‘ಸಿಡಿ ಕೋಟಾದಲ್ಲಿ ಮಂತ್ರಿಗಿರಿ’ ಬಸವನಗೌಡ ಯತ್ನಾಳ್ ಬಿಎಸ್ವೈ ವಿರುದ್ಧ ಗಂಭೀರ ಆರೋಪ!

ಏಳು ಮಂದಿ ಸಚಿವ ಸ್ಥಾನ ಆಯ್ಕೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ‘ಸಿಡಿ ಕೋಟಾದಲ್ಲಿ ಮಂತ್ರಿ ಸ್ಥಾನ ಕೊಡಲಾಗಿದೆ ‘ ಎಂದು ವಿಜಯಪುರದಲ್ಲಿ ಶಾಸಕ ಬಸವನಗೌಡ ಯತ್ನಾಳ್ ಬಿಎಸ್ವೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

“ಬ್ಲಾಕ್ ಮೇಲ್ ಗೆ ಹೆದರಿ ಸಿಎಂ ಯಡಿಯೂರಪ್ಪ ಸಚಿವ ಸ್ಥಾನ ನೀಡಿದ್ದಾರೆ. ಸಿಡಿ ಕೋಟಾದಲ್ಲಿ ಅವರು ಮಂತ್ರಿಸ್ಥಾನ ಕೊಟ್ಟಿದ್ದಾರೆ. ಬ್ಲಾಕ್ ಮೇಲ್  ಮಾಡಿದವರಿಗೆ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ, ಇಬ್ಬರನ್ನು ಸಚಿವರನ್ನಾಗಿ ಮಾಡಿದ್ದಾರೆ. ಹೈಕಮಾಂಡಗೆ ಮನಸ್ಸಿಲ್ಲದೇ ಇದ್ದರೂ ಸಿಎಂ ಇವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ನಾಲ್ಕು ತಿಂಗಳ ಹಿಂದೆ ಇವರು  ನೆಲಮಂಗಲದಲ್ಲಿ ಸಭೆ ಮಾಡಿ ನನಗೆ ನೀವೇ ಸಿಎಂ ಆಗಿ ಆದರೆ ಯಡಿಯೂರಪ್ಪನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದಿದ್ದರು. ಅವರು ಯಾರು ಹೀಗೆ ಹೇಳಿದ್ದರೋ ಅವರಿಗೇ ಮಂತ್ರಿಗಿರಿ ಸಿಕ್ಕಿದೆ.ಅಸಯ್ಯವಾಗಿ ವೀಡಿಯೋ ಮೂಲಕ ಯಾರು ಬ್ಲಾಕ್ ಮೇಲ್ ಮಾಡ್ತಾರೋ ಅವರಿಗೆ ಮಂತ್ರಿಗಿರಿ ಕೊಟ್ಟಿದ್ದಾರೆ” ಎಂದು ಯತ್ನಾಳ್ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ರಕ್ತ ಸಂಬಂಧಿಯಿಂದ ಇಂತಹ ಕೆಲಸ ನಡೆಯುತ್ತಿದೆ. ಒಂದು ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ವಿರೋಧ ವ್ಯಕ್ತಪಡಿಸಲು 83 ಕೋಟಿ ವೀರಶೈವ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದರಲ್ಲಿ ಸ್ವಾಮಿಜಿಗಳನ್ನು ಬಳಸಿಕೊಂಡಿದ್ದಾರೆ.

ವಿರೋಧ ಪಕ್ಷ ಇಲ್ಲ ಸತ್ತುಹೋಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿಯಲ್ಲಿ ವಿಲೀನಗೊಂಡಿದ್ದಾರೆ. ಬಿಜೆಪಿಯಲ್ಲಿ ಸಿಡಿ ಕೋಟ ಇದೆ ಎಂದು ಯತ್ನಾಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

 

Spread the love

Leave a Reply

Your email address will not be published. Required fields are marked *