IPLನ 2 ಮ್ಯಾಚ್‌ನಲ್ಲಿ ಸೋಲುಂಡ ಸಿಎಸ್‌ಕೆ: ಕಮ್‌ಬ್ಯಾಕ್ ರೈನಾ ಟ್ವಿಟರ್ ಟ್ರೆಂಡಿಂಗ್!
ಕೊರೊನಾ ಸಂಕಷ್ಟದ ನಡುವೆಯೂ ನಡೆಯುತ್ತಿರುವ ಐಪಿಎಲ್ 2020ಯಲ್ಲಿ ಸತತ 2 ಪಂದ್ಯಗಳನ್ನು ಸೋತಿರುವ ಸಿಎಸ್‌ಕೆ (ಚೆನೈ ಸೂಪರ್ ಕಿಂಗ್ಸ್) ತಂಡ ಅಭಿಮಾನಿಗಳಲ್ಲಿ ಬೇಸರ ತಂದಿದೆ.
ಸಿಎಸ್‌ಕೆ ತಂಡದ ಮೇಲೆ ಕೋಪಗೊಂಡಿರುವ ಅಭಿಮಾನಿಗಳು ಕಮ್‌ಬ್ಯಾಕ್ ರೈನಾ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಾಕುತ್ತಿದ್ದು, #ComeBackRaina ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಐಪಿಎಲ್ 2020ಯ ಉದ್ಘಾಟನಾ ಪಂದ್ಯವನ್ನು ಆಡಿದ ಸಿಎಸ್‌ಕೆ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದರೂ, ನಂತರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ವಿರುದ್ಧ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಸಿಎಸ್‌ಕೆ ಮೇಲೆ ಅಭಿಮಾನಿಗಳು ಬೇಸರಗೊಂಡಿದ್ದು, ನಮ್ಮ ಹೀರೋ ಸುರೇಶ್ ರೈನಾ ತಂಡಕ್ಕೆ ವಾಪಸ್ ಬರಬೇಕು. ಸ್ಟೇಡಿಯಂನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಬೇಕು ಎಂದು ಟ್ವೀಟ್‌ಗಳ ಸುರಿಮಳೆ ಟ್ವಿಟರ್‌ನಲ್ಲಿ ಕಾಣುತ್ತಿದೆ.
ಸಿಎಸ್‌ಕೆ ತಂಡದಲ್ಲಿ ಸದ್ಯ, ಫಾಫ್ ಡು ಪ್ಲೆಸಿಸ್ ಹೊರತು ಪಡಿಸಿದರೆ ಬೇರೆ ಆಟಗಾರರ ಪ್ರದರ್ಶನ ನೀರಸವಾಗಿದೆ. ಸಿಎಸ್‌ಕೆ ಕ್ಯಾಪ್ಟನ್ ಧೋನಿ ಕೂಡ ಉತ್ತಮ ಆಟ ನೀಡುವಲ್ಲಿ ವಿಫಲರಾಗಿದ್ದು, ತಂಡದ ಸೋಲಿಗೆ ಕಾರಣವಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಐಪಿಎಲ್‌ಗಾಗಿ ಯುಎಇಗೆ ತೆರಳಿದ್ದ ರೈನಾ ವೈಯಕ್ತಿಕ ಕಾರಣದಿಂದಾಗಿ ದೇಸಕ್ಕೆ ಮರಳಿದ್ದರು. ಅವರ ಸಂಬಂಧಿಗಳ ಮೇಲೆ ಹಲ್ಲೆ ನಡೆದು, ಸಂಬಂಧಿಯೊಬ್ಬರು ಮೃತ ಪಟ್ಟಿದ್ದು ಇದಕ್ಕೆ ಕಾರಣವೆಂದು ಹೇಳಲಾಗಿತ್ತು. ನಂತರವೂ ಮತ್ತೆ ಆಟದಲ್ಲಿ ಭಾಗಿಯಾಗಲು ನಿರಾಕರಿಸಿರುವ ರೈನಾ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
https://twitter.com/trendRaina/status/1310074779529916417?s=20
https://twitter.com/CultRaina/status/1310092789275713538?s=20
https://twitter.com/yogeshwarans8/status/1310077536483729410?s=20
ಹೀಗಾಗಿ , ಐಪಿಎಲ್ ಟೂರ್ನಿಗೆ ರೈ ಮರಳಬೇಕು. ಸಿಎಸ್‌ಕೆ ಪರವಾಗಿ ಭರ್ಜರಿ ಪ್ರದರ್ಶನ ನೀಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಆಕಾಂಕ್ಷೆ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ! ಇಂದಿನ ಸ್ಥಿತಿಯಲ್ಲಿ ಬಹುಮತ ಸಾಧ್ಯವಾ?