ಮೋಸದ ಚುನಾವಣೆಯನ್ನು ಜನ ಒಪ್ಪುವುದಿಲ್ಲ; ನಾವೇ ಗೆಲ್ಲುತ್ತೇವೆ: ಟ್ರಂಪ್‌

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಮುಗಿದಿದೆ. ಮತ ಎಣಿಕೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್‌ ಮತ್ತು ಕಮಲಾ ಹ್ಯಾರೀಸ್‌ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಂತರ ಕೊರೊನಾ ನಿಯಂತ್ರಣದ ಬಗ್ಗೆ ಗಮನ ಹರಿಸುತ್ತಿರುವುದಾಗಿ ಜೋ ಬೈಡೆನ್‌ ಹೇಳಿದ್ದಾರೆ. ಇನ್ನೇನು ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣವಚನವನ್ನೂ ಸ್ವೀಕರಿಸಲು ತಯಾರಿ ನಡೆಸುತ್ತಿದ್ದಾರೆ. ಆದರೆ, ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಹೀನಾಯ ಸೋಲು ಕಂಡಿರುವ ಡೊನಾಲ್ಡ್‌ ಟ್ರಂಪ್‌ ತಮ್ಮ ಸೋಲನ್ನು ಒಪ್ಪಿಕೊಳ್ಳದೇ. ತಾವೇ ಅಧ್ಯಕ್ಷರಾಗುವುದಾಗಿ ಹೇಳುತ್ತಲೇ ಇದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಟ್ರಂಪ್‌, “ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ” ಎಂದು ಮತ್ತೆ ಟ್ವೀಟ್‌ ಮಾಡಿದ್ದಾರೆ. ಇದು ಅಮೆರಿಕನ್ನರಲ್ಲಿ ಆಶ್ವರ್ಯವನ್ನೂ, ನಗೆಯನ್ನೂ ಉಂಟು ಮಾಡಿದೆ.

“ನಾವು ದೊಡ್ಡ ಗೆಲುವು ಸಾಧಿಸುತ್ತೇವೆ. ಈ ಮೋಸದ ಚುನಾವಣೆಯನ್ನು ಜನ ಒಪ್ಪುವುದಿಲ್ಲ. ಹೀಗಾಗಿ ನಾವೇ ಗೆಲುವು ಸಾಧಿಸುತ್ತೇವೆ” ಎಂದು ಟ್ರಂಪ್‌ ಟ್ವೀಟ್ ಮಾಡಿದ್ದಾರೆ.

ಈ ರೀತಿಯಾಗಿ  ಟ್ರಂಪ್ ಟ್ವೀಟ್​ ಮಾಡುತ್ತಿದ್ದಂತೆ ನೆಟ್ಟಿಗರು ಅವರನ್ನು ಮತ್ತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಚುನಾವಣೆ ಮುಗಿದು ಫಲಿತಾಂಶ ಹೊರ ಬಂದಿದೆ. ನೀವು ಸೋಲನುಭವಿಸಿದ್ದೀರಿ. ಮೊದಲು ಈ ಸೋಲನ್ನು ಒಪ್ಪಿಕೊಳ್ಳಿ ಎಂದು ಕಿಚಾಯಿಸಿದ್ದಾರೆ. ಕೆಲವರು ಅಪಹಾಸ್ಯವನ್ನೂ ಮಾಡಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರು 7,45,75,812 ಮತಗಳನ್ನು ಪಡೆದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್ ಅವರಿಗೆ 7,03,99,780 ಮತಗಳು ಸಂದಿವೆ.


ಇದನ್ನೂ ಓದಿ: ಅಮೆರಿಕಾ ಫಲಿತಾಂಶದ ನಂತರ ಮತ ಚಲಾಯಿಸಿ ಎಂದ ಟ್ರಂಪ್‌ ಪುತ್ರ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights