ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ” ಎಂದು ವಿಮರ್ಶೆ ತಿಳಿಸಿದೆ.

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಒಂದು ರೀತಿಯ “ನಿರ್ಭಯ ಸಮಗ್ರತೆಯನ್ನು ಹೊಂದಿದ್ದ ಪ್ರಭಾವಶಾಲಿ ವ್ಯಕ್ತಿಗಳು” ಎಂದು ಪುಸ್ತಕದಲ್ಲಿ ಹೇಳುತ್ತದೆಂದು ವಿಮರ್ಶೆಯು ಉಲ್ಲೇಖಿಸುತ್ತದೆ.

ಆತ್ಮಚರಿತ್ರೆಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ. ಮೊದಲನೆಯದು ನವೆಂಬರ್ 17 ರಂದು ಜಾಗತಿಕ ಬಿಡುಗಡೆಗೆ ನಿರ್ಧರಿಸಲಾಗಿದೆ. ಎರಡನೇ ಸಂಪುಟದ ಪ್ರಕಟಣೆಯ ದಿನಾಂಕವನ್ನು ನಿರ್ಧರಿಸಲಾಗಿಲ್ಲ.


ಇದನ್ನೂ ಓದಿ: ಮೋಸದ ಚುನಾವಣೆಯನ್ನು ಜನ ಒಪ್ಪುವುದಿಲ್ಲ; ನಾವೇ ಗೆಲ್ಲುತ್ತೇವೆ: ಟ್ರಂಪ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights