ಉಕ್ಕು ಕಂಪನಿಗಳಿಗೆ 7,537 ಎಕರೆ ಜಮೀನು; ಭೂಬೆಲೆ ನಿಗದಿಯಲ್ಲಿ 4 ಸಾವಿರ ಕೋಟಿ ಹಗರಣ; ತನಿಖೆ ನಡೆಸದ ಸರ್ಕಾರ

ಉಕ್ಕು ಉತ್ಪಾದನೆಯಲ್ಲಿ ಮು೦ಚೂಣಿಯಲ್ಲಿರುವ ಆರ್ಸೆಲರ್‌ ಮಿತ್ತಲ್‌ ಮತ್ತು ಉತ್ತಮ್‌ ಗಾಲ್ದಾ ಫೆರೋಸ್‌ ಲಿಮಿಟಿಡ್‌ ಕ೦ಪನಿಗಳಿಗೆ 7,537 ಎಕರೆ ಜಮೀನು ಹಂಚಿಕೆ ಮಾಡಿ 10 ವರ್ಷ ಕಳೆದರೂ ಯೋಜನೆ ಅನುಷ್ಠಾನವಾಗಿಲ್ಲ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊ೦ಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಅಲ್ಲದೆ, ಈ ಎರಡೂ ಕ೦ಪನಿಗಳಿಗೆ ಭೂ ಸ್ಥಾಧೀನ ಸಂಬಂಧ ಭೂ ಬೆಲೆ ನಿಗದಿಯಲ್ಲಿ 4 ಸಾವಿರ ಕೋಟಿ ರೂ. ಮೊತ್ತದ ಭಾರೀ ಹಗರಣ ನಡೆದಿದೆ ಎಂದು ಹೇಳಲಾಗಿದ್ದು, ಈ ವಿಚಾರವಾಗಿ ತವಿಖೆಗೂ ಕೂಡ ಒಳಪಡಿಸಿಲ್ಲ ಎಂಬುದು ತಿಳಿದು ಬಂದಿದೆ.

ಬಳ್ಳಾರಿಯ ಸ೦ಡೂರು ತಾಲೂಕಿನ ಕುಡಿತಿನಿ ಪಟ್ಟಣ ಪ೦ಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಇಂಡಿಯಾ ಲಿಮಿಟಿಡ್‌ಗೆ 2,659.75 ಎಕರೆ, ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟಿಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ದೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಹ೦ಚಿಕೆಯಾಗಿ 8 ವರ್ಷದ ಬಳಿಕ ಆರ್ಸೆಲರ್‌ ಮಿತ್ತಲ್‌ ಕ೦ಪವಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊ೦ಡಿದ್ದರೆ, ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಪ್ರಕ್ರಿಯೆ ನಡೆದು 2 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊ೦ಡಿಲ್ಲ.

ಸಾವಿರಾರು ಎಕರೆ ಜಮೀನಿನಲ್ಲಿ ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಎರಡೂ ಕಂಪನಿಗಳಿಗೆ 2020ರ ನವೆ೦ಬರ್‌ 27ರಂದು ತಿಳಿವಳಿಕೆ ನೋಟೀಸ್‌ ಹಾರಿಗೊಳಿಸಿರುವುದು ತಿಳಿದು ಬಂದಿದೆ. ಈ ಕುರಿತು ಸಚಿವ ಜಗದೀಶ್‌ ಶೆಟ್ಟರ್‌ ಅವರು ವಿಧಾನಸಭೆಯಲ್ಲಿ ಲಿಖಿತ ಉತ್ತರ ಒದಗಿಸಿದ್ದಾರೆ. ಸಂಡೂರಿನ ಶಾಸಕ ಈ ತುಕಾರಾಮ್‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು.
50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್‌ ಕ೦ಪೆನಿಯನ್ನು ಸ್ಥಾಧೀನಪಡಿಸಿಕೊ೦ಡಿರುವ ಜಾಗತಿಕ ದೈತ್ಯ ಉಕ್ಕಿನ ಕ೦ಪವಿ ಆರ್ಸೆಲರ್‌ ಮಿತ್ತಲ್‌, ಸುಪ್ರೀಂ ಕೋರ್ಟ್‌ನ ನಿರ್ದೇಶನದ೦ತೆ ಉಕ್ಕು ಯೋಜನೆಗಳನ್ನು ಖಿಸ್ತರಿಸಲು ಯೋಜಿಸಿದೆ. ಆದರೆ ಕರ್ನಾಟಕದಲ್ಲಿ ಉದ್ದೇಶಿತ ಕೈಗಾರಿಕೆಯನ್ನು ಈವರೆವಿಗೂ ಸ್ಥಾಪಿಸಲು ಯಾವುದೇ ಕ್ರಮಕ್ಕೆಗೊ೦ಡಿಲ್ಲ.

ಇದನ್ನೂ ಓದಿ: ಡಿಸಿಎಂಗಳಿಗೆ 05 ಕೋಟಿ ಸಂಗ್ರಹಿಸಲು ತಾಕೀತು; ವಸೂಲಿಗಿಳಿದ ಗ್ರಂಥಾಲಯ ನಿರ್ದೇಶಕರು?

2010ರಲ್ಲಿ ನಡೆದಿದ್ದ ಜಾಗತಿಕ ಬ೦ಡವಾಳ ಹೂಡಿಕೆದಾರರ ಸಮಾವೇಶ (ಜಿಮ್‌) ವೇಳೆ, ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬ೦ಡವಾಳ ಹೂಡಿ, 6 ಮಿಲಿಯನ್‌ ಟನ್‌ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ನಾಪನೆಗೆ ಆರ್ಸೆಲರ್‌ ಮಿತ್ತಲ್‌ ಇ೦ಡಿಯಾ ಲಿಮಿಟಿಡ್‌ ಕ೦ಪನಿ ಒಪ್ಪ೦ದ ಮಾಡಿಕೊಂಡಿತ್ತು. ಆದರೆ, ನ೦ತರ ಕೆಲವು ಕಾರಣಗಳನ್ನು ಮುಂದಿಟ್ಟಿದ್ದ ಈ ಕ೦ಪನಿ, ಸೋಲಾರ್‌ ಪ್ಲಾ೦ಟ್‌ ಸ್ನಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿ೦ದ ಈ ಕ೦ಪವಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದಿತ್ತು.

ಆದರೆ ಸೋಲಾರ್‌ ಪವರ್‌ ಘಟಕವನ್ನೂ ಸ್ಥಾಪಿಸದ ಮಿತ್ತಲ್‌ ಕಂಪನಿಯ ಧೋರಣೆಯಿ೦ದ 10 ಸಾವಿರ ಜನರ ಉದ್ಯೋಗದ ಕನಸು ಕಮರಿ ಹೋಗಿತ್ತು. ಆರ್ಸೆಲರ್‌ ಮಿತ್ತಲ್‌ ಉಕ್ಕಿನ ಕಾರ್ಟಾನೆಗೆ ವಶಪಡಿಸಿಕೊ೦ಡ ಜಮೀನಿನಲ್ಲಿ ಉಕ್ಕಿನ ಕಾರ್ಬಾನೆ ಸ್ಮಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾಡಲು ಮಿತ್ತಲ್‌ ಸ೦ಸ್ಥೆ ಸರ್ಕಾರದೊಡನೆ ನಡೆಸಿದ್ದ ಮಾತುಕತೆಗೆ ಭೂ ಸ೦ತ್ರಸ್ತರ ವಿರೋಧವಿತ್ತು.

2010ರ ಸಮಾವೇಶದಲ್ಲಿ 36 ಸಾವಿರ ಕೋಟಿ ರೂ. ಬ೦ಡವಾಳ ಹೂಡುವುದಾಗಿ ಘೋಷಿಸಿದ್ದ ರೆಡ್ಡಿ ಸೋದರರ ಒಡೆತನದ ಬ್ರಾಹ್ಮಿಣಿ ಇ೦ಡಸ್ಟ್ರೀಸ್‌ ಕರ್ನಾಟಕ ಲಿಮಿಟೆಡ್‌ ಕ೦ಪನಿಯು ಹಂಚಿಕೆ ಮಾಡಿಸಿಕೊಂಡಿದ್ದ ಜಮೀನನ್ನು ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ ಅಕ್ರಮವಾಗಿ ಮಾರಾಟ ಮಾಡಿ ಒಪ್ಪ೦ದ ಮಾಡಿಕೊಳ್ಳಲಾಗಿತ್ತು. ಆದರೆ ಆ ಕ೦ಪನಿಯು ಕೂಡ ಕಾರ್ಪಾನೆ ಸ್ಮಾಪನೆ ಸ೦ಬ೦ಧ ಯಾವುದೇ ಕ್ರಮ ಕೈಗೊ೦ಡಿಲ್ಲ ಎ೦ಬುದು ಶೆಟ್ಟರ್‌ ಅವರು ನೀಡಿರುವ ಉತ್ತರದಿ೦ದ ತಿಳಿದು ಬಂದಿದೆ.
6 ಮಿಲಿಯನ್‌ ಟನ್‌ ಕಬ್ಬಿಣ ಉತ್ಪಾದನೆ ಗುರಿ ಮತ್ತು 25 ಸಾವಿರ ಜನರಿಗೆ ಉದ್ಯೋಗ ನೀಡಲು ಒಪ್ಪ೦ದ ಮಾಡಿಕೊಂಡಿದ್ದ ಬ್ರಹ್ಮಿಣಿ ಇ೦ಡಸ್ಟ್ರೀಸ್‌ ಕೈಗಾರಿಕೆಯನ್ನೇ ಆರ೦ಭಿಸದೆಯೇ ಉತ್ತಮ್‌ ಗಾಲ್ವಾ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಿತ್ತು.

ಭೂಸ್ವಾಧೀನ ಕಾಯ್ದೆ-2013ರ ಅನ್ವಯ ಒ೦ದು ಜಮೀನನ್ನು ವಶಪಡಿಸಿಕೊ೦ಡ ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಬಾನೆ ಸ್ಮಾಪಿಸದೇ ಹೋದಲ್ಲಿ ಅ೦ತಹ ಜಮೀನನ್ನು ಸ೦ತ್ರಸ್ತರಿಗೆ ಮರಳಿಸಬೇಕೆ೦ಬ ನಿಯಮವಿದೆ. ಈಗಾಗಲೇ ಬ್ರಹ್ಮಿಣಿ ಮೂಲಕ ಜಮೀನು ವರ್ಗಾವಣೆ ಮಾಡಿಸಿಕೊ೦ಡಿರುವ ಉತ್ತಮ್‌ ಗಾಲ್ವಾ ಹಾಗೂ ಆರ್ಸೆಲರ್‌ ಮಿತ್ತಲ್‌ ಕ೦ಪನಿಗಳಿಗೆ ಜಮೀನು ವಶಪಡಿಸಿಕೊ೦ಡು 10 ವರ್ಷಗಳಿಗೂ ಅಧಿಕ ಸಮಯ ಮುಗಿದಿದೆ.

ಈವರೆವಿಗೂ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪನೆಯಾಗುವ ಲಕ್ಷಣ ಕ೦ಡುಬರುತ್ತಿಲ್ಲ.

ಜಮೀನು ವಶಪಡಿಸಿಕೊ೦ಡಿರುವ ಕೆಐಎಡಿಬಿಯು ಜಮೀನುಗಳನ್ನು ತನ್ನ ವಶದಲ್ಲಿಯೇ ಇರಿಸಿಕೊಳ್ಳಲು ಇಚ್ಮಿಸಿದರೆ ಅ೦ತಹ ಸ೦ತ್ರಸ್ತ ಕುಟುಂಬಗಳಿಗೆ ನ್ಯಾಯಾಲಯ ನಿಗದಿಪಡಿಸಿದ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡಬೇಕು. ಒ೦ದು ವೇಳೆ ವಶಪಡಿಸಿಕೊ೦ಡ ಜಮೀನುಗಳಲ್ಲಿ ಕಾರ್ಬಾನೆ ಸ್ಮಾಪಿಸಲು ಯಾವುದೇ ಸಂಸ್ಥೆ ಮುಂದಾದರೆ, ಅಲ್ಲಿ ಉದ್ಯಮ ಸ್ಥಾಪನೆಯಾಗಿ, ಸ೦ತ್ರಸ್ತರ ಕುಟುಂಬಗಳ ಸದಸ್ಯರಿಗೆ ಉದ್ಯೋಗ ದೊರೆಯುವವರೆಗೂ ಮಾಸಿಕ 20 ಸಾವಿರ ರೂ. ಗಳ ನಿರುದ್ಯೋಗ ಭತ್ಯೆ ನೀಡಬೇಕು. ಆದರೆ ಸರ್ಕಾರ
ಈವರೆವಿಗೂ ಈ ಬಗ್ಗೆಯೂ ಕ್ರಮ ಕೈಗೊ೦ಡಿಲ್ಲ ಎ೦ದು ತಿಳಿದು ಬಂದಿದೆ.

ಉಕ್ಕು ಕೈಗಾರಿಕೆಗಳ ಸ್ಮಾಪನೆ ಹಾಗೂ ಭೂ ಸಂತ್ರಸ್ತರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಮಿತ್ತಲ್‌, ಬ್ರಹ್ಮಿಣಿ ಕಂಪನಿಗಳಿಗೆ ಕುಡಿತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳ 10,500 ಎಕರೆ ಜಮೀನು ನೀಡಿದ ಭೂ ಮಾಲೀಕರಿಗೆ ನ್ಯಾಯಯುತವಾದ ಪರಿಹಾರ ನೀಡಿರಲಿಲ್ಲ. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ೦ಪನಿಗಳೊ೦ದಿಗೆ ಶಾಮೀಲಾಗಿ ಭೂ ಬೆಲೆ ನಿಗದಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು ಎ೦ಬ ಬಲವಾದ ಆರೋಪಗಳಿವೆ.

ಬ್ರಹ್ಮಿಣಿ ಕ೦ಪನಿ ಸ್ಮಾಪಿಸಲು ಎಕರೆಗೆ 5ರಿ೦ದ 8 ಲಕ್ಷ ರು.ನಂತೆ ನಿಗದಿಪಡಿಸಿದ್ದರೆ ಮಿತ್ತಲ್‌ ಕ೦ಪನಿಗೆ ಎಕರೆಗೆ 8ರಿ೦ದ 12 ಲಕ್ಷ ರು.ವರೆಗೂ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು. ಒ೦ದೇ ಕೈಗಾರಿಕೆಗೆ ರಾಜ್ಯದಲ್ಲಿ ಮೊದಲ ಬಾರಿಗೆ 3 ರೀತಿಯ ದರ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು.

ಕೃಪೆ: ದಿ ಫೈಲ್

ಇದನ್ನೂ ಓದಿ: 447 ಎಕರೆ ಗೋಮಾಳ ಗುಳುಂ: ಒತ್ತುವರಿ ಭೂಮಿಯಲ್ಲಿ 258 ಅನಧಿಕೃತ ಕಟ್ಟಡಗಳ ನಿರ್ಮಾಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights