Fact Check: ಅಖಿಲೇಶ್ ಯಾದವ್ ಹೇಳಿದ್ದು ಯುಪಿಗೆ ಯೋಗ್ಯ ಸರ್ಕಾರ ಬೇಕು ಎಂದು ಹೊರತು ಯೋಗಿ ಸರ್ಕಾರ ಅಂತಲ್ಲ…
ಉತ್ತರ ಪ್ರದೇಶ ರಾಜ್ಯಕ್ಕೆ ಯೋಗಿ ಸರ್ಕಾರ ಬೇಕು ಎಂದು ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಅದರೊಟ್ಟಿಗೆ ಅಖಿಲೇಶ್ ಯಾದವ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೀಡಿಯೊದೊಂದಿಗೆ ಪೋಸ್ಟ್ ಮಾಡಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ವೈರಲ್ ಆದ ವೀಡಿಯೊದ ಮೇಲಿನ ಬಲ ಮೂಲೆಯಲ್ಲಿ ‘ಹೆಡ್ಲೈನ್ಸ್ ಇಂಡಿಯಾ’ ಮಾಧ್ಯಮದ ಲೋಗೋವನ್ನು ಗುರುತಿಸಬಹುದು. ಇದೇ ಕೀವರ್ಡ್ಗಳೊಂದಿಗೆ ಹೆಡ್ಲೈನ್ಸ್ ಇಂಡಿಯಾ ಫೇಸ್ಬುಕ್ ಪುಟದಲ್ಲಿ ಸರ್ಚ್ ಮಾಡಿದಾಗ ಸಂಪೂರ್ಣ ವೀಡಿಯೊ ಲಭಿಸಿದ್ದು, ಅದರ ಆಯ್ದ ಭಾಗವನ್ನು ಕಟ್ ಮಾಡಿ ವೈರಲ್ ವೈರಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವೀಡಿಯೊವನ್ನು ಜನವರಿ 02, 2022 ರಂದು ಪ್ರಕಟಿಸಲಾಗಿದೆ.

55 ಸೆಕೆಂಡುಗಳ ವೈರಲ್ ವೀಡಿಯೊದಲ್ಲಿರುವಂತೆಯೇ ಅಖಿಲೇಶ್ ಯಾದವ್ ಹೇಳುವುದನ್ನು ನಾವು ಕೇಳಬಹುದು. ಹಿಂದಿಯಲ್ಲಿ ಅಖಿಲೇಶ್ ಯಾದವ್ ಅವರ ಮಾತುಗಳನ್ನು ಇಲ್ಲಿ ಭಾಷಾಂತರಿಸಿ ನೀಡಲಾಗಿದೆ. ’ನಾನು ನಿಮ್ಮನ್ನು ವಿನಂತಿಸಲು ಬಯಸುತ್ತೇನೆ, ಉತ್ತರ ಪ್ರದೇಶವನ್ನು ಸಮೃದ್ಧ/ಸಂತೋಷದ ಹಾದಿಯಲ್ಲಿ ಕೊಂಡೊಯ್ಯಬೇಕಾದರೆ, ಯೋಗ್ಯ ಸರ್ಕಾರ ರಚನೆಯಾಗಬೇಕು, ಆಗ ಮಾತ್ರ ಉತ್ತರ ಪ್ರದೇಶವು ಸಮೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತದೆ ‘ ಎಂದು ಭಾಷಣ ಮಾಡಿದ್ದಾರೆ.

ಈ ವೀಡಿಯೊದಿಂದ, ಅಖಿಲೇಶ್ ಅವರ ಭಾಷಣದಲ್ಲಿ ಯೋಗ್/ಯೋಗ್ಯ ಎಂಬ ಹಿಂದಿ ಪದವನ್ನು ಯೋಗಿ/ಯೋಗಿ ಎಂದು ತಿರುಚಿ, ಯೋಗಿ ಆದಿತ್ಯನಾಥ್ ಅವರನ್ನು ಯೋಗಿ ಎಂದು ಕರೆಯಲಾಗಿರುವುದರಿಂದ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯಾಗಲಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ ಎಂದು ಸೃಷ್ಟಿಸಲಾಗಿದೆ.
ಇದಲ್ಲದೆ, ಅಖಿಲೇಶ್ ‘ಯೋಗ್ಯ ಸರ್ಕಾರ್/ಗೋವ್’ ಪದವನ್ನು ಬಳಸಿದ್ದು ಇದೇ ಮೊದಲಲ್ಲ. ಅವರು ತಮ್ಮ ರಾಜಕೀಯ ಸಭೆಗಳಲ್ಲಿ ಹಲವು ಬಾರಿ ಈ ಒಂದು ಪದವನ್ನು ಬಳಸುತ್ತಿದ್ದಾರೆ. ಅಖಿಲೇಶ್ ಅವರು ರಾಜ್ಯಕ್ಕೆ ಯೋಗಿ ಸರ್ಕಾರ್ ಅಲ್ಲ ಯೋಗ್ಯ ಸರ್ಕಾರ್ ಬೇಕು ಎಂದು ಕರೆದ ಕೆಲವು ಉದಾಹರಣೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದಲ್ಲಿ ಯೋಗ್ಯ ಸರ್ಕಾರಕ್ಕಾಗಿ ಅಖಿಲೇಶ್ ಅವರು ನೀಡಿದ ಕರೆಯನ್ನು ಯೋಗಿ ಸರ್ಕಾರ್ ಎಂದು ತಪ್ಪಾಗಿ ತಿರುಚಿ ಶೇರ್ ಮಾಡಲಾಗಿದೆ.
ಇದನ್ನು ಓದಿರಿ: Fact check: ತನ್ನ ಸೊಸೆ ಬಿಜೆಪಿ ಸೇರಿದಾಗ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಮಾಡಿದ್ದು ನಿಜವೇ?

