ಅಮೆರಿಕಾದಲ್ಲಿ ಬೈಡನ್ ಗೆಲುವು: ಯಾರು ಗೊತ್ತೇ ಈ ಜೋ ಬೈಡನ್! ಪರಿಚಯ
ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಾಗ್ತಾರೆ ಮುಂದಿನ ಅಧ್ಯಕ್ಷ ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಚುನಾವಣೆಯ ಮತ ಎಣಿಕೆ ಮುಗಿದಿದ್ದು, ಡೆಮಾಕ್ರಟಿಕ್ ಪಕ್ಷದ ’ಜೋ ಬೈಡನ್’ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಪರಿಚಯ ಇಲ್ಲಿದೆ.
ಜೋಸೆಫ್ ರಾಬಿನೆಟ್ ಬಿಡೆನ್ ಜೂನಿಯರ್ ಎಂಬ ಹೆಸರಿನ 77 ವರ್ಷದ “ಜೋ ಬೈಡನ್” ಎಂದು ಕರೆಯಲ್ಪಡುವ ಇವರು ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಸ್ಕ್ರಾಂಟನ್ನಲ್ಲಿ ನವೆಂಬರ್ 20, 1942 ಜನಿಸಿದರು. ತಮ್ಮ ನಾಲ್ಕು ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಮೊಮ್ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವಿಲ್ಮಿಂಗ್ಟನ್ ರಾಜ್ಯದ ಡೆಲವೇರ್ನಲ್ಲಿ ವಾಸಿಸುತ್ತಿದ್ದಾರೆ.

1972 ರಲ್ಲಿ ಡೆಲವೇರ್ನಿಂದ ಮೊದಲ ಬಾರಿ ಸೆನೆಟರ್ ಆಗಿ ಆಯ್ಕೆಯಾಗಿದ್ದ ಇವರು, ಇದುವರೆಗೂ ಆರು ಭಾರಿ ಸೆನೆಟರ್ ಆಗಿ ಚುನಾಯಿತರಾಗಿದ್ದಾರೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಕಾಲದಲ್ಲಿ 47 ನೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಡೆಮಾಕ್ರಟಿಕ್ ಪಕ್ಷದಿಂದ 1988 ಮತ್ತು 2008 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನವನ್ನೂ ಕೋರಿದ್ದರು.
ಸುಮಾರು ಅರ್ಧ ಶತಮಾನದಿಂದ ಸಾರ್ವಜನಿಕ ಜೀವನದಲ್ಲಿರುವ ಬಿಡೆನ್ ತಮ್ಮ ಸರ್ಕಾರದ ಅನುಭವವನ್ನು ಒತ್ತಿಹೇಳುತ್ತಾ, ಅಪಾಯಕಾರಿ ಮತ್ತು ಅನಿಶ್ಚಿತ ಜಗತ್ತಿನಲ್ಲಿ ಸ್ಥಿರವಾಗಿ, ಪರಿಭ್ರಮಿತ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟು ಪ್ರಾರಂಭವಾಗುತ್ತಿದ್ದಂತೆ, ಮತದಾರರನ್ನು ಸೆಳೆಯಲು ಆರೋಗ್ಯ ರಕ್ಷಣೆ ಮತ್ತು ಅರ್ಥಶಾಸ್ತ್ರ ತಜ್ಞರ ಸಲಹೆಯಂತೆ ಹಲವು ಶಿಫಾರಸುಗಳನ್ನು ರೂಪಿಸಿದ್ದರು. ಕೊರೊನಾ ವೈರಸ್ ಪರೀಕ್ಷೆಗಳನ್ನು ಇನ್ನೂ ಹಚ್ಚು ಮಾಡುವುದು ಮತ್ತು ಉಚಿತಗೊಳಿಸಿವುದು, ರೋಗಿಗಳಿಗೆ ಲಸಿಕೆಯನ್ನು ಕೂಡಾ ಉಚಿತವಾಗಿ ನೀಡುವುದು ಕೂಡಾ ಇವರ ಶಿಫಾರಸ್ಸಿನಲ್ಲಿದೆ. ಅಷ್ಟೇ ಅಲ್ಲದೆ ಮಾಜಿ ಅಧ್ಯಕ್ಷ ಟ್ರಂಪ್ ಕೊರೊನಾ ವೈರಸ್ ಅನ್ನು ನಿರ್ವಹಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದರು.
ಜೋ ಬಿಡೆನ್ ”ಆರೈಕೆ ಕಾಯ್ದೆ”ಯ ಅಂಗೀಕಾರದ ಸಮಯದಲ್ಲಿ ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು ಆರೋಗ್ಯ ರಕ್ಷಣೆ ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದರು. ಇದು ಅವರ ಕುಟುಂಬದ ವೈಯಕ್ತಿಕ ದುರಂತಗಳನ್ನು ನೆನಪಿ ಹೇಳುವ, ಚರ್ಚಿಸುವ ಮಾತಾಗಿದ್ದು, 1972 ರಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ತಮ್ಮ ಮೊದಲ ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡಿದ್ದರು ಮತ್ತು 2015 ರಲ್ಲಿ ಅವರ ಮಗ ಬ್ಯೂ ಬಿಡೆನ್ ಮೆದುಳಿನ ಕ್ಯಾನ್ಸರ್ನಿಂದ ನಿಧನರಾದ್ದರು. ಹಾಗಾಗಿಯೆ ಆರೋಗ್ಯ ರಕ್ಷಣೆಯನ್ನು ಅವರು “ವೈಯಕ್ತಿಕ ಆದ್ಯತೆ” ಎನ್ನುತ್ತಾರೆ.

ಅಮೆರಿಕ ಸೆನೆಟ್ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಿಡೆನ್, ದ್ವಿಪಕ್ಷೀಯತೆ ಮೌಲ್ಯವನ್ನು ತಾನು ದೃಡವಾಗಿ ನಂಬುತ್ತೇನೆ ಎನ್ನುತ್ತಾರೆ. ತಮ್ಮ ಪ್ರತಿಸ್ಫರ್ಧಿ ರಿಪಬ್ಲಿಕನ್ ಪಕ್ಷದವರೊಂದಿಗೂ ಸಮಾಲೋಚನೆ ಮಾಡುತ್ತಾರೆ ಮತ್ತು ಅವರ ಅಭಿಪ್ರಾಯಗಳನ್ನು ಕೇಳುತ್ತಾರೆ.
77 ಹರೆಯದ ಬಿಡೆನ್ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ರೊನಾಲ್ಡ್ ರೇಗನ್ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದರು. 1989 ರಲ್ಲಿ ರೇಗನ್ ಅಧಿಕಾರ ತೊರೆದಾಗ ಅವರಿಗೆ 77 ವರ್ಷವಾಗಿತ್ತು. ಇಷ್ಟೇ ಅಲ್ಲದೆ ಜೋ ಬಿಡೆನ್ ಅಮೆರಿಕದ ಇತಿಹಾಸದಲ್ಲೇ ಅತೀ ಹೆಚ್ಚು ಮತಗಳನ್ನು ಪಡೆದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಈ ದಾಖಲೆ ಬರಾಕ್ ಒಬಾಮೆ ಅವರ ಹೆಸರಲ್ಲಿತ್ತು. ಕಳೆದ 100 ವರ್ಷಗಳಲ್ಲಿ ಅತಿಹೆಚ್ಚು ಮತದಾನದ ಪ್ರಮಾಣ ಅಮೆರಿಕಾ ಈ ಬಾರಿ ಕಂಡಿದೆ.
ಇದನ್ನೂ ಓದಿ: ಅಮೆರಿಕಾ ಚುನಾವಣೆ: ಹೆಚ್ಚು ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ ಬೈಡನ್!

