Fact check: ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಮದ್ಯದಂಗಡಿ ಮುಂದೆ ಕುಳಿತಿರುವ ಫೋಟೋ ವೈರಲ್

ಪಂಜಾಬ್ ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲೆಕ್ಷನ್ ಪಾಲಿಟಿಕ್ಸ್ ಪ್ರಾರಂಭವಾಗಿವೆ. 5 ಜನವರಿ 2022 ರಂದು ಪ್ರಧಾನ ಮಂತ್ರಿಯವರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ನಿಲ್ಲುವಂತಾಗಿದ್ದು, ನಂತರ ನಾನು ಬದುಕಿ ಬಂದೆ ಎಂಬಂತೆ  ಸುದ್ದಿ ಹಬ್ಬಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಮದ್ಯಪ್ರವೇಶಿಸಿದ್ದು ಪಂಜಾಬ್ ನಲ್ಲಿ ರಾಜಕೀಯ ಬಿಸಿ ಏರಲು ಕಾರಣವಾಗಿವೆ.  ಈಗ ಪಂಜಾಬ್‌ಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.

ಫ್ಯಾಕ್ಟ್ ಚೆಕ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಪಂಜಾಬ್ ನಾಯಕ ಭಗವಂತ್ ಮಾನ್ ಮದ್ಯದ ಅಂಗಡಿಯ ಮುಂದೆ ಕುಳಿತಿರುವ ಚಿತ್ರವನ್ನು ಎಡಿಟ್ ಮಾಡಲಾಗಿದೆ ಮತ್ತು ನಕಲಿಯಾಗಿದೆ. ಮೂಲ ಫೋಟೋಗಳಲ್ಲಿ ಈ ಇಬ್ಬರು ನಾಯಕರು ಹಸಿರು ಹೊಲದ ಮುಂದೆ ಕುಳಿತಿದ್ದು, ರೈತರೊಂದಿಗೆ ಮಾತನಾಡುತ್ತಿದ್ದಾರೆ. ಅಲ್ಲಿ ಯಾವ ಮದ್ಯದ ಅಂಗಡಿಯೂ ಇಲ್ಲ, ಆದರೆ ಯಾವುದೋ ಮದ್ಯದಂಗಡಿಯ ಬ್ಯಾಕ್ ಗ್ರೌಂಡ್ ಇಮೇಜ್ ಗೆ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರ ಫೋಟೋವನ್ನು ಸೇರಿಸಲಾಗಿದೆ.  ಫೋಟೋದಲ್ಲಿ, ಕೇಜ್ರಿವಾಲ್ ಮತ್ತು ಮಾನ್ ಮುಚ್ಚಿದ ಮದ್ಯದ ಅಂಗಡಿಯ ಕಡೆಗೆ ಬೆನ್ನು ಮಾಡಿ ಕುಳಿತಿರುವುದನ್ನು ಕಾಣಬಹುದು.

ಒಂದು ವೇಳೆ ಮದ್ಯದ ಅಂಗಡಿ ಮುಂದೆ ಕುಳಿತ್ತಿದ್ದರು ಅದರಲ್ಲಿ ತಪ್ಪೇನಿದೆ, ಅದು ಅಸಂವಿಧಾನಿಕವೇನಲ್ಲ ಅಲ್ಲವೇ? ಆದರೂ ಈ ಫೋಟೋ ಎಡಿಟ್ ಮಾಡಿದೆ ಎಂಬುದು ಸತ್ಯ.

ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 20, 2022 ರಂದು ನಡೆಯಲಿದ್ದು. ಮಾಧ್ಯಮ ವರದಿಗಳ ಪ್ರಕಾರ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಪಂಜಾಬ್ ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸವಾಲೆನ್ನಿಸಿದ್ದು, ಬಹುತೇಕ ಕಡೆ ಪ್ರತಿಸ್ಪರ್ಧಿ ಸ್ಥಾನದಲ್ಲಿದೆ. ಹಾಗಾಗಿ ಈ ರೀತಿ ಅಪಪ್ರಚಾರ ಮಾಡುವಂತಹ ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ ಟ್ವೀಟರ್‌ ಖಾತೆಯಲ್ಲೂ ಈ ಫೋಟೋವನ್ನು ಟ್ವೀಟ್ ಮಾಡಲಾಗಿದೆ.

https://twitter.com/naveenjindalbjp/status/1482717325069791233

ಈ ಫೋಟೋವನ್ನು ದೆಹಲಿಯ ಬಿಜೆಪಿ  ಸಾಮಾಜಿಕ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಮತ್ತು ಪಂಜಾಬ್ ಯೂತ್ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಮೂಲಕ ಟ್ವೀಟ್ ಮಾಡಲಾಗಿದೆ. ಎಡಿಟ್ ಮಾಡಿದ ಫೋಟೋವನ್ನು ಈ ಖಾತೆಗಳಲ್ಲಿ ಶೇರ್‌ ಮಾಡಿರುವುದನ್ನು ಗುರುತಿಸಿದ್ದೇವೆ.

https://twitter.com/IYCPunjab/status/1482762673041588224

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

“ಇಬ್ಬರು ನಾಯಕರು ಸರಿಯಾದ ಜಾಗದಲ್ಲಿ ಕುಳಿತಿದ್ದಾರೆ”  ಎನ್ನುವ ಹೇಳಿಕೆಯೊಂದಿಗೆ ಟ್ವಿಟ್ ಮಾಡಲಾಗಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರು ರೈತರೊಂದಿಗಿರುವ ಫೋಟೋವನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಂಡಿರುವುದು  ಫ್ಯಾಕ್ಟ್ ಚೆಕ್ ಮೂಲಕ ತಿಳಿದು ಬಂದಿದೆ.

ವಾಸ್ತವಾಗಿ ಇಬ್ಬರು ನಾಯಕರು ಪಂಜಾಬ್ ರೈತರೊಂದಿಗೆ ಸಮಾಲೋಚನಾ ಸಭೆಯನ್ನು ಮಾಡುತ್ತಿದ್ದಾರೆ. ಜನವರಿ 14, 2022 ರಂದು ಆಮ್ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದ ಸಭೆಯ ಕಿರು ವೀಡಿಯೊದಲ್ಲಿ, ಕೇಜ್ರಿವಾಲ್ ಮತ್ತು ಮಾನ್ ಅವರು ಸಾಸಿವೆ ಹೊಲದಲ್ಲಿ ಇರಿಸಲಾದ ಹಾಸಿಗೆಯ ಮೇಲೆ ಕುಳಿತು ರೈತರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಗಮನಿಸಬಹುದು.

ಸ್ಕ್ರೀನ್‌ಶಾಟ್‌ ತೆಗೆದುಕೊಂಡ ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾದ ವೀಡಿಯೊವನ್ನು ಸಹ ನಾವು ಪಡೆದುಕೊಂಡಿದ್ದೇವೆ. ಎಎಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. 34 ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ನಾವು ಅದೇ ಸ್ಕ್ರೀನ್‌ಗ್ರಾಬ್ ಅನ್ನು ನೋಡಬಹುದು.

ಹಾಗಾಗಿ ವೈರಲ್ ಫೋಟೋದ ಬ್ಯಾಗ್ರೌಂಡ್ ನಲ್ಲಿ  ಇರುವ ಮದ್ಯದ ಅಂಗಡಿ ಬೇರೆ ಸುದ್ದಿಯದ್ದಾಗಿದೆ. ಹಿಂದಿ ಸುದ್ದಿ ಜಾಲತಾಣ ಔಟ್ಲೆಟ್, ಪ್ರಕಟಿಸಿದ ಸುದ್ದಿಯ ಫೋಟೋವನ್ನು ಇಲ್ಲಿ ತಿರುಚಲಾದ ಪೋಸ್ಟ್‌ಗೆ ಬಳಸಲಾಗಿದೆ. ಈ ವರದಿಯಲ್ಲಿರುವ ಫೋಟೋದಲ್ಲಿ ಅದೇ ಮದ್ಯದ ಅಂಗಡಿಯನ್ನು ನೋಡಬಹುದು. ಹೀಗಾಗಿ ವೈರಲ್‌ ಮಾಡಲಾದ ಪೋಸ್ಟ್‌ ಸುಳ್ಳಾಗಿದೆ.

ಕೃಪೆ:ಬೂಮ್ ಲೈವ್


ಇದನ್ನು ಓದಿರಿ: fact check: ಮುಸ್ಲಿಂ ಯುವಕನಿಂದ ಕಳ್ಳತನ ಎಂದು ನಟಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights