fact check: ಮಹಾಭಾರತದ ಪಳೆಯುಳಿಕೆಗಳು ಸಿಕ್ಕಿದ್ದು ನಿಜವೇ?

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೂರು ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಫೋಟೊದಲ್ಲಿ ಕಾಣುವ  ಪಳೆಯುಳಿಕೆಗಳು ಸುಮಾರು 4 ಸಾವಿರದಷ್ಟು ಹಳೆಯದು ಮತ್ತು ಇವುಗಳನ್ನು ಉತ್ತರ ಪ್ರದೇಶದ ಸನೌಲಿಯಲ್ಲಿ ಉತ್ಖನನ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.

ಮೊದಲ ಫೋಟೋದಲ್ಲಿ ಒಂದು ಜೋಡಿ ಚಕ್ರದಂತಹ ವಸ್ತುಗಳನ್ನು ಗುರುತಿಸಬಹುದಾಗಿದೆ. ಅದರ ಪಕ್ಕದಲ್ಲಿ ಪ್ರಾಣಿಗಳ ಕಳೇಬರವನ್ನು ಕಾಣಬಹುದು. ವ್ಯಕ್ತಿಯೊಬ್ಬ ಆ ಪಳೆಯುಳಿಕೆಗಳ ಮೇಲೆ ಎನನ್ನೋ ಸಿಂಪಡಿಸುತ್ತಿರುವುದನ್ನು ಸಹ ಫೋಟೋದಲ್ಲಿ ಕಾಣಬಹುದು. ಕೆಳಗಿನ ಎಡಭಾಗದಲ್ಲಿರುವ ಎರಡನೇ ಫೋಟೋದಲ್ಲಿ ಪುರಾತನ ಶಿರಸ್ತ್ರಾಣದಂತೆ ಇರುವ ಚಿತ್ರವನ್ನು ಕಾಣಬಹುದಾಗಿದೆ.  ಮೂರನೆಯದು ಪುರಾತತ್ತ್ವ ಶಾಸ್ತ್ರದ ಕಲಾಕೃತಿಯಾಗಿದೆ. ಈ ಫೋಟೋಗಳನ್ನು ಶೇರ್ ಮಾಡಿದ ಅನೇಕ ನೆಟ್ಟಿಗರು ಈ ಸಂಶೋಧನೆಗಳು ಮಹಾಭಾರತ ಯುಗಕ್ಕೆ ಸೇರಿದವು ಎಂದು ಹೇಳಿಕೊಂಡಿದ್ದಾರೆ.

ಅನೇಕರು ಈ ಫೋಟೋಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದೂ ನ್ಯೂ ಗ್ಲೋಬಲ್‌ ಪ್ರೆಸ್‌ ಎಂಬ ಫೇಸ್ ಬುಕ್ ಫೇಜ್ ನಿಂದ  ಈ ರೀತಿಯ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ. “ಇದು ಮಹಾಭಾರತ ಕಾಲದ್ದಾಗಿದೆ. ಸುಮಾರು 1,000ದಿಂದ 4000 ವರ್ಷಗಳಷ್ಟು ಹಳೆಯದಾದ ಮರದ ರಥವು ಭಾರತದ ಉತ್ತರ ಪ್ರದೇಶದ ಸನೌಲಿ ಬಳಿ ಕಂಡುಬಂದಿದೆ. ಚಕ್ರಗಳು ತಾಮ್ರದ ದಪ್ಪ ಫಲಕಗಳಿಂದ ಮುಚ್ಚಲ್ಪಟ್ಟಿವೆ. ಅಲ್ಲದೆ ರಥದ ಬಳಿ ತಾಮ್ರದ ಹೆಲ್ಮೆಟ್‌ಗಳು ಪತ್ತೆಯಾಗಿವೆ. ಬಾಚಣಿಗೆ, ಒಂಟೆ, ನವಿಲು ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟ ಕನ್ನಡಿ ಕಂಡುಬಂದಿದೆ. ಈ ಆವಿಷ್ಕಾರವು ಭಾರತೀಯ ಉಪಖಂಡದಲ್ಲಿ ಆರ್ಯರ ಆಕ್ರಮಣದ ಸಿದ್ಧಾಂತದ ಮೇಲಿನ ಚರ್ಚೆಯನ್ನು ತೆರೆದಿಟ್ಟಿದೆ” ಎಂಬ ಹೇಳಿಕೆಯೊಂದಿಗೆ ಫೋಟೋ ವೈರಲ್ ಮಾಡಲಾಗಿದೆ.

ಈ ಪೋಸ್ಟ್ ಗೆ ಸುಮಾರು 3.7k ಲೈಕ್ಸ್ ಬಂದಿವೆ. 2k ಯಷ್ಟು ಶೇರ್ ಆಗಿದೆ.

ವೈರಲ್ ಆಗುತ್ತಿರುವ ಈ  ಹೇಳಿಕೆ ಮತ್ತು ಫೋಟೋಗಳ ನೈಜತೆಯನ್ನು ಖಾತ್ರಿಪಡಿಸಲು ಫ್ಯಾಕ್ಟ್ ಚೆಕ್ ಮಾಡಿದಾಗ ಈ ಫೋಟೋಗಳಲ್ಲಿರುವ ಉತ್ಖನನಗಳು ಚೀನಾ ಮತ್ತು ಅಮೆರಿಕಾಗೆ ಸಂಬಂಧಿಸಿದ್ದಾಗಿವೆ. ಆದರೆ ಒಂದು ಫೋಟೋದಲ್ಲಿರುವುದು ಮಾತ್ರ ಉತ್ತರ ಪ್ರದೇಶದ ಸನೌಲಿಯದ್ದಾಗಿದೆ (ಹಳೆಯ ಹೆಲ್ಮೆಟ್ ನಂತೆ ಕಾಣುವ ಫೋಟೋ ಮಾತ್ರ ) ತಿಳಿದು ಬಂದಿದೆ.


ಇದನ್ನು ಓದಿರಿ: Fact check: RSSನ ಮೋಹನ್ ಭಾಗವತ್ ಜೊತೆ ಓವೈಸಿ ಭೇಟಿ ಎಂಬುದು ಎಡಿಟೆಡ್ ಫೋಟೋ


ಫ್ಯಾಕ್ಟ್ ಚೆಕ್:

ಫೋಟೋ 1 ವೈರಲ್ ಫೋಟೋಗಳ ಚಿತ್ರಗಳನ್ನು  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಪುರಾತತ್ವ ಸಂಶೋಧನೆಗಳ ಕುರಿತು ಸೆಪ್ಟೆಂಬರ್ 2011 ರಲ್ಲಿ ಪ್ರಕಟವಾದ “ಡೈಲಿ ಮೇಲ್” ವರದಿಗಳು ಲಭ್ಯವಾಗಿದ್ದು , ಆ ಲೇಖನದಲ್ಲೂ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗಳೇ ಲಭ್ಯವಾಗಿವೆ.   ಇವು “ಲುವೊಯಾಂಗ್‌ನಲ್ಲಿರುವ ಝೌ ರಾಜವಂಶದ ಸಮಾಧಿಯಿಂದ ಹೊರ ತೆಗೆಯಲಾದ ಸುಮಾರು 3000 ವರ್ಷಗಳಷ್ಟು ಹಳೆಯದಾದ ಕುದುರೆಗಳು ಮತ್ತು ಮರದ ರಥದ ಅವಶೇಷಗಳಾಗಿವೆ” ಎಂದು ವರದಿ ಹೇಳುತ್ತದೆ. “ಈ ಉತ್ಖನನದ ವೇಳೆ ನಾಲ್ಕು ಕುದುರೆ ಮತ್ತು ರಥದ ಹೊಂಡಗಳನ್ನು ಪತ್ತೆಹಚ್ಚಲಾಗಿದೆ. ಇದು 770 ಕ್ರಿ.ಪೂ.ದಷ್ಟು ಹಿಂದಿನದು” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಫೋಟೋದಲ್ಲಿ ಕಾಣುತ್ತಿರುವ ಅವಶೇಷಗಳು 3,000 ವರ್ಷಗಳಷ್ಟು ಹಳೆಯದಾದ ಚೀನೀ ರಾಜವಂಶದ ಸಮಾಧಿಯಲ್ಲಿ ಪತ್ತೆಯಾದ ಕುದುರೆಗಳು ಮತ್ತು ರಥಗಳ ಅವಶೇಷಗಳು. ಇದನ್ನೇ ಭಾರತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಈ  ಮೇಲಿನ ಚಿತ್ರದಲ್ಲಿ ಕಾಣುತ್ತಿರುವ ಪಳೆಯುಳಿಕೆಯು ಸನೌಲಿ 2018 ರಲ್ಲಿ ಕಂಡುಬಂದ ಕಲಾಕೃತಿಯದ್ದಾಗಿದೆ. ಕಂಚಿನ ಯುಗಕ್ಕೆ ಸಂಬಂಧಿಸಿದ ಬಂಡಿ ಎಂದು ಹೇಳಲಾಗುತ್ತಿದೆ. ಇದನ್ನು ಕೆಲವರು ಕುದುರೆ ಎಳೆಯುವ ರಥಗಳು ಎಂದು ವ್ಯಾಖ್ಯಾನಿಸಿದ್ದಾರೆ.

 

ಫೋಟೋ 2: ವೈರಲ್ ಆಗಿರುವ ಹೆಲ್ಮೆಟ್-ಆಕಾರದ ಕಲಾಕೃತಿಗಳ ನಿಜಾಂಶ ತಿಳಿಯಲು ಸರ್ಚ್ ಮಾಡಿದಾಗ ಈ ಚಿತ್ರಗಳನ್ನೇ ಹೋಲುವ ವಸ್ತುವಿನ ಕುರಿತ ಆ ವರದಿ “ಡೆವಿಯಂಟ್ ಆರ್ಟ್” ಎಂಬ ವೆಬ್‌ಸೈಟ್‌ನಲ್ಲಿ ಕಂಡುಬಂದಿದೆ. ಅಲ್ಲಿರುವ ಚಿತ್ರಕ್ಕೆ  “ಎಲಾಮೈಟ್ ಹೆಲ್ಮೆಟ್ ಮತ್ತು ಬೀಕರ್ ಅಟ್ ದಿ ಮೆಟ್” ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಕೀವರ್ಡ್‌ಗಳನ್ನು ಬಳಸಿಕೊಂಡು, ನ್ಯೂಯಾರ್ಕ್‌ನ “ಮೆಟ್ ಮ್ಯೂಸಿಯಂ” ನಲ್ಲಿ ಇರಿಸಲಾಗಿರುವ ಪ್ರಾಚೀನ ಹೆಲ್ಮೆಟ್‌ನ ಮೂಲ ಚಿತ್ರವನ್ನು ಹುಡುಕಲಾಗಿದೆ.

 

ಎರಡೂ ಚಿತ್ರಗಳ ಹೋಲಿಕೆಯು ಒಂದೇ ಹೆಲ್ಮೆಟ್ ಎಂದು ಸ್ಪಷ್ಟಪಡಿಸುತ್ತದೆ..

ಇದು ಸನೌಲಿಯಲ್ಲಿ 2018 ಪತ್ತೆಯಾದ ಹೆಲ್ಮೆಟ್ 

ಆದರೆ ಇಲ್ಲೊಂದು ಟ್ವಿಸ್ಟ್ ಕೂಡ  ಇದೆ. ಅದೇನೆಂದರೆ ಕಪ್ಪು ಹಿನ್ನೆಲೆಯಲ್ಲಿ ಎಡಭಾಗದಲ್ಲಿ ತುಕ್ಕು ಹಿಡಿದಂತೆ ಕಾಣುವ ಹೆಲ್ಮೆಟ್ ನಿಜವಾಗಿಯೂ ಸನೌಲಿಯಲ್ಲಿ ಪತ್ತೆಯಾಗಿದೆ. ಎಎಸ್‌ಐ ಜಂಟಿ ನಿರ್ದೇಶಕ ಮತ್ತು ಸನೌಲಿಯಲ್ಲಿನ ಉತ್ಖನನ ಯೋಜನೆಯ ಮುಖ್ಯಸ್ಥ ಡಾ ಸಂಜಯ್ ಕುಮಾರ್ ಮಂಜುಲ್ ಅವರು ಎಎಫ್‌ಡಬ್ಲ್ಯೂಎಗೆ ಇದನ್ನು ಖಚಿತಪಡಿಸಿದ್ದಾರೆ. “ಬಹುಶಃ ವಿಶ್ವದ ಅತ್ಯಂತ ಹಳೆಯ ಹೆಲ್ಮೆಟ್‌ಗಳಲ್ಲಿ ಇದು ಒಂದಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇವುಗಳು ನ್ಯೂಯಾರ್ಕ್‌ನ ಮೆಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಹೆಲ್ಮೆಟ್‌ ಅನ್ನು ಹೋಲುತ್ತವೆ.

ಆದರೂ ನೆಟ್ಟಿಗರು ಹೇಳಿಕೊಂಡಂತೆ ಈ ಸಂಶೋಧನೆಗಳು ಮಹಾಭಾರತದ ಯುಗದಿಂದ ಬಂದಿವೆ ಎಂಬುದರ  ಬಗ್ಗೆ ಡಾ ಮಂಜುಲ್ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆದರೆ ಇದು ಸುಮಾರು 4,000 ವರ್ಷಗಳಷ್ಟು ಹಳೆಯದು ಎಂದು ಅವರು AFWA ಗೆ ತಿಳಿಸಿದ್ದಾರೆ.

ಸನೌಲಿಯ ಉತ್ಖನನದ ಸಂದರ್ಭದಲ್ಲಿ ಸಿಕ್ಕಿರುವ ವಸ್ತುಗಳ ಮೇಲೆ  ಸಂಶೋಧನೆ ನಡೆಸಿದಾಗ ಅದು ಯೋಧರರು ಬಳಸುವ ಶಿರಸ್ತ್ರಾಣದಂತೆ ಕಂಡುಬಂದಿವೆ. ಇವರು ಸಹ ಮೆಸೊಪಟ್ಯಾಮಿಯನ್ನರಂತೆ,  ರಥಗಳು, ಕತ್ತಿಗಳು ಮತ್ತು ಹೆಲ್ಮೆಟ್‌ಗಳಂತಹ ಒಂದೇ ರೀತಿಯ ವಸ್ತುಗಳನ್ನು ಹೊಂದಿರುವುದು ಕಂಡುಬಂದಿದೆ. ಸನೌಲಿಯಲ್ಲಿ  ಗುರಾಣಿಗಳು, ಟಾರ್ಚ್, ಕಠಾರಿಗಳು, ತಾಮ್ರದ ಮಡಕೆಗಳು, ಬಾಚಣಿಗೆಗಳು ಮತ್ತು ತಾಮ್ರದ ಕನ್ನಡಿಯನ್ನು ಗುರುತಿಸಲಾಗಿದ್ದು, ಆ ಯುಗದಲ್ಲಿ ಅತ್ಯಾಧುನಿಕ ಜೀವನಶೈಲಿ ಇತ್ತು ಎಂಬುದಕ್ಕೆ ಇವು ಕುರುಹುಗಳಾಗಿವೆ” ಎಂದು ಡಾ ಸಂಜಯ್ ಕುಮಾರ್ ಮಂಜುಲ್  ಹೇಳಿದ್ದಾರೆ.

ಸನೌಲಿಯಲ್ಲಿ ಉತ್ಖನನವು 2005 ರಲ್ಲಿ ಪ್ರಾರಂಭವಾಗಿತ್ತು. ದೆಹಲಿಯಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಹಲವಾರು ಸಂಶೋಧನೆಗಳ ನಂತರ ಬೆಳಕಿಗೆ ಬಂದಿತು. ಈ ಪ್ರದೇಶವು ಹೆಚ್ಚೇನು ಪ್ರಸಿದ್ದಿಯಾಗಿರಲಿಲ್ಲ ಉತ್ಖನನದ ನಂತರ ಈ ಪ್ರದೇಶ ಹೆಸರುವಾಸಿಯಾಯಿತು.

ಫೆಬ್ರುವರಿ 2020 ರಲ್ಲಿ “ದಿ ಟೈಮ್ಸ್ ಆಫ್ ಇಂಡಿಯಾ“ದಲ್ಲಿ ಪ್ರಕಟವಾದ ವರದಿಯ ಪ್ರಕಾರ ASI ಇಲ್ಲಿಯವರೆಗೆ ಒಟ್ಟು 126 ಸಮಾಧಿಗಳನ್ನು ಪತ್ತೆಹಚ್ಚಿದ್ದು,  ಬಾಗ್‌ಪತ್ ಜಿಲ್ಲೆಯಲ್ಲಿ ಇರುವ ಸಮಾಧಿಯನ್ನು ಇಲ್ಲಿಯವರೆಗೆ ಭಾರತದಲ್ಲಿ ಪತ್ತೆ ಮಾಡಲಾದ ಅತಿದೊಡ್ಡ  ನೆಕ್ರೋಪೊಲಿಸ್ (ಸಮಾಧಿ) ಎಂದು ಕರೆಯಲಾಗುತ್ತದೆ.

ಕಾರ್ಬನ್ ಡೇಟಿಂಗ್ ಎಂಬ ವೆಬ್‌ಸೈಟ್ ವರದಿ ಪ್ರಕಾರ, “ಭಾರತದಲ್ಲಿ ಯೋಧರ ಬುಡಕಟ್ಟಿನ ಆರಂಭಿಕ ಇತಿಹಾಸ” ಇದಾಗಿದೆ. ಆದರೆ ವೈರಲ್ ಪೋಸ್ಟ್‌ನಲ್ಲಿರುವ ಎಲ್ಲಾ ಚಿತ್ರಗಳು ಸನೌಲಿಯಲ್ಲಿ ಪತ್ತೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೂರು ಚಿತ್ರಗಳಲ್ಲಿ ಒಂದು ಚೀನಾದ್ದು ಮತ್ತೊಂದು ಅಮೆರಿಕಾ ದೇಶದ್ದು ಎಂದು ದೃಢಪಟ್ಟಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ವಾಸ್ತವವಾಗಿ ಉತ್ತರ ಪ್ರದೇಶದ ಸನೌಲಿಯಲ್ಲಿ ಕಂಡುಬಂದಿರುವ ಪಳೆಯುಳಿಕೆಯದಲ್ಲ.

ಕೃಪೆ: ಇಂಡಿಯಾ ಟುಡೆ


ಇದನ್ನು ಓದಿರಿ: Fact check: ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಮದ್ಯದಂಗಡಿ ಮುಂದೆ ಕುಳಿತಿರುವ ಫೋಟೋ ವೈರಲ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights