ರಾಜ್ಯ ಅಧಿವೇಶನ: ಚರ್ಚೆಯೇ ಇಲ್ಲದೆ ಅಂಗೀಕರಿಸುತ್ತವಾ 19 ಸುಗ್ರೀವಾಜ್ಞೆಗಳು, 40 ವಿದೇಯಕಗಳು

ಇಂದಿನಿಂದ ರಾಜ್ಯದ ಮುಂದಾಗಿರು ಆಧಿವೇಶನ ಆರಂಭವಾಗಲಿದೆ. ಕೊರೊನಾ ಸಂಕಷ್ಟದ ನಡುವೆ ಆರಂಭವಾಗುತ್ತಿರುವ ಈ ಅಧಿವೇಶನ ವನ್ನು ಕಡಿಮೆ ಸಮಯದಲ್ಲಿ ಮುಗಿಸಲು ನಿರ್ಧರಿಸಿದೆ. ಆದರೆ, ಚರ್ಚೆಯಾಗಬೇಕಿರುವ ವಿಷಯಗಳು ಸಾಕಷ್ಟಿವೆ.

ಈಗಾಗಲೇ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ, ಕ್ಯಾಂಪೇನ್‌ಗಳನ್ನೇ ಮಾಡುತ್ತಿರುವ 19 ಸುಗ್ರೀವಾಜ್ಞೆಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಈ ಎಲ್ಲವೂ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಬೇಕು. ಅಲ್ಲದೆ, 40 ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿದ್ದು, ಅವುಗಳ ಬಗ್ಗೆಯೂ ಚರ್ಚೆಯಾಗುವ ಅಗತ್ಯವಿದೆ.

ಆದರೆ, ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಸೆ.30 ರವರೆಗೆ ನಡೆಯಬೇಕಿರುವ ಅಧಿವೇಶನವನ್ನು ಮೂರು ಅಥವಾ ನಾಲ್ಕು ದಿನಕ್ಕೆ ಮೊಟಕುಗೊಳಿಸುವ ಸಾಧ್ಯತೆ ಸರ್ಕಾರದಿಂದ ಹೆಚ್ಚಾಗಿದೆ ಎನ್ನಲಾಗಿದೆ.

ಕೊರೊನಾ ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡು ಎಪಿಎಂಸಿ, ಆರೋಗ್ಯ ಇಲಾಖೆ, ಭೂಸುಧಾರಣಾ ಕಾಯ್ದೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಗಳಿಗೆ ಸಂಬಂಧಿಸಿದ 19 ಸುಗ್ರೀವಾಜ್ಷೆಗಳನ್ನು ರಾಜ್ಯದಲ್ಲಿ ಜಾರಿ ಮಾಡಿದೆ.

ನಿಯಮಗಳ ಪ್ರಕಾರ, ಸರ್ಕಾರ ಹೊಡಿಸಿದ ಯಾವುದೇ ಸುಗ್ರೀವಾಜ್ಞೆಯು ಆರು ತಿಂಗಳ ಒಳಗಾಗಿ ಉಭಯ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರ ಪಡೆದು ಕಾಯ್ದೆಯ ರೂಪ ಪಡೆದುಕೊಳ್ಳಬೇಕು. ಇಲ್ಲವಾದರೆ, ಸರ್ಕಾ ಮತ್ತೊಮ್ಮೆ ಸುಗ್ರೀವಾಜ್ಞೆ ಜಾರಿಮಡಬೇಕಾಗುತ್ತದೆ. ಎರಡು ಬಾರಿ ಸುಗ್ರೀವಾಜ್ಞೆ ಹೊರಡಿಸಿ ನಂತರವೂ ಸದನಗಳಲ್ಲಿ ಅನುಮೋದನೆ ದೊರೆಯದಿದ್ದರೆ ಸುಗ್ರೀವಾಜ್ಷೆ ರದ್ದಾಗುತ್ತದೆ. ಇದು ಸರ್ಕಾರಕ್ಕೆ ಮುಖಭಂಗವೂ ಆಗಲಿದೆ.

ಈ ಕಡಿಮೆ ಅವಧಿಯಲ್ಲಿ 40 ವಿದೇಯಗಳು, 19 ಸುಗ್ರೀವಾಜ್ಞೆಗಳ ಬಗೆಗಿನ ಚರ್ಚೆ ಸಾಧ್ಯವೇ ಇಲ್ಲ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಈ ಕಾರಣಕ್ಕಾಗಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಧಿವೇಶನವನ್ನು ಅಕ್ಟೋಬರ್ 10ರ ವರೆಗೂ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಆದರೆ, ಇರುವ ಸಮಯವನ್ನೂ ಮೊಟಕುಗೊಳಿಸಲು ಮುಂದಾಗಿರುವ ಸರ್ಕಾರ, ವಿದೇಯಕಗಳು ಹಾಗೂ ಮಸೂದೆಗಳ ಮೇಲೆ ಚರ್ಚೆಯನ್ನೇ ನಡೆಸದೆ ಅಂಗೀಕಾರಕ್ಕೆ ಮುಂದಾಗುವ ಸಾಧ್ಯತೆ ಎದ್ದುಕಾಣುತ್ತಿದೆ. ಅಥವಾ, ವಿದೇಯಕಗಳ ಮೇಲಿನ ಚರ್ಚೆಯನ್ನು ಮುಂದಿನ ಅಧಿವೇಶನಕ್ಕೆ ಮುಂದೂಡಿ, ಸುಗ್ರೀವಾಜ್ಞೆ ಮಸೂದೆಗಳ ಮೇಲಷ್ಟೇ ಚರ್ಚೆ ನಡೆಸಹುದು ಎನ್ನಲಾಗುತ್ತಿದೆ. ಆದರೆ, ಈ ಸಾಧ್ಯತೆ ಬಹಳ ಕಡಿಮೆ ಇದೆ.

ರಾಜ್ಯ ಸರ್ಕಾರ ಹೊರಡಿಸಿರುವ ಪ್ರಮುಖ ಸುಗ್ರೀವಾಜ್ಞೆಗಳು:

ಭೂಸುರಣಾ ಕಾಯ್ದೆಗೆ ತಿದ್ದುಪಡಿ,

ಕಾರ್ಮಿಕ ಕಾಯ್ದೆ ತಿದ್ದುಪಡಿ,

ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ (ಎಪಿಎಂಸಿ)

ಭೂಕಬಳಿಕೆ ನಿಷೇಧ,

ಸಾಂಕ್ರಾಮಿಕ ರೂಗಗಳ ತಡೆ,

ಪಟ್ಟಣ ಗ್ರಾಮಾಂತರ ಯೋಜನೆ,

ಬಿಡಿಎ ಮತ್ತು ವಿಶ್ವವಿದ್ಯಾನಿಲಯಗಳ ಕಾನೂನು ತಿದ್ದುಪಡಿ,

ಶಾಸಕರ ವೇತನ ಕಡಿತ,

ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ,

ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ಯಗಳ ತಿದ್ದುಪಡಿ,

ಈ ಮಸೂದೆಗಳ ಸೇರಿದಂತೆ ಒಟ್ಟು 19 ಸುಗ್ರೀವಾಜ್ಞೆಗಳ ಬಗ್ಗೆ ಚರ್ಚೆಯಾಗಬೇಕಿದ್ದು, ಪ್ರಮುಖವಾಗಿ ಎಪಿಎಂಸಿ, ಕಾರ್ಮಿಕ ಕಾಯ್ದೆ, ಕರ್ನಾಟಕದ ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿಗಳಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.

ಇಂದು ರೈತ, ದಲಿತ, ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಸರ್ಕಾರ ವಿರುದ್ಧ, ಸುಗ್ರೀವಾಜ್ಞೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿವೆ.

ವಿಪಕ್ಷಗಳು ಸುಗ್ರೀವಾಜ್ಞೆಗಳ ವಿರುದ್ಧ ಅಧಿವೇಶನದಲ್ಲಿ ಧೀರ್ಘ ಚರ್ಚೆನಡೆಸಲು ಮುಂದಾಗಿವೆ. ಆದರೆ, ಚರ್ಚೆಯೇ ನಡೆಯದೇ ಅಂಗೀಕಾರಕ್ಕೆ ಹಾಕುವ ಸಾಧ್ಯತೆಯ ಆತಂಕ ಎದುರಾಗಿರಾಗಿದೆ.


ಇದನ್ನೂ ಓದಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಂಘಟನೆಗಳ ಐಕ್ಯ ಹೋರಾಟ: ಬೆಂಗಳೂರಿ‌ನಲ್ಲಿ ಜನತಾ ಅಧಿವೇಶನ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights