ಕ್ವಾರಿಯಲ್ಲಿ ಸ್ಪೋಟ: ಕರ್ನಾಟಕ, ತಮಿಳುನಾಡು ಮೂಲಕ ವಲಸೆ ಕಾರ್ಮಿಕರು ಸಾವು

ಕೇರಳದ ಎರ್ನಾಕುಲಂನಲ್ಲಿರುವ ಮಲಯತ್ತೂರಿನ ಕ್ವಾರಿಯೊಂದರಲ್ಲಿ ಸೋಮವಾರ ಮುಂಜಾನೆ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ ಇಲ್ಲಿನ ಕಟ್ಟಡದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಡಲಾಗಿತ್ತು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸ್ಪೋಟಗಳು ಇದ್ದಕ್ಕಿಂದಂತೆ ಸ್ಪೋಟಿಸಿದ್ದು, ಅಲ್ಲೇ ಮಲಗಿದ್ದ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ ನಾಗ ಎಂದು ಗುರುತಿಸಲಾಗಿದೆ. ಕರ್ನಾಟಕದ ಕಾರ್ಮಿಕನ ದೇಹ ಗುರುತು ಸಿಗದಂತೆ ಛಿದ್ರವಾಗಿತ್ತು. ತಮಿಳುನಾಡಿನ ಕಾರ್ಮಿಕನನ್ನು ಹೊರಗೆಳೆದ ಬಳಿಕ ಸಾವನ್ನಪ್ಪಿದ್ದಾರೆ.

ಕಲಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: NLC Boiler ಸ್ಪೋಟ; 6 ಜನ ಸಾವು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights