ತೌಕ್ತೆ ಚಂಡಮಾರುತ: ಪಿ305 ಬಾರ್ಜ್‌ನಲ್ಲಿದ್ದ 66 ಜನರ ಮೃತದೇಹ ಪತ್ತೆ; ಇನ್ನೂ 20 ಜನರು ನಾಪತ್ತೆ!

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್ ಮತ್ತು ವರಪ್ರದ ಟಗ್ ಬೋಟ್‌ನಲ್ಲಿದ್ದ 89 ಜನರು ನಾಪತ್ತೆಯಾಗಿದ್ದು, ಅವರಲ್ಲಿ 66 ಜನರ ಶವಗಳು ಪತ್ತೆಯಾಗಿವೆ. ಉಳಿದ 20 ಮಂದಿ ಕಾಣೆಯಾಗಿದ್ದು, ಅವರಿಗಾಗಿ ಸಮುದ್ರದಲ್ಲಿ ಶೋಧ ನಡೆಯುತ್ತಿದೆ.

06 ದಿನಗಳ ಹಿಂದೆ ಮಹಾರಾಷ್ಟ್ರದ ರಾಯಗಢದ ಕರಾವಳಿ ಪ್ರದೇಶದಲ್ಲಿ ಅಪ್ಪಳಿದ ಟೌಕ್ತೇ ಚಂಡಮಾರುತಕ್ಕೆ ಸಿಲುಕಿ ಬೋಟ್‌ ಮುಳುಗಿತ್ತು. ಅಂದಿನಿಂದಲೂ ಶೋಧಕಾರ್ಯ ನಡೆಯುತ್ತಿದೆ. ಗುರುವಾರ ಮತ್ತೆ 6 ಮೃತದೇಹಗಳು ಪತ್ತೆಯಾಗಿದ್ದು, ಒಟ್ಟು 66 ಜನರ ಮೃತದೇಹಗಳು ಪತ್ತೆಯಾಗಿವೆ.

ಇನ್ನೂ 20 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ ಮುಳುಗು ತಜ್ಞರನ್ನು ನಿಯೋಜಿಸಲಾಗಿದ್ದು, ಸಮುದ್ರದಾಳದಲ್ಲಿ ಮುಳುಗು ತಜ್ಞರು ತೀವ್ರ ಶೋಧ ನಡೆಸಿದ್ದಾರೆ.  ದುರಂತ ಸಂಭವಿಸಿದ ಸಮುದ್ರ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ 2 ನೌಕೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.

ಬಾರ್ಜ್ ಪಿ 305ಯಲ್ಲಿದ್ದ 261 ಸಿಬ್ಬಂದಿಗಳ ಪೈಕಿ ಈವರೆಗೆ 186 ಜನರನ್ನು ರಕ್ಷಿಸಲಾಗಿದೆ. ಅಂತೆಯೇ ದುರಂತದಲ್ಲಿ 66 ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ವರಪ್ರದ ಟಗ್ ಬೋಟ್ ನಲ್ಲಿದ್ದ 13 ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 11 ಮಂದಿ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ತೌಕ್ತೆ ಚಂಡಮಾರುತ: ಪಿ305 ಬಾರ್ಜ್‌ನಲ್ಲಿ ಸಿಲುಕಿದ್ದ 89 ಜನರು ನಾಪತ್ತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights