ಪೊಲೀಸ್ ದಾಳಿಯಲ್ಲಿ ಉತ್ತರ ಪ್ರದೇಶ ಉದ್ಯಮಿ ಅನುಮಾನಾಸ್ಪದ ಸಾವು : 6 ಪೊಲೀಸರ ಅಮಾನತು!

ಪೊಲೀಸ್ ದಾಳಿಯಲ್ಲಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಅನುಮಾನಾಸ್ಪದ ಸಾವನ್ನಪ್ಪಿದ ಬೆನ್ನಲ್ಲೇ 6 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಗೋರಖ್‌ಪುರ್ ಹೋಟೆಲ್‌ನಲ್ಲಿ ಸೋಮವಾರ ತಡರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ ಉತ್ತರಪ್ರದೇಶದ ಉದ್ಯಮಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದ ಆರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ  ಉದ್ಯಮಿ ಕುಟುಂಬಕ್ಕೆ ರೂ .10 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ಮನೀಶ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಮನೀಸ್ ಹಾಗೂ ಸ್ನೇಹಿತರು ತಾವು ವ್ಯಾಪಾರ ಸ್ನೇಹಿತನನ್ನು ಭೇಟಿ ಮಾಡಲು ಗೋರಖ್‌ಪುರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಇವರು ಸೋಮವಾರ ಮಧ್ಯರಾತ್ರಿ ನಡೆದ ದಾಳಿಯ ಸಮಯದಲ್ಲಿ  ಬೇರೆ ಬೇರೆ ನಗರಗಳ ಇಬ್ಬರು ಸ್ನೇಹಿತರೊಂದಿಗೆ ಹೋಟೆಲ್ ಕೊಠಡಿಯಲ್ಲಿದ್ದರು.

“ನಾವು ಮೂವರು ನಮ್ಮ ಕೋಣೆಯಲ್ಲಿ ಮಲಗಿದ್ದೆವು. ಸುಮಾರು 12: 30 ರ ಸುಮಾರಿಗೆ ಡೋರ್‌ಬೆಲ್ ಬಾರಿಸಿತು. ನಾನು ಬಾಗಿಲು ತೆರೆದಿದ್ದೇನೆ. ಅಲ್ಲಿ 5-7 ಪೋಲಿಸರು ಇದ್ದರು ಮತ್ತು ರಿಸೆಪ್ಶನ್‌ನಿಂದ ಹುಡುಗನೂ ಇದ್ದ. ಅವರು ಕೋಣೆಯ ಒಳಗೆ ಬಂದು ನಮ್ಮನ್ನು ಐಡಿ ಕೇಳಲು ಪ್ರಾರಂಭಿಸಿದರು. ನಾನು ನನ್ನ ಐಡಿಯನ್ನು ತೋರಿಸಿ ನಂತರ ಮನೀಶ್ ನನ್ನು ಎಬ್ಬಿಸಿದೆ. ತಡರಾತ್ರಿಯಲ್ಲಿ ನಮ್ಮನ್ನು ಯಾಕೆ ಪ್ರಶ್ನೆ ಮಾಡುತ್ತಿದ್ದೀರಿ ಎಂದು ನಾವು ಪೊಲೀಸರನ್ನು ಕೇಳಿದೆವು. ನಂತರ ಪೊಲೀಸರು ನಮ್ಮನ್ನು ಬೆದರಿಸಲು ಆರಂಭಿಸಿದರು ” ಎಂದು ಹರಿಯಾಣದ ಗುರ್ಗಾಂವ್‌ ನಿವಾಸಿಯಾಗಿದ್ದ ಮತ್ತು ಹೋಟೆಲ್ ಕೊಠಡಿಯೊಳಗಿದ್ದವರಲ್ಲಿ ಒಬ್ಬರಾದ ಹರ್ವೀರ್ ಸಿಂಗ್ ವರದಿಗಾರರಿಗೆ ತಿಳಿಸಿದರು.

“ಅವರು ಕುಡಿದಂತೆ ಕಾಣಿಸುತ್ತಿದ್ದರು. ನನಗೆ ಒಬ್ಬ ಪೋಲಿಸ್ ಹೊಡೆದ. ಕೆಲವು ಪೊಲೀಸರ ಬಳಿ ಬಂದೂಕು ಇತ್ತು. ನಂತರ ಪೊಲೀಸರು ನನ್ನನ್ನು ಹೊರಗೆ ಕರೆದೊಯ್ದರು. ಸ್ವಲ್ಪ ಸಮಯದ ನಂತರ, ಮನೀಶ್‌ನನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ನಾನು ನೋಡಿದೆ. ಅವನ ಮುಖದ ಮೇಲೆ ರಕ್ತವೆಲ್ಲಾ ಆವರಿಸಿತ್ತು “ಎಂದು ಹರ್ವೀಂಗ್ ಸಿಂಗ್ ಹೇಳುತ್ತಾರೆ.

“ಗೋರಖ್‌ಪುರ ಪೊಲೀಸರು ಹೋಟೆಲ್‌ನಲ್ಲಿ ತಂಗಿರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹೀಗಾಗಿ ವಿಚಾರಣೆಗೆ ಹೋಟೆಲ್ ಗೆ ತೆರಳಿದ್ದಾರೆ. ಪುರುಷರು ಬೇರೆ ಬೇರೆ ನಗರಗಳಿಂದ ಬಂದವರಾಗಿದ್ದರಿಂದ ಪೋಲಿಸ್ ತಂಡ ಇದನ್ನು ಅನುಮಾನಾಸ್ಪದವಾಗಿ ಕಂಡಿದೆ. ಹಾಗಾಗಿ ಅವರು ಹೋಟೆಲ್ ಮ್ಯಾನೇಜರ್ ಜೊತೆಗೆ ಕೊಠಡಿಗೆ ಹೋಗಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ದುರದೃಷ್ಟಕರ ರೀತಿಯಲ್ಲಿ ಕೋಣೆಯೊಳಗೆ ಅಪಘಾತದಲ್ಲಿ ಸಾವನ್ನಪ್ಪಿದನು. ನಮ್ಮ ತಂಡ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಿತು” ಎಂದು ಗೋರಖ್‌ಪುರದ ಪೊಲೀಸ್ ಮುಖ್ಯಸ್ಥ ವಿಪಿನ್ ತಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಅವನ ಸಾವಿಗೆ ಕೇವಲ 10 ನಿಮಿಷಗಳ ಮೊದಲು ಅವರೊಂದಿಗೆ ನಾನು ಮಾತನಾಡಿದ್ದೇನೆ. ನಂತರ ಪೋಲಿಸರು ಇಲ್ಲಿದ್ದಾರೆ ಎಂದು ಹೇಳುತ್ತಾ ಅವರು ಕರೆಯನ್ನು ಕಟ್ ಮಾಡಿದರು. ನಂತರ ಗುಪ್ತಾ ಅವರು ಬೇರೊಬ್ಬ ಸಂಬಂಧಿಗೆ ಕರೆ ಮಾಡಿ ಪೋಲಿಸರು ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆಂದು ಹೇಳಿದ್ದಾರೆ. ಅವರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆಂದು ಪತಿ ಹೇಳಿದ್ದಾರೆ. ನನ್ನ ಪತಿಯನ್ನು ಯಾಕೆ ಕೊಂದರು ಇದಕ್ಕೆ ನಾನು ಉತ್ತರಗಳನ್ನು ಬಯಸುತ್ತೇನೆ “ಎಂದು ಮೃತ ವ್ಯಾಪಾರಿಯ ಪತ್ನಿ ಮೀನಾಕ್ಷಿ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.