IPL 2021: ಕನ್ನಡಿಗ ಕೆ.ಗೌತಮ್‌ ಭಾರೀ ಮೊತ್ತಕ್ಕೆ ಸೇಲ್‌; IPLಗೆ ಬಿಕರಿಯಾದ ಆಟಗಾರರ ಪಟ್ಟಿ ಹೀಗಿದೆ!

2021ನೇ ಸಾಲಿನಲ್ಲಿನಡೆಯಲಿರುವ IPL 14ನೇ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹರಾಜಿನಲ್ಲಿ ಕನ್ನಡಗ ಕೆ ಗೌತಮ್‌ ಅವರು 9.25 ಕೋಟಿಗೆ ಬಿಕರಿಯಾಗಿದ್ದಾರೆ.

ಕಳೆದ ಕೆಲವು IPL ಟೂರ್ನಿಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್​ ಪಂಜಾಬ್​ ತಂಡದಲ್ಲಿ ಆಟ ಆಡಿ ಮಿಂಚಿನ ಪ್ರದರ್ಶನ ನೀಡಿದ್ದ ಕರ್ನಾಟಕದ ಕೆ. ಗೌತಮ್​ ಈ ಬಾರಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಸೇರಿದ್ದಾರೆ.

ಕೆ. ಗೌತಮ್​​ರನ್ನ 9.25 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡಕ್ಕೆ ಖರೀದಿಸಲಾಗಿದೆ. ಕೊಲ್ಕತ್ತಾ ನೈಟ್​ ರೈಡರ್ಸ್ ಹಾಗೂ ಸಿಎಸ್​ಕೆ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಕೊನೆಗೂ ಕೆ. ಗೌತಮ್ ಅವರು​ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಸೇಲ್​ ಆಗಿದ್ದಾರೆ.

2 ಕೋಟಿ ರೂಪಾಯಿ ಮೂಲ ಬೆಲೆಯನ್ನ ಹೊಂದಿದ್ದ ಗ್ರೇನ್​ ಮ್ಯಾಕ್ಸ್​ವೆಲ್​ ಆರ್​ಸಿಬಿ ತಂಡಕ್ಕೆ 14.25 ಕೋಟಿ ರೂಪಾಯಿಗೆ ಸೇಲ್‌ ಆಗಿದ್ದಾರೆ.

ಐಪಿಎಲ್​ 2021 ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ 8 ತಂಡಗಳು ಆಟಗಾರರನ್ನು ಭಾರೀ ಲೆಕ್ಕಾಚಾರ ಹಾಕಿ ಕೊಂಡುಕೊಳ್ಳುತ್ತಿದ್ದು, ಇದೂವರೆಗೂ ಸೇರ್‌ ಆಗಿರುವ ಆಟಗಾರರ ಪಟ್ಟಿ ಹೀಗಿದೆ.

ಸ್ಟೀವ್​ ಸ್ಮಿತ್​ – ಡೆಲ್ಲಿ ಕ್ಯಾಪಿಟಲ್ಸ್​ – ₹2.2 ಕೋಟಿ

ಗ್ಲೆನ್​ ಮ್ಯಾಕ್ಸ್​ವೆಲ್​ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹14.25 ಕೋಟಿ

ಶಕೀಬ್​ ಹಲ್​ ಹಸನ್ – ಕೋಲ್ಕತ್ತಾ ನೈಟ್​ ರೈಡರ್ಸ್​ – ₹3.20 ಕೋಟಿ

ಮೊಯೀನ್‌ ಅಲಿ – ಚೆನ್ನೈ ಸೂಪರ್​ ಕಿಂಗ್ಸ್​ – ₹7 ಕೋಟಿ

ಶಿವಂ ದುಬೆ – ರಾಜಸ್ಥಾನ್‌ ರಾಯಲ್ಸ್‌ – ₹4.4 ಕೋಟಿ

ಕ್ರಿಸ್‌ ಮೋರಿಸ್ -‌ ರಾಜಸ್ಥಾನ್‌ ರಾಯಲ್ಸ್‌ – ₹16.25 ಕೋಟಿ

ಡೇವಿಡ್‌ ಮಲನ್ – ಪಂಜಾಬ್‌ ಕಿಂಗ್ಸ್‌ – ₹1.5 ಕೋಟಿ

ಆಡಮ್‌ ಮಿಲ್ನ್ – ಮುಂಬೈ ಇಂಡಿಯನ್ಸ್​ – ₹3.2 ಕೋಟಿ

ಮುಸ್ತಾಫಿಜೂರ್‌ ರೆಹಮಾನ್‌ – ರಾಜಸ್ಥಾನ್​ ರಾಯಲ್ಸ್‌ – ₹1 ಕೋಟಿ

ಜೇ ರಿಚರ್ಡ್ಸನ್ – ಪಂಜಾಬ್ ಕಿಂಗ್ಸ್​ – ₹14 ಕೋಟಿ

ನೇಥನ್‌ ಕೌಲ್ಟರ್‌ ನೈಲ್ – ಮುಂಬೈ ಇಂಡಿಯನ್ಸ್ – ₹5 ಕೋಟಿ

ಉಮೇಶ್‌ ಯಾದವ್‌ – ಡೆಲ್ಲಿ ಕ್ಯಾಪಿಟಲ್ಸ್​ – ₹1 ಕೋಟಿ

ಪಿಯೂಶ್‌ ಚಾವ್ಲಾ – ಮುಂಬೈಗೆ ಮುಂಬೈ ಇಂಡಿಯನ್ಸ್‌ – ₹2.4 ಕೋಟಿ

ಸಚಿನ್‌ ಬೇಬಿ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ

ರಜತ್‌ ಪತ್ತಿದಾರ್‌ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ

ರಿಪಲ್​ ಪಟೇಲ್​ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ

ಶಾರೂಖ್​ ಖಾನ್ – ಪಂಜಾಬ್​ ಕಿಂಗ್ಸ್​ – ₹5.25 ಕೋಟಿ

ಕೆ.ಗೌತಮ್​ – ಚೆನ್ನೈ ಸೂಪರ್​ ಕಿಂಗ್ಸ್ – ₹9.25 ಕೋಟಿ

ಶೆಲ್ಡನ್ ಜಾಕ್ಸನ್ – ಕೋಲ್ಕತ್ತಾ ನೈಟ್​ ರೈಡರ್ಸ್​ – ₹20 ಲಕ್ಷ

ವಿಷ್ಣು ವಿನೋದ್‌ – ಡೆಲ್ಲಿ ಕ್ಯಾಪಿಟಲ್ಸ್ – ₹20 ಲಕ್ಷ

ಮೊಹಮ್ಮದ್​ ಅಜರುದ್ದೀನ್ – ರಾಯಲ್​ ಚಾಲೆಂಜರ್ಸ್​ ಬೆಂಗಳೂರು – ₹20 ಲಕ್ಷ

ಲುಕ್ಮನ್​ ಮೇರಿವಾಲಾ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ

ಚೇತನ್​ ಸಕಾರಿಯ – ರಾಜಸ್ಥಾನ್ ರಾಯಲ್ಸ್​ – ₹1.20 ಕೋಟಿ

ರಿಲೇ ಮೆರೆಡಿತ್ – ಪಂಜಾಬ್ ಕಿಂಗ್ಸ್​ – ₹8 ಕೋಟಿ

ಎಂ.ಸಿದ್ಧಾರ್ಥ್​ – ಡೆಲ್ಲಿ ಕ್ಯಾಪಿಟಲ್ಸ್​ – ₹20 ಲಕ್ಷ

ಜೆ.ಸುಚಿತ್ – ಸನ್​ ರೈಸರ್ಸ್​ ಹೈದರಾಬಾದ್​ – ₹30 ಲಕ್ಷ

ಕೆ.ಸಿ.ಕಾರಿಯಪ್ಪ – ರಾಜಸ್ಥಾನ್​ ರಾಯಲ್ಸ್​ – ₹20 ಲಕ್ಷ

ಚೇತೇಶ್ವರ ಪೂಜಾರ – ಚೆನ್ನೈ ಸೂಪರ್​ ಕಿಂಗ್ಸ್ – ₹50 ಲಕ್ಷ

ಇದನ್ನೂ ಓದಿ: 2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಜಯ; ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ 2ನೇ ಸ್ಥಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights