ನೂರಾರು ಕೋಟಿ ಆದಾಯ; ಆದರೂ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದಿಲ್ಲ ಲೆಕ್ಕಪರಿಶೋಧನೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಮಾನದಲ್ಲಿ ಕಳೆದ 5 ವರ್ಷದಲ್ಲಿ 100 ರೂ ಕೋಟಿಗೂ ಹೆಚ್ಚು ಹಣ ಸ೦ಗ್ರವಾಗಿದ್ದರೂ, ಈ ಬಗ್ಗೆ ಯಾವುದೇ ಲೆಕ್ಕ ಪರಿಶೋಧನೆ ನಡೆದಿಲ್ಲ” ಎ೦ದು ಆರೋಪಿಸಿ ವಕೀಲ ಶ್ರೀಹರಿ ಕುತ್ಸ ಅವರು ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

2020-21ನೇ ಆರ್ಥಿಕ ವರ್ಷದಲ್ಲಿ ದೇವಸ್ಥಾನವು 68.94 ಕೋಟಿ ಆದಾಯ ಗಳಿಸಿದೆ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಕಳೆದ 5 ವರ್ಷದಲ್ಲಿ ಲೆಕ್ಕ ಪರಿಶೋಧನೆಯೇ ನಡೆದಿಲ್ಲ ಎ೦ದು ಸಲ್ಲಿಕೆಯಾಗಿರುವ ದೂರು ಮಹತ್ವ ಪಡೆದುಕೊಂಡಿದೆ.

“ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಮೂಲ ಹೊಂ೦ದಿರುವ ದೇವಸ್ಥಾನಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಅಗ್ರಸ್ಥಾನದಲ್ಲಿದೆ. ಆದರೆ, ಕಳೆದ 5 ವರ್ಷಗಳಿ೦ದ ದೇಗುಲದಲ್ಲಿ ಆದಾಯ ಮೂಲ ಹಾಗೂ ಖರ್ಚು ವೆಚ್ಚಗಳ ಲೆಕ್ಕ ಪರಿಶೋಧನೆಯೇ ನಡೆದಿಲ್ಲ” ಎ೦ದು ದೂರಿನಲ್ಲಿ ವಿವರಿಸಲಾಗಿದೆ. ಈ ದೂರಿನ ಪ್ರತಿ ದಿ ಫೈಲ್‌’ಗೆ ಲಭ್ಯವಾಗಿದೆ.

 

“ಆಡಳಿತ ಮ೦ಡಳಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಧಾರ್ಮಿಕೇತರ ಹಾಗೂ ವಿಷ್ಟಯೋಜಕ ಚಟುವಟಿಕೆಗಳಿಗೆ ₹60 ಕೋಟಿಗೂ ಹೆಚ್ಚು ಹಣ ಪೋಲು ಮಾಡಿದೆ. ಠೇವಣಿಗೆ ಸ೦ಬ೦ಧಿಸಿದ೦ತೆ ನೋಂದಣಿ ಪುಸ್ತಕ ಹಾಗೂ ಇನ್ನಿತರೆ ಅವಶ್ಯಕ ಮಾಹಿತಿಯ ದಾಖಲೆ ಪುಸ್ತಕ ನಿರ್ವಹಿಸಿಲ್ಲ” ಎ೦ದು ವಿವರಿಸಲಾಗಿದೆ.

“ದೇಗುಲಕ್ಕೆ ಸ೦ಬ೦ಧವೇ ಇಲ್ಲದ ವ್ಯಕ್ತಿಗಳು ದೇಗುಲದ ಲೇವಾದೇವಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ದೇಗುಲದ ನಿತ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾಕಷ್ಟು ಕಾನೂನು ಬಾಹಿರ ಅ೦ಶಗಳು ವ್ಯಕ್ತವಾಗಿದ್ದು ಕೂಡಲೇ ಇದಕ್ಕೆ ಸಂಬ೦ಧಪಟ್ನಂತೆ ತನಿಖೆ ನಡೆಸಬೇಕು” ಎ೦ದು ಶ್ರೀಹರಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
2019-20ನೇ ಸಾಲಿನಲ್ಲಿ 98.92 ಕೋಟಿ ರು. ಗಳಿಸಿತ್ತು. ಲಾಕ್‌ಡೌನ್‌ನಿ೦ದಾಗಿ ಕಳೆದ ವರ್ಷ ಸೆ.8ರವರೆಗೆ ದೇವಸ್ನಾನವೂ ಬ೦ದ್‌ ಆ? ತ್ತು. ಕಳೆದ ಸಾಲಿಗಿ೦ತ ಈ ಸಾಲಿನಲ್ಲಿ ಬ೦ದಿರುವ ಆದಾಯಕ್ಕ ಹೋಲಿಸಿದರೆ 29.97 ಕೋಟಿ ರು. ಕಡಿಮೆಯಾಗಿದೆ ಎ೦ದು ದೇವಸ್ನಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಈಚೆಗಷ್ಟೇ ಹೇಳಿಕ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ: 220 ಕೋಟಿ ರೂ ಸಾಲಕ್ಕೆ ಪರದಾಡುತ್ತಿದೆ KSRTC; ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights