‘ಮನಿಕೆ ಮಗೆ ಹಿತೆ’ ಹಾಡು ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮಂಡಲ್..!
ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡು ಏಕ್ ಪ್ಯಾರ್ ಕಾ ನಾಗ್ಮಾ ಹೈ ಹಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ರಾನು ಮಂಡಲ್ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು. ಶೀಘ್ರದಲ್ಲೇ ಆಕೆಯನ್ನು ಮುಂಬೈನಲ್ಲಿ ರಿಯಾಲಿಟಿ ಶೋಗೆ ಆಹ್ವಾನಿದ್ದೇ ತಡ ರಾನು ಅದೃಷ್ಟ ಕುದುರಿಸಿಬಿಟ್ಟಿದೆ. ಆ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಂಡ ಹಿಮೇಶ್ ರೇಶಮಿಯಾ, ರಾನು ಅವರ ಹಾಡುವ ಕೌಶಲ್ಯವನ್ನು ಮೆಚ್ಚಿ ಅವರ ಚಿತ್ರಕ್ಕಾಗಿ ಹಾಡಲು ವಿನಂತಿಸಿದರು. ಆ ನಂತರ ರಾನು ಹಾಡು ಸಖತ್ ವೈರಲ್ ಆಗಿವೆ.
ಸದ್ಯ ಗಾಯಕಿ ರಾನು ಮಂಡಲ್ ‘ಮಣಿಕೆ ಮಗೆ ಹಿತೆ’ ಹಾಡನ್ನು ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಡಿನ ಕ್ಲಿಪ್ ಅನ್ನು ಈಗಾಗಲೇ 54,000 ಬಾರಿ ವೀಕ್ಷಿಸಲಾಗಿದೆ.
ರಾನು ಮಂಡಲ್ ಅವರ ಹೊಸ ವೀಡಿಯೊವನ್ನು ವೀಕ್ಷಿಸಿದ ನಂತರ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಸಿಂಬೋಲ್ ಪೋಸ್ಟ್ ಮಾಡಿದ್ದಾರೆ.
ಮಣಿಕೆ ಮಗೇ ಹಿತೆ ಎಂಬುದು ಸತೀಶನ್ ರತ್ನಾಯಕ ಅವರ 2020 ರ ಸಿಂಹಳ ಗೀತೆ. ಯೂಟ್ಯೂಬ್ ನಲ್ಲಿ ಸಿಂಹಳಿ ಭಾಷೆಯ ಈ ಹಾಡು ಮೂಡಿಸಿದ ಸಂಚಲನ ಅದ್ಭುತವಾದುದು. ಯೊಹಾನಿ ಎಂದೇ ಜನಪ್ರಿಯರಾಗಿರುವ 28 ವರ್ಷದ ಯುವತಿ ಈ ಹಾಡಿನ ಗಾಯಿಕಿ. ಯೊಹಾನಿ ದಿಲೋಕಾ ಡಿಸಲ್ವಾ ಎಂಬುದು ಪೂರ್ಣ ಹೆಸರು. ಶ್ರೀಲಂಕಾದ ಈ ಗಾಯಕಿಯು ಕವಯಿತ್ರಿ, ರ್ಯಾಪರ್, ಮ್ಯೂಸಿಕ್ ಪ್ರೊಡ್ಯೂಸರ್, ಯೂಟ್ಯೂಬರ್ ಕೂಡ ಹೌದು.
ನಶೆ ಏರಿಸುವ ಕಂಠದಲ್ಲಿ ಹಾಡಿದ ಈ ಹಾಡನ್ನು ಕೆಲವು ತಿಂಗಳ ಹಿಂದೆಯೇ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ. ಇದು ಇತ್ತೀಚೆಗಷ್ಟೇ ಭಾರತದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಗಮನಸೆಳೆದಿತ್ತು. ಅವರು ಅದನ್ನು ಶೇರ್ ಮಾಡಿದ ನಂತರದಲ್ಲಿ ಯೂಟ್ಯೂಬ್ ನಲ್ಲಿ ‘ಮನಿಕೆ ಮಗೆ ಹಿತೆ’ ಮೂಡಿಸಿದ ಸಂವಲನ ಸ್ವತ: ಯೊಹಾನಿ ಮತ್ತು ಅವರ ತಂಡವನ್ನು ದಿಗ್ಭ್ರಮೆಗೆ ಕೆಡವಿದೆ. ಯೊಹಾನಿಯ ಮಣಿಕೆ ಮಗೆ ಹಿತೆ ಆನ್ಲೈನ್ನಲ್ಲಿ ಲಭ್ಯವಾದ 3 ತಿಂಗಳಲ್ಲಿ ಯೂಟ್ಯೂಬ್ನಲ್ಲಿ 91 ಮಿಲಿಯನ್ ವೀಕ್ಷಣೆಗಳನ್ನು ಮೀರಿದೆ. ಆಕೆಯ ಧ್ವನಿಯಿಂದ ಪ್ರಭಾವಿತರಾದ ಅತೀಂದ್ರ ಅವರು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್ ಅನ್ನು ಕೆಲವೇ ದಿನಗಳಲ್ಲಿ 2.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.