ಪ್ರವಾಸಿಗರ ಭೇಟಿಗೆ ಮುಕ್ತವಾದ ಪ್ರೇಮಿಗಳ ಸೌಧ ತಾಜ್‌ಮಹಲ್‌!

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದ್ದ  ತಾಜ್ ಮಹಲ್‌ಗೆ ಸೋಮವಾರದಿಂದ ಪ್ರವಾಸಿಗರಿಗಾಗಿ ತೆರೆಯಲಾಗಿದೆ.

ಪ್ರೀತಿಯ ಸಂಕೇತವೂ, ಪ್ರೇಮಿಗಳ ಆಗರವೂ ಆಗಿರುವ ತಾಜ್‌ಮಹಲ್‌ಗೆ ಸಾಮಾಜಿಕ ಅಂತರ ಸೇರಿದಂತೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರವಾಸಿಗರು ಭೇಟಿ ನೀಡಲು ಅವಕಾಶವಿರುತ್ತದೆ. ಆದರೆ, ದಿನದ ಪ್ರವಾಸಿಗರ ಭೇಟಿಗೆ ಮಿತಿಯ ನಿರ್ಬಂಧವಿದ್ದು, ಪ್ರತಿದಿನ 5000 ಪ್ರವಾಸಿಗರಿಗೆ ಮಾತ್ರ ಪ್ರವೇಶ ಸಿಗಲಿದೆ.

ತಾಜ್‌ಮಹಲ್‌ಗೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಖರೀದಿಸಬೇಕು. ತಾಜ್‌ಮಹಲ್‌ ಬಳಿ ಟಿಕೆಟ್‌ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳ ಹೇಳಿದ್ದಾರೆ.

ಆಗ್ರಾ ಕೋಟೆ
ಆಗ್ರಾ ಕೋಟೆ

ಅಲ್ಲದೆ, ಆಗ್ರಾ ಕೋಟೆಗೂ ಭೇಟಿ ನೀಡಲು ಅವಕಾಶ ನೀಡಲಾಗಿದ್ದು, ಆಗ್ರಾ ಕೋಟೆಗೆ ದಿನವೊಂದಕ್ಕೆ 2,500 ಪ್ರವಾಸಿಗರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಜನರನ್ನು ಆಕರ್ಷಿಸುವ (ಭೇಟಿನೀಡುವ) ತಾಜ್‌ಮಹಲ್‌, ಸರ್ಕಾರದ ಪ್ರಮುಖ ಆದಾಯದ ಮೂಲವಾಗಿದೆ. ಲಾಕ್‌ಡೌನ್‌ ಎಫೆಕ್ಟ್‌ನಿಂದ ಕುಸಿದಿರುವ ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದೊಂದೇ ಕ್ಷೇತ್ರಗಳು ತೆರೆದುಕೊಳ್ಳುತ್ತಿದ್ದು, ತಾಜ್‌ಮಹಲ್‌ ಕೂಡ ಆದಾಯವನ್ನು ಹೆಚ್ಚಿಸಲಿದೆ. ಆದ್ದರಿಂದ ಹೆಚ್ಚುತ್ತಿರುವ ಕೊರೊನಾ ಅಪಾಯದ ಹೊರತಾಗಿಯೂ ಸರ್ಕಾರವು ಈಗ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುತ್ತಿದೆ.


ಇದನ್ನೂ ಓದಿ: ಐದು ತಿಂಗಳ ನಂತರ ಪ್ರವಾಸಿಗರಿಗೆ ತೆರೆಯಲಿದೆ ನಂದಿ ಬೆಟ್ಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights