Fact check: ತನ್ನ ಸೊಸೆ ಬಿಜೆಪಿ ಸೇರಿದಾಗ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಮಾಡಿದ್ದು ನಿಜವೇ?

ಉತ್ತರ ಪ್ರದೇಶದ ರಾಜಕಾರಣ ಈಗ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಬಿಜೆಪಿಯ ಕೆಲ ಶಾಸಕರು ಮತ್ತು ಸಚಿವರು ಬಿಜೆಪಿ ಗೆ ಗುಡ್ ಬೈ ಹೇಳಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳು ಮೂಲಕ ಬಿಜೆಪಿಗೆ ಶಾಕ್ ನೀಡಿದ್ರು. ಇದನ್ನು ಅರಗಿಸಿಕೊಳ್ಳದ ಬಿಜೆಪಿ ಕೂಡ ಪ್ರತಿ ತಂತ್ರ ಎಣಿಯುವ ಮೂಲಕ ಸಮಾಜವಾದಿ ಪಕ್ಷಕ್ಕೆ ಟಾಂಗ್ ನೀಡಿದೆ. ಈಗ ಬಿಜೆಪಿ ಮುಲಾಯಂ ಸಿಂಗ್ ಯಾದವ್ ಅವರ ಎರಡನೆ ಸೊಸೆಯನ್ನು ಬಿಜೆಪಿ ಪಕ್ಷಕ್ಕೆ ಕರೆತಂದಿದೆ.

ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಬಿಜೆಪಿಗೆ ಸೇರಿದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಫೋಟೋಗಳು ವೈರಲ್ ಆಗುತ್ತಿದ್ದು, ಸೊಸೆ ಅಪರ್ಣಾ ಬಿಸ್ಟ್ ಯಾದವ್ ಬಿಜೆಪಿ ಸೇರ್ಪಡೆಗೆ ಮುಲಾಯಂ ಸಿಂಗ್ ಯಾದವ್ ಆರ್ಶಿವದಿಸುವ ಮೂಲಕ ಬೆಂಬಲ ನೀಡಿದ್ದಾರೆ ಎಂದು ಹೇಳುವ ಪೋಸ್ಟ್ ವೈರಲ್ ಆಗುತ್ತಿದೆ.

ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಸೊಸೆ ಅಪರ್ಣಾ ಯಾದವ್ ಅವರ ತಲೆಯ ಮೇಲೆ ಕೈ ಇಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಮಾಜವಾದಿ ಪಕ್ಷದ (ಎಸ್‌ಪಿ) ವರಿಷ್ಠರು ಅಪರ್ಣಾಗೆ ಬಿಜೆಪಿ ಸೇರಲು ಆಶೀರ್ವಾದ ನೀಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ವಾರಗಳ ಮೊದಲು ಅಪರ್ಣಾ ಯಾದವ್ ಜನವರಿ 19, 2021 ರಂದು ಬಿಜೆಪಿಗೆ ಸೇರಿದರು.

ಅಪರ್ಣಾ ಯಾದವ್ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮಲ ಸಹೋದರ ಪ್ರತೀಕ್ ಯಾದವ್ ಅವರನ್ನು ವಿವಾಹವಾಗಿದ್ದಾರೆ. ಪ್ರತೀಕ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ. ಅಪರ್ಣಾ ಅವರು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ ಸೋತರು.

ಫ್ಯಾಕ್ಟ್ ಚೆಕ್

“ಮುಲಾಯಂ ಸಿಂಗ್ ಯಾದವ್ ಅವರ ಸ್ವಂತ ಸೊಸೆ ಅಪರ್ಣಾ ಯಾದವ್ ತನ್ನ ಮಾವನಿಂದ ಆಶೀರ್ವಾದ ಪಡೆದ ನಂತರ ಬಿಜೆಪಿ ಸೇರಿದರು” ಎಂದು ಫೋಟೋದೊಂದಿಗೆ ಶೀರ್ಷಿಕೆ ಬರೆಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಹೇಳಿಕೆ ಮತ್ತು ಫೋಟೋಗಳನ್ನು  ಫ್ಯಾಕ್ಟ್ ಚೆಕ್ ಮೂಲಕ ತಿಳಿಯಲು ಪ್ರಯತ್ನಿಸಿಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ  ಲಭ್ಯವಾದ ಫೋಟೋಗಳು ಸೆಪ್ಟೆಂಬರ್ 1, 2021 ರಂದು ಅಪರ್ಣಾ ಬಿಸ್ಟ್ ಯಾದವ್ ಅವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿರುವ  ಫೋಟೋಗಳನ್ನು ಪತ್ತೆಹಚ್ಚಲಾಗಿದೆ.

ಈ ಚಿತ್ರವನ್ನು ಹಿಂದಿಯ ಶೀರ್ಷಿಕೆ ಜೊತೆ ಇತರ ಮೂರು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ, ಇದರರ್ಥ, “ಶುಭ ಸಂದರ್ಭದಲ್ಲಿ ಅಮ್ಮನ ಜನ್ಮದಿನದಂದು ನಾನು ಅವರ ಆಶೀರ್ವಾದವನ್ನು ಪಡೆಯುವ ಅದೃಷ್ಟವನ್ನು ಪಡೆದುಕೊಂಡಿದ್ದೇನೆ, ತಾಯಿ ಮತ್ತು ತಂದೆಯ ದಯೆ ಮತ್ತು ಆಶೀರ್ವಾದವು ನಮ್ಮೆಲ್ಲರ ಮೇಲಿರಲಿ, ಅವರು ಆರೋಗ್ಯವಾಗಿರಲಿ ಮತ್ತು ದೀರ್ಘಾಯುಷ್ಯವನ್ನು ಪಡೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಅಪರ್ಣಾ ಬಿಸ್ಟ್ ಯಾದವ್ ಈ ಮೊದಲು ಅಂದರೆ 2017ರಲ್ಲೆ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ನಂತರ ದಿನಗಳಲ್ಲಿ ಅದು ಸಾಧ್ಯವಾಗಿರಲಿಲ್ಲ 2022ರಲ್ಲಿ ಸಮಾಜವಾದಿ ಪಕ್ಷದಿಂದ ಟಿಕೆಟ್ ಆಕಾಂಕ್ಷೆಯಾಗಿದ್ದೇನೆ ( ಡಿಸೆಂಬರ್ 5, 2021 ರಂದು ಪ್ರಕಟವಾದ ANI ವರದಿಯ ಪ್ರಕಾರ, “ನೇತಾಜಿ (ಮುಲಾಯಂ ಸಿಂಗ್ ಯಾದವ್) ಅಥವಾ ಅಖಿಲೇಶ್ (ಯಾದವ್) ಭಯ್ಯಾ ಹೇಳಿದರೆ, ನಾನು ತಿಲೋಯ್ ಅಸೆಂಬ್ಲಿಯಿಂದ ಸ್ಪರ್ಧಿಸುತ್ತೇನೆ.) ಎಂದಿದ್ದರು. ವರದಿಗಳ ಪ್ರಕಾರ, ಅಪರ್ಣಾ ಯಾದವ್ ಅವರು 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದರಂತೆ. ಅಖಿಲೇಶ್ ಯಾದವ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ಇಚ್ಛಿಸಲಿಲ್ಲ. ಹೀಗಾಗಿ ಅಪರ್ಣಾ ಯಾದವ್ ಬಿಜೆಪಿಯತ್ತ ಮುಖ ಮಾಡಿದರು.  ಹಿಂದೆಯೇ ಅವರು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರಿಂದ ಸಮಾಜವಾದಿ ಪಾರ್ಟಿ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿತು, ಆದ್ದರಿಂದ ಈಗ ಅವರು ಬಿಜೆಪಿ ಸೇರಿದರು.

ಅಪರ್ಣಾ ಯಾದವ್ ಬಿಜೆಪಿಗೆ ಸೇರಿರುವ ಬಗ್ಗೆ ಜನವರಿ 19, 2021 ರಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ , ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಸೊಸೆಯನ್ನು ಬಿಜೆಪಿ ಗೆ ಸೇರದಂತೆ ಮನವೊಲಿಸಲು ತುಂಬಾ ಪ್ರಯತ್ನಿಸಿದರು. ಆದರೆ, ಅವರು ತಮ್ಮ ಇಚ್ಛೆಯಂತೆ ನಡೆದುಕೊಂಡಿದ್ದಾರೆ ಅವರನ್ನು  ಅಭಿನಂದಿಸುತ್ತೇನೆ ಮತ್ತು ಎಸ್‌ಪಿಯ ಸಮಾಜವಾದಿ ಸಿದ್ಧಾಂತವು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ಹೇಳುತ್ತಾ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಆದರೆ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ಮತ್ತು ಹೇಳಿಕೆಗಳು ಹಳೆಯವಾಗಿದ್ದು, ಬಿಜೆಪಿಗೆ ಸೇರಿದ ನಂತರ ಮುಲಾಯಂ ಸಿಂಗ್ ಯಾದವ್ ತಮ್ಮ ಸೊಸೆ ಅಪರ್ಣಾ ಅವರಿಗೆ ಆಶಿರ್ವಾದ ಮಾಡಿದ್ದಾರೆ ಎಂದು  ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಕೃಪೆ: ಬೂಮ್‌ಲೈವ್


ಇದನ್ನು ಓದಿರಿ: fact check: ಮಹಾಭಾರತದ ಪಳೆಯುಳಿಕೆಗಳು ಸಿಕ್ಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights